ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಸರ್ಕಾರದಲ್ಲಿ ನಾಗರಿಕ ಸ್ವಾತಂತ್ರ್ಯಗಳು ನಾಶ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮಾರ್ಚ್.11: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಇದೀಗ ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಉಳಿದಿಲ್ಲ ಎಂದು ಸಂಸದ ರಾಹುಲ್ ಗಾಂಧಿ ದೂಷಿಸಿದ್ದಾರೆ.

ತಮ್ಮ ಆರೋಪಕ್ಕೆ ಸಾಕ್ಷಿಯಾಗಿ ಸ್ವಿಡನ್ ವಿ-ಡೆಮ್ ಇನ್ಸ್ ಟಿಟ್ಯೂಟ್ಸ್ ವರದಿಯನ್ನು ರಾಹುಲ್ ಗಾಂಧಿಯವರು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿದ್ದಾರೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯವಾಗಿ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಂಚ ರಾಜ್ಯಗಳ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ಸಿಗೆ ಭಾರೀ ಆಘಾತಪಂಚ ರಾಜ್ಯಗಳ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ಸಿಗೆ ಭಾರೀ ಆಘಾತ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸರ್ಕಾರದ ಅನುದಾನಿತ ಎನ್‌ಜಿಒವೊಂದರ ನಡೆಸಿದ ಜಾಗತಿಕ ವರದಿಯಲ್ಲಿ ಇದೇ ಅಂಶ ಉಲ್ಲೇಖವಾಗಿದೆ.

2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿ ಆದ ನಂತರ ಭಾರತದಲ್ಲಿ ರಾಜಕೀಯ ಹಕ್ಕು ಮತ್ತು ನಾಗರಿಕ ಸ್ವಾತಂತ್ರ್ಯಗಳು ನಾಶವಾಗುತ್ತಿವೆ ಎಂದು ಫ್ರೀಡಂ ಹೌಸ್ ವರದಿಯಲ್ಲಿ ಪ್ರಕಟಿಸಲಾಗಿತ್ತು.

India No Longer A Democratic Country, Rahul Gandhi Claims In Twitter

ಕೇಂದ್ರ ಸರ್ಕಾರದ ವಾದವೇನು?

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಫ್ರೀಡಂ ಹೌಸ್ ವರದಿಯನ್ನು ಭಾರತೀಯ ಕೇಂದ್ರ ಸರ್ಕಾರವು ಬಲವಾಗಿ ಖಂಡಿಸಿದೆ. ಇದೊಂದು "ತಪ್ಪಾಗಿದ್ದು, ತಪ್ಪಾದ ಸ್ಥಳದ ಬಗ್ಗೆ ದಾರಿ ತಪ್ಪಿಸುವ ವರದಿ ಎಂದು ದೂಷಿಸಿದೆ. ಅಲ್ಲದೇ, ದೇಶವು ಪ್ರಜಾಪ್ರಭುತ್ವ ರೂಢಿ ಮತ್ತು ಅಭ್ಯಾಸಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದೆ ಎಂದು ಪ್ರತಿಪಾದಿಸುತ್ತದೆ.

English summary
India No Longer A Democratic Country, Rahul Gandhi Claims In Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X