ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶ್ರೀಲಂಕಾದಂತೆ ಭಾರತಕ್ಕೂ ಆರ್ಥಿಕ ಬಿಕ್ಕಟ್ಟು': ರಾಹುಲ್ ಗಾಂಧಿ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಏ.8: ಕಳೆದ 2-3 ವರ್ಷಗಳಲ್ಲಿ ಮಾಧ್ಯಮಗಳು, ಸಂಸ್ಥೆಗಳು, ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಸತ್ಯವನ್ನು ಮರೆಮಾಚಿವೆ. ನಿಧಾನವಾಗಿ ಸತ್ಯ ಹೊರಬರಲಿದೆ. ಶ್ರೀಲಂಕಾದಂತಹ ಪರಿಣಾಮಗಳನ್ನು ಭಾರತ ಎದುರಿಸಲಿದೆ, ಸರ್ಕಾರವು ವಾಸ್ತವವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು ಭಾರತಕ್ಕೂ ಇದೇ ಪರಿಸ್ಥಿತಿ ಎದುರಾಗಲಿದೆ ಎನ್ನುವ ಸೂಚನೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರ ಬಳಿ ಮಾತನಾಡಿದ ಅವರು ಕಳೆದ 2-3 ವರ್ಷಗಳಲ್ಲಿ ಮಾಧ್ಯಮಗಳು, ಸಂಸ್ಥೆಗಳು, ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಸತ್ಯವನ್ನು ಮರೆಮಾಚಿವೆ. ನಿಧಾನವಾಗಿ ಸತ್ಯ ಹೊರಬರಲಿದೆ. ಅದು ಶ್ರೀಲಂಕಾದಲ್ಲಿ ನಡೆಯುತ್ತಿದೆ. ಅಲ್ಲಿಗೆ ಸತ್ಯ ಹೊರಬಿದ್ದಿದೆ. ಭಾರತದಲ್ಲೂ ಸತ್ಯ ಹೊರಬರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.

Sri Lanka Economic Crisis : ಶ್ರೀಲಂಕಾ ತುರ್ತು ಪರಿಸ್ಥಿತಿ ವಾಪಸ್: ಯುಎನ್ ಸ್ವಾಗತSri Lanka Economic Crisis : ಶ್ರೀಲಂಕಾ ತುರ್ತು ಪರಿಸ್ಥಿತಿ ವಾಪಸ್: ಯುಎನ್ ಸ್ವಾಗತ

ಶ್ರೀಲಂಕಾ ಭಾರತದಲ್ಲಿ ವಿಭಿನ್ನವಾಗಿರುವುದೇನು? ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ. ಭಾರತವು ವಿಭಜಿತವಾಗಿದೆ. ಇಲ್ಲಿ ವಿವಿಧ ಗುಂಪುಗಳನ್ನು ರಚಿಸಲಾಗಿದೆ. ಇದು ಮೊದಲು ಒಂದು ರಾಷ್ಟ್ರವಾಗಿತ್ತು. ಆದರೀಗ ಈಗ ರಾಷ್ಟ್ರದೊಳಗೆ ವಿಭಿನ್ನ ರಾಷ್ಟ್ರಗಳನ್ನು ರಚಿಸಿದ್ದಾರೆ. ಎಲ್ಲರನ್ನೂ ಪರಸ್ಪರ ಕಣಕ್ಕಿಳಿಸಲಾಗುತ್ತಿದೆ. ಈ ಹಿಂಸೆ ಹೊರ ಬರುತ್ತದೆ. ಈಗ ನನ್ನನ್ನು ನಂಬಬೇಡಿ, 2-3 ವರ್ಷ ಕಾಯಿರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

India Will Face Consequences Like Sri Lanka, Govt Not Accepting Reality says Rahul Gandhi

ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದು ನಡೆಯುವುದು ಒಂದು ಕಡೆ ಇರಲಿ ಅದರ ಬಗ್ಗೆ ಮಾತನಾಡುವವರು ಕಾಣಿಸುತ್ತಿಲ್ಲ. ಕೋಮು ಗಲಭೆ, ಬೆಲೆ ಏರಿಕೆ, ವಾದ ವಿವಾದದಲ್ಲೇ ರಾಜಕೀಯ ಪಕ್ಷಗಳು ಮುಳುಗಿ ಹೋಗಿವೆ. ಇದರಿಂದ ಜನರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಆದರೆ ಇದರ ವಾಸ್ತವತೆಯನ್ನು ಮಾದ್ಯಮಗಳು ಮರೆ ಮಾಚಿವೆ. ಜೊತೆಗೆ ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಮುಂದಾಗುವ ಪರಿಸ್ಥಿತಿಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿವೆ. ಇದು ಮುಂದೊಂದು ದಿನ ನೆಎಲ್ಲರಿಗೂ ಅರ್ಥವಾಗಲಿದೆ ಎಂದು ರಾಹುಲ್ ಹೇಳಿದ್ದಾರೆ.

ಶ್ರೀಲಂಕಾ ಸದ್ಯದ ಪರಿಸ್ಥಿತಿ ಏನು?

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಇಂಧನದ ಹಾಹಾಕಾರ ಮುಗಿಲುಮುಟ್ಟಿದೆ. ವಿದೇಶಿ ಮೀಸಲು ಕೊರತೆಯ ನಡುವೆ ಇಂಧನ ಖರೀದಿಗಾಗಿ ಭಾರತವು ವಿಸ್ತರಿಸಿದ USD 500 ಮಿಲಿಯನ್ ಸಾಲದೊಂದಿಗೆ ಶ್ರೀಲಂಕಾದಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಇಂಧನ ಬರಿದಾಗಬಹುದು ಎಂದು ಹೇಳಲಾಗುತ್ತಿದೆ.

India Will Face Consequences Like Sri Lanka, Govt Not Accepting Reality says Rahul Gandhi

1948 ರಲ್ಲಿ ಇಂಗ್ಲೆಂಡಿನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜನರು ಸುದೀರ್ಘವಾದ ವಿದ್ಯುತ್ ಕಡಿತ, ಇಂಧನ, ಆಹಾರ ಮತ್ತು ಇತರ ಮೂಲಭೂತ ಸರಕುಗಳ ಕೊರತೆಯನ್ನು ಎದುರಿಸುತ್ತಿದ್ದು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಆಕ್ರೋಶವು ಸರ್ಕಾರದ ಬಹುತೇಕ ಎಲ್ಲಾ ಸಚಿವರನ್ನು ಸಂಪುಟದಿಂದ ತೊರೆಯುವಂತೆ ಪ್ರೇರೇಪಿಸಿದೆ. ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಸರ್ಕಾರವನ್ನು ತೊರೆಯಲು ಹಲವಾರು ಶಾಸಕರು ಪ್ರೇರೇಪಿಸಿದ್ದಾರೆ.

English summary
In the last 2-3 years, media, institutions, BJP leaders, RSS have hidden the truth. Slowly the truth will come out. India Will Face Consequences Like Sri Lanka, Govt Not Accepting Reality says Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X