ಭಾರತದ ಆರ್ಥಿಕತೆಗೆ ಸಿಕ್ಕ ಜಾಗತಿಕ ಮನ್ನಣೆ ಮೂಡೀಸ್ ರೇಟಿಂಗ್ : ಜೇಟ್ಲಿ

ನವದೆಹಲಿ, ನವೆಂಬರ್ 17: ಭಾರತದ ಆರ್ಥಿಕ ಸ್ಥಿತಿಯನ್ನು ಮೇಲ್ದರ್ಜೆಗೇರಿಸಿ ಬಂದಿರುವ ಮೂಡೀಸ್ ರೇಟಿಂಗ್ ಅನ್ನು ಸ್ವಾಗತಿಸಿರುವ ಅರುಣ್ ಜೇಟ್ಲಿ, ಕಳೆದ ಕೆಲ ವರ್ಷಗಳಿಂದ ತೆಗೆದುಕೊಂಡ ಸಕಾರಾತ್ಮಕ ನಡೆಗಳನ್ನು ತಡವಾಗಿ ಗುರುತಿಸಲಾಗಿದೆ ಎಂದು ಹೇಳಿದರು.

ಭಾರತದ ಆರ್ಥಿಕ ಸ್ಥಿತಿಯು ಉತ್ತಮವಾಗಿದೆ ಎಂದು ಮೇಲ್ದರ್ಜೆಗೇರಿಸಿ, ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಮೂಡೀಸ್ ಮಾಡಿರುವ ಮೌಲ್ಯಮಾಪನದ ಬಗ್ಗೆ ಅವರು ಶುಕ್ರವಾರ ಮಾತನಾಡಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಗತಿಯ ಹಾದಿಯಲ್ಲಿರುವ ಭಾರತದ ಆರ್ಥಿಕತೆಗೆ ದೊರೆತ ಮಾನ್ಯತೆ ಇದು ಎಂದು ಅವರು ಹೇಳಿದರು.

It is encouraging that there is an international recognition for Indian economy: Jaitley

ಈ ಮೂಲಕ ಅಂತರರಾಷ್ಟ್ರೀಯ ಮನ್ನಣೆ ದೊರೆತಿದೆ. ಭಾರತದ ಆರ್ಥಿಕತೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಡಿಜಿಟಲ್ ಆಗಿ ರೂಪಿಸುತ್ತೇವೆ. ಜಾಗತಿಕ ಮಟ್ಟದಲ್ಲಿ ನಮ್ಮ ನಡೆಯನ್ನು ಮೆಚ್ಚಿದ್ದಾರೆ ಎಂದರು.

ಭಾರತದ ಸುಧಾರಣೆ ಬಗ್ಗೆ ಯಾರಿಗೆ ತಮ್ಮ ಮನಸ್ಸಿನಲ್ಲಿ ಅನುಮಾನಗಳಿದ್ದವೋ ಅಂಥವರು ತಮ್ಮ ಸ್ಥಿತಿಯನ್ನೇ ಮತ್ತೊಮ್ಮೆ ಪರಾಮರ್ಶಿಸಿಕೊಳ್ಳಬೇಕಿದೆ. ಕಳೆದ ಮೂರು ವರ್ಷದಲ್ಲಿನ ನಮ್ಮ ದಾಖಲೆಯನ್ನು ಗಮನಿಸಿದರೆ, ಆರ್ಥಿಕ ಶಿಸ್ತಿನ ವಿಚಾರದಲ್ಲಿ ದೇಶದ ಇತಿಹಾಸದಲ್ಲೇ ಸ್ಮರಣೀಯವಾದದ್ದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+