• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವಿರುದ್ಧ 3ನೇ ಯುದ್ಧ: ಅಂತರ್-ರಾಜ್ಯ ಸಂಚಾರಕ್ಕೆ ನಿರ್ಬಂಧ!

|

ನವದೆಹಲಿ, ಮೇ.01: ಕೊರೊನಾ ಹರಡದಂತೆ ತಡೆಯಲು ಜಾರಿಗೆ ತಂದಿರುವ ಲಾಕ್ ಡೌನ್‌ ಅನ್ನು ಇನ್ನೂ ಎರಡು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ. ಮೇ 3ರಂದು ಎರಡನೇ ಹಂತದ ಲಾಕ್ ಡೌನ್ ಅಂತ್ಯಗೊಳ್ಳಲಿದೆ. ಇದರ ಬೆನ್ನಲ್ಲೇ ಶುಕ್ರವಾರ ಸಂಜೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ಆದೇಶವನ್ನು ಹೊರಡಿಸಿದೆ.

ದೇಶಾದ್ಯಂತ ಲಾಕ್ ಡೌನ್ ಅನ್ನು ಇನ್ನೂ‌ ಎರಡು ವಾರಗಳ ಕಾಲ ವಿಸ್ತರಣೆ ಮಾಡಿ ಆದೇಶ ನೀಡಿದೆ. ಮೇ.17ರವರೆಗೂ ಭಾರತ ಲಾಕ್ ಡೌನ್ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಆದೇಶಿಸಿದೆ.

ಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

ಮೇ.04ರಿಂದ ದೇಶದಲ್ಲಿ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ನೀಡಿದ್ದು, ಅಂತರ್-ರಾಜ್ಯ ವಿಮಾನ, ರೈಲು ಹಾಗೂ ಬಸ್ ಸಂಚಾರಕ್ಕೆ ಅವಕಾಶವನ್ನು ನಿರ್ಬಂಧಿಸಲಾಗಿದೆ.

ಕೇಂದ್ರ ಸರ್ಕಾರವು ದೇಶದಲ್ಲಿ 130 ಕೆಂಪು ವಲಯ, 284 ಕಿತ್ತಳೆ ವಲಯ ಹಾಗೂ 319 ಹಸಿರು ವಲಯಗಳೆಂದು ಗುರುತಿಸಿದೆ. ಹೀಗಾಗಿ ರಾಜ್ಯಗಳಿಂದ ರಾಜ್ಯಗಳಿಗೆ ಯಾವುದೇ ರೀತಿ ಸಂಪರ್ಕ ಕಲ್ಪಿಸದಿರಲು ವಿಮಾನ, ರೈಲ್ವೆ ಹಾಗೂ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಕಂಟೋನ್ಮೆಂಟ್ ಝೋನ್ ಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಪತ್ತೆ ಮತ್ತು ಸೋಂಕಿತರ ಜೊತೆಗೆ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡುವುದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಕೆಲವು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.

English summary
India Lockdown Extend: Restriction On Inter-state Air, Rail And Bus Traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X