• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

10 ದಿನದಲ್ಲಿ ಒಂದು ಲಕ್ಷ ಸೋಂಕು: ಭಾರತಕ್ಕೆ ಇದು ಕೆಟ್ಟ ದಾಖಲೆ

|

ದೆಹಲಿ, ಜೂನ್ 13: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷ ಗಡಿದಾಟಿದೆ. ಶನಿವಾರ ಬೆಳಿಗ್ಗೆಯ ವರದಿ ಪ್ರಕಾರ ಭಾರತದಲ್ಲಿ 11,458 ಹೊಸ ಕೇಸ್‌ಗಳು ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,08,993ಕ್ಕೆ ಏರಿಕೆಯಾಗಿದೆ.

   60 ಮೇಲ್ಪಟ್ಟವರನ್ನು ಮಾತ್ರವಲ್ಲ ಯುವಕರ ಸಾವಿಗೂ ಕಾರಣವಾಗ್ತಿದೆ ಕೊರೋನಾ | Oneindia Kannada

   ಭಾರತದಲ್ಲಿ ಮೂರು ಲಕ್ಷ ಕೇಸ್ ವರದಿಯಾಗುತ್ತಿದ್ದಂತೆ ಕೆಟ್ಟ ದಾಖಲೆಯೊಂದು ನಿರ್ಮಾಣವಾಗಿದೆ. ಕೇವಲ 10 ದಿನದಲ್ಲಿ ಒಂದು ಲಕ್ಷ ಕೇಸ್ ಪತ್ತೆಯಾಗಿದೆ. ಹೌದು, 2 ಲಕ್ಷ ದಿಂದ 3 ಲಕ್ಷ ಸೋಂಕು ಹರಡಲು ಭಾರತ ತೆಗೆದುಕೊಂಡು ಸಮಯ ಹತ್ತು ದಿನ.

   ದೇಶದಲ್ಲಿ 2 ಲಕ್ಷ ಕೊರೊನಾ ಕೇಸ್, 15 ದಿನದಲ್ಲಿ 1 ಲಕ್ಷ ಸೋಂಕು

   ಇದಕ್ಕೂ ಮುಂಚೆ ಭಾರತದಲ್ಲಿ ಒಂದು ಲಕ್ಷದಿಂದ ಎರಡು ಲಕ್ಷ ಸೋಂಕು ದಾಟಲು ಎರಡು ವಾರ ಸಮಯ ತೆಗೆದುಕೊಂಡಿದೆ. ಅಂದ್ರೆ, 15 ದಿನಗಳಲ್ಲಿ ಒಂದು ಲಕ್ಷ ಸೋಂಕು ದೇಶದಲ್ಲಿ ವರದಿಯಾಗಿತ್ತು.

   ಜನವರಿ 30 ರಂದು ಭಾರತದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಚೀನಾದ ವುಹಾನ್‌ನಿಂದ ಕೇರಳಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿಗಳಿಗೆ ಕೊವಿಡ್ ಸೋಂಕು ತಗುಲಿತ್ತು. ಅಲ್ಲಿಂದ ನಿಧಾನಗತಿಯಲ್ಲಿ ಏರಿಕೆ ಕಂಡ ಕೊರೊನಾ ಸೋಂಕು, ಮಾರ್ಚ್ ತಿಂಗಳಲ್ಲಿ ಹೆಚ್ಚಾಯಿತು. ಮಾರ್ಚ್ 10ರವರೆಗೂ ದೇಶದಲ್ಲಿ ಕೇವಲ 50 ಕೊವಿಡ್ ಸೋಂಕು ಮಾತ್ರ ವರದಿಯಾಗಿತ್ತು.

   100 ಕೇಸ್‌ನಿಂದ ಒಂದು ಲಕ್ಷ ಗಡಿ ದಾಟಲು ಭಾರತ ಸುಮಾರು 64 ದಿನಗಳ ಸಮಯ ತೆಗೆದುಕೊಂಡಿತ್ತು.

   ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್ ಹಾಗೂ ರಷ್ಯಾ ಬಳಿಕ ಭಾರತದಲ್ಲಿ ಹೆಚ್ಚು ಸೋಂಕು ವರದಿಯಾಗಿದೆ.

   English summary
   India crosses 3 lakh mark as it reports the highest single-day spike of 11,458 new COVID19 cases. india jumps 2 lakh to 3 lakh in 10 days.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X