ಜನವರಿ 7ರಂದು ಭಾರತ-ಫ್ರಾನ್ಸ್ ದ್ವಿಪಕ್ಷೀಯ ಕಾರ್ಯತಂತ್ರದ ಸಭೆ: ಭಾರತದ ನಿಯೋಗ ಮುನ್ನೆಡೆಸಲಿರುವ ಅಜಿತ್ ದೋವಲ್
ನವದೆಹಲಿ, ಜನವರಿ 06: ಭಾರತ ಮತ್ತು ಫ್ರಾನ್ಸ್ ಜನವರಿ 7 ರಂದು ವಾರ್ಷಿಕ ಕಾರ್ಯತಂತ್ರದ ಮಾತುಕತೆ ನಡೆಸಲಿವೆ. ನವದೆಹಲಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತೀಯ ನಿಯೋಗವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವ ವಹಿಸಲಿದ್ದಾರೆ.
ಭಾರತ ನಿಯೋಗವನ್ನು ದೋವಲ್ ಮುನ್ನೆಡೆಸಿದರೆ, ಫ್ರೆಂಚ್ ತಂಡವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ರಾಜತಾಂತ್ರಿಕ ಸಲಹೆಗಾರ ಎಮ್ಯಾನುಯೆಲ್ ಬೋನ್ ನೇತೃತ್ವ ವಹಿಸಲಿದ್ದಾರೆ. ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಈ ಅವಧಿಯಲ್ಲಿ ಉಭಯ ಕಡೆಯವರು ವಿವರವಾದ ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದರೊಂದಿಗೆ, ಫ್ರೆಂಚ್ ತಂಡದ ಮುಖ್ಯಸ್ಥ ಎಮ್ಯಾನುಯೆಲ್ ಬೋನ್ ಅವರು ಭಾರತದ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡುವ ಯೋಜನೆಯನ್ನು ಹೊಂದಿದ್ದಾರೆ.
ಪೊಲೀಸ್ ಅರೆಸ್ಟ್ ಹಿಂದೆ ಯಾರ ಕೈವಾಡ ಇದೆ !! | Oneindia Kannada
ಭಾರತ ಮತ್ತು ಫ್ರಾನ್ಸ್ ನಡುವಿನ ಕೊನೆಯ ಕಾರ್ಯತಂತ್ರದ ಸಂವಾದವು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ 2020 ರಲ್ಲಿ ನಡೆಯಿತು.