ಬ್ರಿಕ್ಸ್ ವಿವಿಗಳಲ್ಲಿ 5ನೇ ಸ್ಥಾನ ಗಳಿಸಿದ ಐಐಎಸ್ ಸಿ

ನವದೆಹಲಿ, ಜುಲೈ, 09 : ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಬ್ರಿಕ್ಸ್ ವಿಶ್ವವಿದ್ಯಾಲಯಗಳ ಪೈಕಿ 5ನೇ ಸ್ಥಾನ ಪಡೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಪೈಕಿ ಇದು ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ.

ಅಂತಾರಾಷ್ಟ್ರೀಯ ಮಾನ್ಯತಾ ಸಂಸ್ಥೆಯೊಂದು ಸಮೀಕ್ಷೆ ನಡೆಸಿ ಬ್ರಿಕ್ಸ್​ನ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿದೆ. ಸಂಸ್ಥೆ ತನ್ನ ವರದಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಚೀನಾದ ತ್ಸಿನ್​ಗುವಾ ವಿಶ್ವವಿದ್ಯಾಲಯ, ಪೀಕಿಂಗ್ ವಿಶ್ವವಿದ್ಯಾಲಯ ಮತ್ತು ಫುಡಾನ್ ವಿಶ್ವವಿದ್ಯಾಲಯ ಅನುಕ್ರಮವಾಗಿ ಮೊದಲ 3 ಸ್ಥಾನಗಳನ್ನು ಹಂಚಿಕೊಂಡಿವೆ[ಇದೇನಪ್ಪಾ ಇದು... ನಗು ಕಲಿಯೋಕೂ ಬಂತು ವಿಶ್ವವಿದ್ಯಾಲಯ]

Indian Institution of Science Bangalore had taken 5th place.

ಈ 3 ವಿಶ್ವವಿದ್ಯಾಲಯಗಳು ಸೇರಿದಂತೆ ಅಗ್ರ 10 ವಿಶ್ವವಿದ್ಯಾಲಯಗಳ ಪೈಕಿ ಚೀನಾದ ಒಟ್ಟು 7 ವಿಶ್ವವಿದ್ಯಾಲಯಗಳು ಇರುವುದು ಗಮನಾರ್ಹವಾಗಿದೆ. ಅಗ್ರ 50 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಚೀನಾದ 25 ವಿಶ್ವವಿದ್ಯಾಲಯಗಳು ಕಾಣಿಸಿಕೊಂಡಿವೆ.

ಬೆಂಗಳೂರಿನ ಐಐಎಸ್ ಸಿಯ ಬೋಧನಾ ವರ್ಗದ ಅನುಪಾತಕ್ಕೆ ಹೋಲಿಸಿದರೆ ಅಲ್ಲಿ ಅತಿ ಹೆಚ್ಚು ಪೇಪರ್​ಗಳು ಸಲ್ಲಿಕೆಯಾಗಿವೆ. ಜೊತೆಗೆ ಜಾಗತಿಕ ಮಟ್ಟದಲ್ಲಿರುವ ಪ್ರಖ್ಯಾತಿ, ಅಂತಾರಾಷ್ಟ್ರೀಕರಣ, ಬೋಧನಾ ವರ್ಗದವರ ಮಟ್ಟ ಮತ್ತು ಸಂಶೋಧನೆಯಿಂದಾಗುವ ಪರಿಣಾಮ ಸೇರಿದಂತೆ ಸುಮಾರು 8 ಅಂಶಗಳ ಮೌಲ್ಯಮಾಪನದಲ್ಲಿ ಅತಿ ಹೆಚ್ಚು ಅಂಕಗಳು ಬಂದಿರುವ ಕಾರಣ ಅದಕ್ಕೆ 5ನೇ ಸ್ಥಾನ ದೊರೆತಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯ ವರದಿ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+