ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದ ಟಿಬಿ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತದೆಯೇ?

|
Google Oneindia Kannada News

ನವದೆಹಲಿ, ಜು.18: ಕೋವಿಡ್‌ ಸೋಂಕಿನಿಂದಾಗಿ ಕ್ಷಯರೋಗ (ಟಿಬಿ) ಪ್ರಕರಣಗಳಲ್ಲಿ ಹೆಚ್ಚಳವಿದೆ ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಆರೋಗ್ಯ ಸಚಿವಾಲಯ ಶನಿವಾರ ಸ್ಪಷ್ಟನೆ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, "ಇತ್ತೀಚೆಗೆ ಕೋವಿಡ್‌ ಸೋಂಕಿತ ರೋಗಿಗಳಲ್ಲಿ ಕ್ಷಯರೋಗದ ಪ್ರಕರಣಗಳು ಹಠಾತ್ ಏರಿಕೆ ಕಂಡುಬಂದಿದೆ ಎಂದು ಆರೋಪಿಸಿ ಕೆಲವು ಮಾಧ್ಯಮ ವರದಿಗಳು ಬಂದಿವೆ," ಎಂದು ಹೇಳಿದೆ.

ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿಗೆ ಗೂಗಲ್‌ ಡೂಡಲ್‌ ಗೌರವಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿಗೆ ಗೂಗಲ್‌ ಡೂಡಲ್‌ ಗೌರವ

"ಆದರೆ ಕೋವಿಡ್‌ ಕಾರಣದಿಂದಾಗಿ ಟಿಬಿ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಸೂಚಿಸಲು ಪ್ರಸ್ತುತ ಸಾಕಷ್ಟು ಪುರಾವೆಗಳಿಲ್ಲ," ಎಂದು ಹೇಳಿದೆ.ಎಲ್ಲಾ ಕೋವಿಡ್‌ ಸಕಾರಾತ್ಮಕ ರೋಗಿಗಳಿಗೆ ಟಿಬಿ ತಪಾಸಣೆ ಹಾಗೂ ಟಿಬಿ ರೋಗಿಗಳಿಗೆ ಕೋವಿಡ್‌ ತಪಾಸಣೆಯನ್ನು ಶಿಫಾರಸು ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.

Increase in TB cases due to Covid? Not enough evidence, says Health Ministry

ಇದಲ್ಲದೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಯುಟಿಗಳು) ಆಗಸ್ಟ್ 2020 ರ ಹಿಂದೆಯೇ ಟಿಬಿ ಮತ್ತು ಕೋವಿಡ್‌ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಹೇಳಲಾಗಿದೆ ಎಂದಿದೆ.

"ಇದಲ್ಲದೆ, ಟಿಬಿ-ಕೋವಿಡ್ ಮತ್ತು ಟಿಬಿ-ಐಎಲ್ಐ / ಸಾರಿಗಳ ತಪಾಸಣೆಯ ಅಗತ್ಯವನ್ನು ಪುನರುಚ್ಚರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅನೇಕ ಸಲಹೆಗಳು ಮತ್ತು ಮಾರ್ಗದರ್ಶನಗಳನ್ನು ಸಹ ನೀಡಿದೆ. "ರಾಜ್ಯಗಳು / ಯುಟಿಗಳು ಇದನ್ನು ಕಾರ್ಯಗತಗೊಳಿಸುತ್ತಿವೆ," ಎಂದು ಅದು ಹೇಳಿದೆ.

'2 ನೇ ಅಲೆ ಸಂದರ್ಭ 2 ಡೋಸ್‌ ಲಸಿಕೆ ಶೇ.95 ಸಾವು ತಡೆ‌ಗಟ್ಟಿದೆ': ವಿ.ಕೆ. ಪೌಲ್‌'2 ನೇ ಅಲೆ ಸಂದರ್ಭ 2 ಡೋಸ್‌ ಲಸಿಕೆ ಶೇ.95 ಸಾವು ತಡೆ‌ಗಟ್ಟಿದೆ': ವಿ.ಕೆ. ಪೌಲ್‌

ಬದಲಾಗಿ ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ಟಿಬಿ ಪ್ರಕರಣಗಳು ಶೇಕಡ 25 ರಷ್ಟು ಕಡಿಮೆಯಾಗಲು ಕಾರಣವಾಯಿತು ಎಂದು ಸಚಿವಾಲಯ ಒಪ್ಪಿಕೊಂಡಿದೆ. "ಟಿಬಿ ಮತ್ತು ಕೋವಿಡ್‌ ಎರಡೂ ರೋಗಗಳು ಸಾಂಕ್ರಾಮಿಕವೆಂದು ತಿಳಿದುಬಂದಿದೆ. ಇವೆರಡು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಆಕ್ರಮಣ ಮಾಡುತ್ತವೆ. ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳಂತಹ ರೋಗಲಕ್ಷಣಗಳು ಕಂಡು ಬರುತ್ತದೆ. ಆದರೂ ಟಿಬಿಯು ದೀರ್ಘ ಕಾಲ ಮಾನವ ದೇಹದಲ್ಲಿದ್ದು ನಿಧಾನವಾಗಿ ಆಕ್ರಮಣ ಮಾಡುತ್ತದೆ," ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

"ಕೋವಿಡ್‌ ನಂತರದಲ್ಲಿ ವೈರಸ್‌ನಿಂದಾಗಿ ಅಥವಾ ಚಿಕಿತ್ಸೆಯ ಕಾರಣದಿಂದಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು. ವಿಶೇಷವಾಗಿ ಸ್ಟೀರಾಯ್ಡ್‌ಗಳಂತಹ ರೋಗನಿರೋಧಕಗಳು ಟಿಬಿ ಕಾಯಿಲೆ ಕಾಣಿಸಿಕೊಳ್ಳಬಹುದು. ಟಿಬಿ ಕಪ್ಪು ಶಿಲೀಂಧ್ರದಂತಹ ಅವಕಾಶವಾದಿ ಸೋಂಕು," ಎಂದು ಸಚಿವಾಲಯ ಹೇಳಿದೆ.

(ಒನ್‌ಇಂಡಿಯಾ ಸುದ್ದಿ)

English summary
The Health Ministry on Saturday said there is not enough evidence to suggest that there is an increase in cases of tuberculosis (TB) due to COVID-19 infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X