ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿಸಿ ಚೇರ್ ಮನ್ ವೈ ಸಿ ದೇವೇಶ್ವರ್ ನಿಧನ, ಮೋದಿ ಸಂತಾಪ

|
Google Oneindia Kannada News

ನವದೆಹಲಿ, ಮೇ 11: ಐಟಿಸಿ ಗ್ರೂಪ್ ಸಂಸ್ಥೆಯ ಚೇರ್ ಮನ್ ಆಗಿದ್ದ ವೈ ಸಿ ದೇವೇಶ್ವರ್ ಅವರು ಅನಾರೋಗ್ಯದ ಕಾರಣ ಶನಿವಾರ ಬೆಳಿಗ್ಗೆ ಮೃತರಾದರು.

72 ವರ್ಷ ವಯಸ್ಸಿನ ದೇವೇಶ್ವರ್ ಅವರಿಗೆ ಕೆಲ ವರ್ಷಗಳ ಹಿಂದೆ ಕ್ಯಾನ್ಸರ್ ರೋಗವಿರುವುದು ಪತ್ತೆಯಾಗಿತ್ತು. ಆದರೆ ಅವರ ಸಾವಿಗೆ ಅದೇ ಕಾರಣವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಕೆಲ ದಿನಗಳ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಪ್ರೋ ಸಂಸ್ಥೆ ಸಿಬ್ಬಂದಿ ಖಾತೆಗೆ ಕನ್ನ? ಆತಂಕದಲ್ಲಿ ಐಟಿ ಕ್ಷೇತ್ರವಿಪ್ರೋ ಸಂಸ್ಥೆ ಸಿಬ್ಬಂದಿ ಖಾತೆಗೆ ಕನ್ನ? ಆತಂಕದಲ್ಲಿ ಐಟಿ ಕ್ಷೇತ್ರ

ಮೊದಲಿಗೆ ಕೃಷಿ ಸಂಪನ್ಮೂಲಗಳ ಮತ್ತು ತಂಬಾಕು ಉತ್ಪನ್ನಗಳ ತಯಾರಿಕೆಯಲ್ಲಿ ಹೆಸರು ಮಾಡಿದ್ದ ಐಟಿಸಿ, 'ಇಂಪೀರಿಯಲ್ ಟೊಬ್ಯಾಕೋ ಕಂಪನಿ ಆಫ್ ಇಂಡಿಯಾ ಲಿ.', 'ಇಂಡಿಯನ್ ಟೊಬ್ಯಾಕೋ ಕಂಪನಿ ಲಿ.', 'ಐ.ಟಿ.ಸಿ. ಲಿ' ಹೀಗೆ ಆಗಾಗ ಹೆಸರು ಬದಲಿಸಿಕೊಂಡು 2001 ರಲ್ಲಿ ಐಟಿಸಿ ಲಿಮಿಟೆಡ್ ಆಗಿ ಬದಲಾಯಿತು. ತಂಬಾಕು ಉತ್ಪನ್ನಗಳಿಗಷ್ಟೇ ಮೀಸಲಾಗಿದ್ದ ಈ ಕಂಪನಿಯನ್ನು ದೇವೇಶ್ವರ್ ಅವರು ತಮ್ಮ ನೇತೃತ್ವದಲ್ಲಿ ಹೊಟೇಲ್ ಉದ್ಯಮಕ್ಕೆ, ಐಟಿ ಉದ್ಯಮಕ್ಕೆ ಪರಿಚಯಿಸಿದರು.

1991 ರಲ್ಲಿ ಏರ್ ಇಂಡಿಯಾ ಚೇರ್ ಮನ್ ಸಹ ಆಗಿದ್ದ ದೇವೇಶ್ವರ್, 2012 ರಲ್ಲಿ ಆರ್ ಬಿ ಐ ಬೋರ್ಡ್ ಆಫ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

52,500 ಕೋಟಿ ರುಪಾಯಿ ದಾನಕ್ಕೆ ಮುಂದಾದ ಅಜೀಂ ಪ್ರೇಮ್ ಜೀ 52,500 ಕೋಟಿ ರುಪಾಯಿ ದಾನಕ್ಕೆ ಮುಂದಾದ ಅಜೀಂ ಪ್ರೇಮ್ ಜೀ

ಉದ್ಯಮ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿದ ದೇವೇಶ್ವರ್ ಅವರ ಅಗಲಿಕೆಗೆ ಪ್ರಹದನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ನರೇಂದ್ರ ಮೋದಿ

ವೈಸಿ ದೇವೇಶ್ವರ್ ಅವರು ಭಾರತೀಯ ಉದ್ಯಮ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀದಿದ್ದರು. ಜಾಗತಿಕ ಮಟ್ಟದಲ್ಲಿ ಐಟಿಸಿ ಗುರುತಿಸಿಕೊಳ್ಳುವಲ್ಲಿ ಅವರ ಪರಿಶ್ರಮ ಅಗಣಿತ. ಅವರ ನಿಧನದಿಂದ ತೀವ್ರ ನೋವಾಗಿದೆ. ಅವರ ಕುಟುಂಬ, ಬಂಧುಗಳು ಮತ್ತು ಐಟಿಸಿ ಗ್ರೂಪ್ ಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ- ನರೇಂದ್ರ ಮೊದಿ

ಸುರೇಶ್ ಪ್ರಭು

"ವೈ ಸಿ ದೇವೇಶ್ವರ್ ಅವರ ಅಗಲಿಕೆಯಿಂದ ತೀವ್ರ ನೋವಾಗಿದೆ. ತಮ್ಮ ನಾಯಕತ್ವದಲ್ಲಿ ಕಂಪನಿಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ಅವರದು. ಅವರು ನಾಯಕತ್ವಕ್ಕೆ ಒಮದು ಉತ್ತಮ ನಿದರ್ಶನ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ"- ಸುರೇಶ್ ಪ್ರಭು

ವಿಜಯ್ ದರ್ದಾ

"ಇಂದು ನಾನು ಒಬ್ಬ ಉತ್ತಮ ಸ್ನೇಹಿತ, ಸಲಹೆಗಾರರನ್ನು ಕಳೆದುಕೊಂಡೆ. ನಾವು ಹಲವು ವಿಷಯಗಳನ್ನು ಹಂಚಿಕೊಂಡಿದ್ದೇವೆ. ಅದರಲ್ಲಿ ನಮಗೆ ಹೋಮಿಯೋಪಥಿಯಲ್ಲಿ ಇರುವ ಆಸಕ್ತಿಯೂ ಒಂದು. ನನ್ನ ಹೃದಯಕ್ಕೆ ಎಂದಿಗೂ ಹತ್ತಿರವಾಗಿರುವ ಉತ್ತಮ ಸ್ನೇಹಿತ ದೇವೇಶ್ವರ್. ನಾನು ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ"

ಅಶ್ವಿನಿ ಮಾಹಾಜನ್

"ಐಟಿಸಿಯನ್ನು ಉತ್ತುಂಗಕ್ಕೇರಿಸುವಲ್ಲಿ ಪಣತೊಟ್ಟ ಕಾರ್ಪೋರೇಟ್ ಜಗತ್ತಿನ ನಕ್ಷತ್ರ ವೈ ಸಿ ದೇವೇಶ್ವರ್. ಕ್ಯಾನ್ಸರ್ ನಿಂದ ಬಹುಕಾಲ ಹೋರಾಡಿ ಸ್ವರ್ಗ ಸೇರಿದ್ದಾರೆ. ಅವರ ಕೊಡುಗೆ ಅವೀಸ್ಮರಣೀಯ. ಅವರಿಗೆ ಮತ್ತು ಐಟಿಸಿ ಕುಟುಂಬಕ್ಕೆ ನನ್ನ ಸಂತಾಪಗಳು"- ಅಶ್ವಿನಿ ಮಹಾಜನ್

English summary
ITC chairman YC Deveshwar passed away on May 11th morning due to health issues. He was 72 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X