"ಕುಲಭೂಷಣ್ ಕುರಿತ ತೀರ್ಪು, ಕೋಟ್ಯಂತರ ಭಾರತೀಯರ ಜಯ"
ನವದೆಹಲಿ, ಜುಲೈ 17: ಬೇಹುಗಾರಿಕೆಯ ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧಿತರಾಗಿ,ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಕುಲಭೂಷಣ್ ಯಾದವ್ ಅವರ ಮರಣದಂಡನೆಯನ್ನು ಅಮಾನತು ಪಡಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪನ್ನು ಭಾರತ ಸ್ವಾಗತಿಸಿದೆ.
ಇದು ಕೋಟ್ಯಂತರ ಭಾರತೀಯರಿಗೆ ಸಿಕ್ಕ ಗೆಲುವು ಎಂದು ನಾಯಕರು ಕೊಂಡಾಡಿದ್ದಾರೆ.
ಕುಲಭೂಷಣ್ ಜಾಧವ್ ಅವರು ಭಾರತ 'ರಾ' ಏಜೆಂಟ್ ಆಗಿದ್ದು, ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿ ಪಾಕಿಸ್ತಾನ ಅವರನ್ನು ಬಂಧಿಸಿತ್ತು. ನಂತರ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಭಾರತದ ಮಾಜಿ ನೌಕಾಪಡೆ ಅಧಿಕಾರಿಯಾಗಿದ್ದ ಜಾಧವ್ ಅವರನ್ನು 2016 ರ ಮಾರ್ಚ್ 3 ರದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು.
ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಪಾಕಿಸ್ತಾನದ ನಡೆಯನ್ನು ವಿರೋಧಿಸಿ ಭಾರತ ನೆದರ್ಲೆಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ವಾದ ವಿವಾದ ಆಲಿಸಿಸದ ನ್ಯಾಯಾಲಯ ಜಾಧವ್ ಅವರ ಗಲ್ಲುಶಿಕ್ಷೆಯನ್ನು ಅಮಾನತು ಮಾಡುವ ಮೂಲಕ ಭಾರತ ನಿರಾಳವಾಗುವಂತೆ ಮಾಡಿದೆ. ಭಾರತದ ಪರ ನ್ಯಾ. ಹರೀಶ್ ಸಾಳ್ವೆ ಅವರು ವಾದ ಮಂಡಿಸಿದ್ದರು.
ಅಂತಾರಾಷ್ಟ್ರೀಯ ನ್ಯಾಯಾಲಯದ ಈ ತೀರ್ಪನ್ನು ಭಾರತದ ಕೋಟ್ಯಂತರ ಜನ ಸ್ವಾಗತಿಸಿದ್ದು, ಇದು ಭಾರತಕ್ಕೆ ಸಿಕ್ಕ ಜಯ ಎಂದು ಕೊಂಡಾಡಿದ್ದಾರೆ.

ಚಂದ್ರಬಾಬು ನಾಯ್ಡು
ಕುಲಭೂಷಣ್ ಜಾಧವ್ ಅವರ ಗಲ್ಲುಶಿಕ್ಷೆಯನ್ನು ಅಮಾನತು ಮಾಡಿದ ಐಸಿಜೆ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಈ ಸಂತಸದ ಸಮಯದಲ್ಲಿ ಕೋಟ್ಯಂತರ ಭಾರತೀಯರ ಸಂಭ್ರಮದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರನ್ನು ವಾಪಸ್ ತಾಯ್ನಾಡಿಗೆ ಕರೆತರುವಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಬೇಕು, ಜೈ ಹಿಂದ್- ಚಂದ್ರಬಾಬು ನಾಯ್ಡು, ಟಿಡಿಪಿ ಮುಖಂಡ

ಪ್ರಲ್ಹಾದ್ ಜೋಷಿ
ತೀರ್ಪಿನ ಮೂಲಕ ಪಾಕಿಸ್ತಾನ ಕಾನ್ಸುಲರ್ ಭೇಟಿಗೆ ಅವಕಾಶ ನೀಡುವಂತೆ ಸೂಚಿಸಿದ ಅಂತಾರಾಷ್ಟ್ರೀಯ ನ್ಯಾಯಲಯದ ತೀರ್ಪು ಸ್ವೀಕಾರಾರ್ಹ. ಇದು ಭಾರತಕ್ಕೆ ಸಂದ ಬಹುದೊಡ್ಡ ರಾಜತಾಂತ್ರಿಕ ಗೆಲುವು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನಮ್ಮ ವಿದೇಶಂಗ ಸಚಿವಾಲಯದ ಕೊಡುಗೆಯನ್ನು ನಾನು ಸ್ಮರಿಸುತ್ತೇನೆ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ- ಪ್ರಲ್ಹಾದ್ ಜೋಡಿ, ಸಂಸದೀಯ ವ್ಯವಹಾರಗಳ ಸಚಿವ.

ಶಿವ್ ಅರೋರ
ಪಾಕಿಸ್ತಾನ ಆತ್ಮವೇ ಇಲ್ಲದ ದೇಶ ಎಬುದನ್ನು ಎಂದಿಗೂ ಮರೆಯದಿರಿ. ಅದಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಗಳು ಕೇಳಿಸುವುದಿಲ್ಲ. ಮುಂದೊಮ್ಮೆ ಸರಬ್ಜಿತ್ ಮಾಡಿದಂತೆ ಕುಲಭೂಷಣ್ ಅವರನ್ನೂ ಜೊಂದರೆ ಏನು ಕತೆ ಎಂದು ಕೇಳಿದ್ದಾರೆ.

ಬಿ ಎಸ್ ಯಡಿಯೂರಪ್ಪ
ಪಾಕಿಸ್ತಾನದ ವಿಚಿತ್ರ ವಾದಗಳಿಗೆ ಐಸಿಜೆ ಸೊಪ್ಪು ಹಾಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಯೋಚಿಸದೆ ಇದ್ದಲ್ಲಿ ಇಂದು ಕುಲಭೂಷಣ್ ಜಾಧವ್ ಅವರ ತೀರ್ಪು ಭಾರತದ ಪರವಾಗಿ ಬರುತ್ತಿರಲಿಲ್ಲ. ಭಾರತಕ್ಕೆ ನ್ಯಾಯ ದೊರಕುವಂತೆ ಮಾಡಿದ ಎಲ್ಲ ವಕೀಲರಿಗೂ ಆದರಲ್ಲೂ, ಹರೀಶ್ ಸಾಳ್ವೆ ಅವರಿಗೆ ಧನ್ಯವಾದಗಳು- ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ.

ರಣದೀಪ್ ಸುರ್ಜೇವಾಲಾ
ಕುಲಭೂಷಣ್ ಜಾಧವ್ ಕುರಿತು ಐಸಿಜೆ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಮತ್ತು ಸಂಭ್ರಮಿಸುತ್ತೇವೆ. ಸತ್ಯಮೇವ ಜಯತೆ. ಆದರೆ ಜಾಧವ್ ಪ್ರಕರಣವನ್ನು ಮರುಪರಿಶೀಲಿಸುವಂತೆ ಅದು ಪಾಕಿಸ್ತಾನಕ್ಕೆ ಸೂಚಿಸಿದೆ. ಇದರಿಂದ ಜಾಧವ್ ಅವರಿಗೆ ಮತ್ತೆ ಅನ್ಯಾಯವಾಗಬಹುದು- ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ












Click it and Unblock the Notifications