ವೇಶ್ಯಾವಾಟಿಕೆಯಲ್ಲಿ ಕರ್ನಾಟಕ ಬೇರೆ ರಾಜ್ಯಕ್ಕಿಂತ ಕಮ್ಮಿಯಿಲ್ಲ
ನವದೆಹಲಿ, ಫೆಬ್ರವರಿ,08: ವೇಶ್ಯಾವಾಟಿಕೆ ಇತ್ತೀಚೆಗೆ ನಮ್ಮ ದೇಶದ ದೊಡ್ಡ ಪಿಡುಗಾಗಿ ಪರಿಣಮಿಸುತ್ತಿದೆ. ಮಹಿಳೆಯರ ಬಾಳನ್ನು ಹಿಂಡಿ ಹಿಪ್ಪೆಯಾಗಿಸುವ ಈ ದಂಧೆಗೆ ಹೋಗಲು ಮಹಿಳೆಯರ ಮನಸ್ಸು ಒಲ್ಲೆ ಎಂದರೂ, ಬದುಕಿನ ಕಷ್ಟ, ನೋವುಗಳು ಇವರನ್ನು ಈ ಕೂಪದಲ್ಲಿ ನಲುಗುವಂತೆ ಮಾಡುತ್ತದೆ. ಈ ವಿಚಾರದಲ್ಲಿ ಇದೀಗ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ನಮ್ಮ ರಾಷ್ಟ್ರದಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಮಹಿಳೆಯರು ವೇಶ್ಯಾವಾಟಿಕೆಯ ಜಾಲದಲ್ಲಿದ್ದು, ಆಂಧ್ರಪ್ರದೇಶ (1.56 ಲಕ್ಷ) ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಎರಡನೇ ಸ್ಥಾನ (61,000) ಕರ್ನಾಟಕ ಮತ್ತು ಮಹಾರಾಷ್ಟ್ರ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.[ಭಾರತದಿಂದ ಗಲ್ಫ್ ರಾಷ್ಟ್ರಕ್ಕೆ 63 ಮಹಿಳೆಯರ ಸಾಗಾಟ]

ಕೆಲವು ದಿನಗಳ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವೂ ವೇಶ್ಯಾವಾಟಿಕೆಯ ವಿಚಾರವಾಗಿ ಆರ್ ಟಿಐ (Right to Information)ಯಿಂದ ಮಾಹಿತಿ ಕೇಳಿತ್ತು. ಸಚಿವಾಲಯ ಕಳುಹಿಸಿದ ಮಾಹಿತಿಯಿಂದ ಈ ಅಂಶ ಬಹಿರಂಗಗೊಂಡಿದೆ.
2009ರ ವರದಿಯ ಪ್ರಕಾರ ಹೇಳುವುದಾದರೆ ಏಡ್ಸ್ ನಿಯಂತ್ರಣ ಸಂಸ್ಥೆಯಲ್ಲಿ ವೇಶ್ಯಾವಾಟಿಕೆ ನಡೆಸುವ 6.96 ಲಕ್ಷ ಮಹಿಳೆಯರ ಹೆಸರು ನೋಂದಾವಣೆ ಆಗಿದೆ. ಆದರೆ ಶೇ.19 ಮಂದಿ ಹೆಸರು ನೊಂದಾವಣೆ ಮಾಡಿಲ್ಲ. ಈ ಸಂಖ್ಯೆ ಅನುಸರಿಸಿ ರಾಜ್ಯಾದ್ಯಾಂತ ತನಿಖೆ ಕೈಗೊಳ್ಳಲಿದ್ದೇವೆ ಎಂದು ಸಚಿವಾಲಯ ಹೇಳಿದೆ.












Click it and Unblock the Notifications