13 ಕಡೆ ಐಟಿ ದಾಳಿ, 200 ಕೋಟಿ ರೂ. ಅಕ್ರಮ ವಿದೇಶ ಆಸ್ತಿ ಪತ್ತೆ
ನವದೆಹಲಿ, ಜುಲೈ 29: ದೇಶದ ಮೂರು ರಾಜ್ಯಗಳ 13 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಹಿರಂಗಪಡಿಸದ 200 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿದೇಶ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.
ದೆಹಲಿ, ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿನ 13 ಕಡೆಗಳಲ್ಲಿ ದಾಳಿಗಳನ್ನು ನಡೆಸಿದ್ದು, ಜವಾಬ್ದಾರಿಯುತ ರಾಜಕೀಯ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳು ಭಾಗಿಯಾಗಿರುವ ಸಮೂಹವೊಂದು ಕನಿಷ್ಠ 30 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದನ್ನು ಕೂಡ ಕಂಡುಹಿಡಿದಿದ್ದಾರೆ.
'ದಶಕಗಳಿಂದ ನೆರೆಯ ರಾಜ್ಯದಲ್ಲಿ ಮಹತ್ವದ ರಾಜಕೀಯ ಅಸ್ತಿತ್ವ ಹೊಂದಿರುವ ವ್ಯಕ್ತಿಗಳಿಂದ ನಿಯಂತ್ರಣಕ್ಕೆ ಒಳಪಟ್ಟಿರುವ ಮತ್ತು ಜವಾಬ್ದಾರಿಯುತ ರಾಜಕೀಯ ಸ್ಥಾನವನ್ನು ಹೊಂದಿರುವ ವ್ಯಕ್ತಿಗಳು ಹಲವು ದಶಕಗಳಿಂದ ಭಾರಿ ಮೊತ್ತದ ಬಹಿರಂಗಪಡಿಸದ ಆದಾಯವನ್ನು ಸೃಷ್ಟಿಸುತ್ತಿದ್ದಾರೆ' ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಅದು ಆ ರಾಜಕಾರಣಗಳ ಹೆಸರನ್ನು ಬಹಿರಂಗಪಡಿಸಿಲ್ಲ.

ಜುಲೈ 23ರಂದು 'ಸಮೂಹವೊಂದರ' ಮೇಲೆ ದಾಳಿಗಳು ನಡೆದಿದ್ದು, ಚರ ಅಸ್ತಿ ವರ್ಗಾವಣೆ ಮತ್ತು ನಿರ್ಮಾಣದ ವಿಚಾರದಲ್ಲಿ ಭಾರಿ ಮೊತ್ತದ ಬಹಿರಂಗಪಡಿಸದ ಹಣದ ವ್ಯವಹಾರ ನಡೆದಿರುವುದಕ್ಕೆ ಪುರಾವೆಗಳು ಸಿಕ್ಕಿದೆ. ತೆರಿಗೆದಾರರ ಸ್ವರ್ಗವಾಗಿರುವ ವಿದೇಶಗಳಲ್ಲಿನ ವಿದೇಶಿ ಟ್ರಸ್ಟ್/ಕಂಪೆನಿಗಳ ಹೆಸರಿನಲ್ಲಿ ಇರುವ ಭಾರಿ ಆಸ್ತಿಗಳ ಮೂಲಕ ವಿವಿಧ ಮಾರ್ಗಗಳಲ್ಲಿ ಭಾರತದಲ್ಲಿ ಕಪ್ಪುಹಣವನ್ನು ಸೃಷ್ಟಿಸಲಾಗುತ್ತಿತ್ತು' ಎಂದು ಹೇಳಲಾಗಿದೆ.
ಈ ಪ್ರಮುಖ ವ್ಯಕ್ತಿಗಳು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್, ಪನಾಮಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುಎನ್‌ಎ ಸೇರಿದಂತೆ ವಿಭಿನ್ನ ದೇಶಗಳಲ್ಲಿ ಅನೇಕ ದಶಕಗಳಿಂದ ನಾನಾ ಹಂತದ ವ್ಯವಸ್ಥೆಯಲ್ಲಿ ವ್ಯವಹಾರ ನಡೆಸುವ ಮೂಲಕ ತಮ್ಮ ಪಾಲ್ಗೊಳ್ಳುವಿಕೆಯನ್ನು ಗುಟ್ಟಾಗಿ ಇರಿಸಿದ್ದರು.
ವಿವಿಧ ಖಂಡಗಳಲ್ಲಿ ಎಲ್ಲಡೆ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೂಲಕ ಈ ಕಂಪೆನಿಗಳು ಕೆಲಸ ಮಾಡುತ್ತಿದ್ದವು. ಈ ವ್ಯಕ್ತಿಗಳ ಪೈಕಿ ಒಬ್ಬಾತ ಕೆರೆಬಿಯನ್ ಐಲ್ಯಾಂಡ್‌ನ ಪೌರತ್ವ ಪಡೆದುಕೊಳ್ಳಲು ಪ್ರಯತ್ನಿಸಿರುವುದು ತಿಳಿದುಬಂದಿದೆ ಎಂದು ಹೇಳಿಕೆ ತಿಳಿಸಿದೆ.












Click it and Unblock the Notifications