ಪ್ರವಾಹಕ್ಕಿಂತ ರ್ಯಾಲಿಯೇ ದೊಡ್ಡದಾಯ್ತೇ? ಲಾಲೂಗೆ ಪಾಸ್ವಾನ್ ಪ್ರಶ್ನೆ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 28: ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮನೆಮಾಡಿದ್ದರೆ ಇತ್ತ ಆರ್ ಜೆಡಿ ಸೇರಿದಂತೆ ಬಿಜೆಪಿ-ಜೆಡಿಯು ವಿರೋಧಿ ನಾಯಕರು ಮಾತ್ರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಸರ್ವನಾಶ ಇಲ್ಲಿಂದಲೇ, ಈ ಕ್ಷಣದಿಂದಲೇ ಆರಂಭ: ಲಾಲೂ

ಆಗಸ್ಟ್ 27 ರಂದು ಬಿಹಾರದ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಆರ್ ಜೆಡಿ ಮತ್ತು ಇತರೆ ಬಿಜೆಪಿ ವಿರೋಧಿ ಪಕ್ಷಗಳು ಆಯೋಜಿಸಿದ್ದ 'ದೇಶ್ ಬಚಾವೋ, ಬಿಜೆಪಿ ಭಗಾವೋ' ರ್ಯಾಲಿಯ ಕುರಿತು ಮಾತನಾಡಿದ ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್, 'ಬಿಹಾರ ರಾಜ್ಯ ಪ್ರವಾಹದಲ್ಲಿ ತತ್ತರಿಸಿರುವಾಗ ಇಂಥದೊಂದು ರ್ಯಾಲಿ ಅನಗತ್ಯವಲ್ಲವೇ' ಎಂದು ಪ್ರಶ್ನಿಸಿದ್ದಾರೆ.

Is rally necessary in flood situation in Bihar? Paswan asks Lalu Yadav

'ಬಿಜೆಪಿ ವಿರುದ್ಧ ರ್ಯಾಲಿ ಮಾಡುತ್ತಿರುವ ಲಾಲೂ ಪ್ರಸಾದ್ ಯಾದವ್ ಅವರಿಗೆ ನೆನಪಿರಲಿ, ಬೇನಾಮಿ ಆಸ್ತಿಯ ದಾಖಲೆ ಹೊರಬಂದಿದ್ದು ಲಾಲೂ ಅವರದ್ದೇ ವಿನಃ ಬಿಜೆಪಿಯದಲ್ಲ. ಮೊದಲು ಬಿಹಾರದ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಸಂತ್ರಸ್ತರಿಗೆ ನೆರವು ನೀಡಲು ಏನು ಮಾಡಬೇಕೆಂದು ಯೋಚಿಸಿ. ರ್ಯಾಲಿ ಎಲ್ಲ ಆಮೇಲಿರಲಿ' ಎಂದು ಅವರು ಕುಟುಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Rally is unnecessary, especially at a time when the situation in Bihar is alarming due to rain and flood" Union Food minister Ram Vilas Paswan reacted to RJD and anti BJP parties' rally in Bihar capital Patna on 27th Aug.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ