ದಿ ಕ್ವಿಂಟ್ ಮಾಲೀಕ ರಾಘವ್ ಮನೆ ಮೇಲೆ ಐಟಿ ದಾಳಿ

ನವದೆಹಲಿ, ಅಕ್ಟೋಬರ್ 11 : ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥ ರಾಘವ್ ಬಾಲ್ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿದೆ. ರಾಘವ್ ಬಾಲ್ ಅವರು ಮುಂಬೈನಲ್ಲಿದ್ದು, ದೆಹಲಿಗೆ ವಾಪಸ್ ಆಗುತ್ತಿದ್ದಾರೆ.

ಗುರುವಾರ ಬೆಳಗ್ಗೆ ನೋಯ್ಡಾದಲ್ಲಿರುವ The Quint ಕಚೇರಿ ಮತ್ತು ರಾಘವ್ ಬಾಲ್ ಅವರ ನಿವಾಸದ ಮೇಲೆ 12ಕ್ಕೂ ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಎಡಿಟರ್ ಗೈಡ್‌ಗೆ ರಾಘವ್ ಬಾಲ್ ಅವರು ಹೇಳಿಕೆ ನೀಡಿದ್ದು, 'ನಾನು ಮುಂಬೈನಲ್ಲಿದ್ದೇನೆ. ಡಜನ್‌ಗೂ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾನು ದೆಹಲಿಗೆ ವಾಪಸ್ ಆಗುತ್ತಿದ್ದೇನೆ' ಎಂದು ಹೇಳಿದ್ದಾರೆ.

IT raid on The Quint Raghav Bahl home and office

'ನಾವು ಯಾವುದೇ ತರಿಗೆ ವಂಚನೆ ಮಾಡಿಲ್ಲ. ಸರಿಯಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುತ್ತೇನೆ' ಎಂದು ತಿಳಿಸಿದ್ದಾರೆ.

'ದಿ ಕ್ವಿಂಟ್ ಕಚೇರಿಯಲ್ಲಿರುವ ಯಾವುದೇ ದಾಖಲೆ, ಈ ಮೇಲ್‌ಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸದಂತೆ ತಡೆಯಬೇಕು ಎಂದು ಅವರು ಕಚೇರಿಯಲ್ಲಿನ ಸಿಬ್ಬಂದಿಗೆ ಸೂಚಿಸಿದ್ದಾರೆ. ಯಾವುದೇ ದಾಖಲಾತಿಗಳ ಫೋಟೋಗಳನ್ನು ತೆಗೆಯದಂತೆ ನೋಡಿಕೊಳ್ಳಿ' ಎಂದು ಹೇಳಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆ ಐಟಿ ದಾಳಿ ಬಗ್ಗೆ ಮಾಹಿತಿ ನೀಡಿದ್ದು, ನೋಯ್ಡಾ ಸೇರಿದಂತೆ ವಿವಿಧ ಪ್ರದೇಶದಲ್ಲಿ ದಾಳಿ ನಡೆದಿದೆ. ರಾಘವ್ ಬಾಲ್ ಮಾಧ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ದಿ ಕ್ವಿಂಟ್ ಮತ್ತು ನೆಟ್‌ವರ್ಕ್ 18 ಗ್ರೂಪ್‌ನ ಸಂಸ್ಥಾಪಕರು ಅವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+