ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ವಿಸ್ತರಣೆ: ಮೇ 3ರ ತನಕ ರೈಲ್ವೆ, ವಿಮಾನ ಪ್ರಯಾಣ ರದ್ದು

|
Google Oneindia Kannada News

ದೆಹಲಿ, ಏಪ್ರಿಲ್ 14: ಮೇ 3ರ ತನಕ ದೇಶಾದ್ಯಂತ ಲಾಕ್‌ಡೌನ್‌ ವಿಸ್ತರಣೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಬಳಿಕ, ರೈಲ್ವೆ ಇಲಾಖೆ, ವಿಮಾನಯಾನ, ಮೆಟ್ರೋ ವಿಭಾಗ ತನ್ನ ನಿಲುವು ಪ್ರಕಟಿಸಿದೆ.

ಏಪ್ರಿಲ್ 14 ರಂದು ಲಾಕ್‌ಡೌನ್‌ ಅಂತ್ಯವಾಗಲಿದೆ ಎಂಬ ನಿರೀಕ್ಷೆಯಿಂದ ರೈಲ್ವೆ, ಏರ್‌ಲೈನ್ಸ್‌ಗಳಲ್ಲಿ ಏಪ್ರಿಲ್ 15ರ ನಂತರದ ಪ್ರಯಾಣಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶ ಮಾಡಿಕೊಡಲಾಗಿತ್ತು.

Indian Railways Extends Suspension Of Its Passenger Services Till May 3

ಇದೀಗ, ಮೇ 3 ತನಕ ಭಾರತೀಯ ರೈಲ್ವೆ ಸಾರ್ವಜನಿಕ ಸೇವೆ ನೀಡುತ್ತಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿರುವ ಹಣವನ್ನು ಹಿಂತಿರುಗಿಸುತ್ತೇವೆ ಎಂದು ಘೋಷಿಸಿದೆ.

ಅದೇ ರೀತಿ ಯಾವುದೇ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕವಾಗಿ ವಿಮಾನ ಸಾರ್ವಜನಿಕ ಸೇವೆ ನೀಡುವುದಿಲ್ಲ ಎಂದು ಪ್ರಕಟಿಸಿದೆ. ಮೆಟ್ರೋ ಪ್ರಯಾಣ ಕೂಡ ಇರುವುದಿಲ್ಲ.

ಅಗತ್ಯ ಸೇವೆಗಳಿಗಾಗಿ ಮತ್ತು ಸರಕು ಸಾಗಣಿಕೆಗಳನ್ನು ಸರಬರಾಜು ಮಾಡುವ ಉದ್ದೇಶದಿಂದ ಕೆಲವೇ ಕೆಲವು ರೈಲ್ವೆ ಮತ್ತು ವಿಮಾನಗಳು ಚಾಲ್ತಿಯಲ್ಲಿರುತ್ತೆ ಎಂದು ಕೇಂದ್ರ ಇಲಾಖೆ ಈ ಹಿಂದೆಯೇ ತಿಳಿಸಿತ್ತು.

English summary
Indian Railways, international and domestic flights extends suspension of its passenger services till May 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X