Video: 104 ವರ್ಷದ ವೃದ್ಧೆಗೆ ನಾರಿಶಕ್ತಿ ಪುರಸ್ಕಾರ; ಅಜ್ಜಿ ಸ್ಟೆಪ್

ನವದೆಹಲಿ, ಮಾರ್ಚ್.08: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ 104 ವರ್ಷದ ಹಿರಿಯ ವೃದ್ಧೆಗೆ ವಿಶೇಷ ಗೌರವ ಅರ್ಪಿಸಲಾಯಿತು. ಮನ್ ಕೌರ್ ಎಂಬುವವರಿಗೆ ಕೇಂದ್ರ ಸರ್ಕಾರವು ನಾರಿಶಕ್ತಿ ಪುರಸ್ಕಾರ ನೀಡಿ ಗೌರವಿಸಿದೆ.

ಕ್ರೀಡಾ ರಂಗದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ಪುರಸ್ಕೃತರ ಪಟ್ಟಿಗೆ ಮನ್ ಕೌರ್ ಹೆಸರನ್ನು ಸೇರ್ಪಡೆಗೊಳಿಸಲಾಯಿತು. ಭಾನುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಮನ್ ಕೌರ್ ಅವರಿಗೆ ರಾಷ್ಟ್ರಪತಿ ರಾಮನ್ ನಾಥ್ ಕೋವಿಂದ್, ನಾರಿಶಕ್ತಿ ಪುರಸ್ಕಾರವನ್ನು ನೀಡಿ ಗೌರವಿಸದರು.

 International Womens Day Special: 104-Years Old Women Get Nari Shakti Puraskar

ಮೋದಿಯ ಗೌರವವನ್ನು ತಿರಸ್ಕರಿಸಿದ 8 ವರ್ಷದ ಬಾಲಕಿ

ಇನ್ನು, ಮನ್ ಕೌರ್ ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ 30 ಪದಕಗಳನ್ನು ಪಡೆದಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ, ವಿಶೇಷವಾಗಿ ದುರ್ಬಲ ಮತ್ತು ನಿರ್ಲಕ್ಷಿತ ಮಹಿಳೆಯರ ಅಸಾಧಾರಣ ಕಾರ್ಯವನ್ನು ಗುರುತಿಸಿ ವ್ಯಕ್ತಿ, ಗುಂಪು ಹಾಗೂ ಸಂಘ ಸಂಸ್ಥೆಗಳಿಗೆ ನಾರಿಶಕ್ತಿ ಪುರಸ್ಕಾರವನ್ನು ನೀಡಲಾಗುತ್ತದೆ.

ನಾರಿಶಕ್ತಿ ಪುರಸ್ಕೃತರೊಂದಿಗೆ ಪ್ರಧಾನಮಂತ್ರಿ ಸಂವಾದ:

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಾರಿಶಕ್ತಿ ಪುರಸ್ಕಾರವನ್ನು ಪಡೆದ ಗಣ್ಯರ ಜೊತೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ನವದೆಹಲಿಯ ಲೋಕ ಕಲ್ಯಾಣ ಮಾರ್ಗ್ ನಲ್ಲಿ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+