Breaking: 24 ಗಂಟೆಯಲ್ಲಿ 9987 ಕೇಸ್ ಪತ್ತೆ, 331 ಜನ ಸಾವು
ದೆಹಲಿ, ಜೂನ್ 9: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,66,598ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 9987 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದುವರೆಗೂ ದಿನವೊಂದರಲ್ಲಿ ದಾಖಲಾಗಿರುವ ಗರಿಷ್ಠ ಕೇಸ್ ಇದಾಗಿದೆ. 24 ಗಂಟೆಯಲ್ಲಿ 331 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೂ ದೇಶದಲ್ಲಿ 7466 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
India reports the highest single-day spike of 9987 new #COVID19 cases & 331 deaths in the last 24 hours. Total number of cases in the country now at 266598, including 129917 active cases, 129215 cured/discharged/migrated and 7466 deaths: Ministry of Health and Family Welfare pic.twitter.com/plj2Vg693d
— ANI (@ANI) June 9, 2020
ಸದ್ಯ ದೇಶದಲ್ಲಿ 1,29,917 ಜನರು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 1,29,215 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ನಿನ್ನೆ 2553 ಜನರಿಗೆ ಕೊರೊನಾ ವೈರಸ್ ತಗುಲಿದೆ. ಕರ್ನಾಟಕದಲ್ಲಿ 308 ಕೇಸ್, ಗುಜರಾತ್‌ನಲ್ಲಿ 477 ಮಂದಿಗೆ ಸೋಂಕು, ತಮಿಳುನಾಡಿನಲ್ಲಿ 1562 ಜನರಿಗೆ ಸೋಂಕು, ಪಂಜಾಬ್‌ನಲ್ಲಿ 55 ಜನರಿಗೆ ನಿನ್ನೆ ಸೋಂಕು ಖಚಿತವಾಗಿತ್ತು.
ಜನಸಂಖ್ಯೆ ಆಧಾರದಲ್ಲಿ ಐಸಿಎಂಆರ್ ಸಮೀಕ್ಷೆ: ಕೊರೊನಾ ಕುರಿತು ಅಚ್ಚರಿ ವರದಿ
ಪ್ರಸ್ತುತ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಹೊಸ ಕೇಸ್‌ಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಜಗತ್ತಿನಾದ್ಯಂತ 7,199,329 ಕೇಸ್ ದಾಖಲಾಗಿದ್ದು, 408,735 ಪ್ರಾಣ ಕಳೆದುಕೊಂಡಿದ್ದಾರೆ.