ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಪಾವತಿಗೆ ಇ-ಫೈಲಿಂಗ್ ವ್ಯವಸ್ಥೆ ಮೇ 4ರಿಂದಲೇ ಶುರು

|
Google Oneindia Kannada News

ನವದೆಹಲಿ, ಮೇ 5: ಆದಾಯ ತೆರಿಗೆ ಇಲಾಖೆಯು ಮೇ 4ರಿಂದ ಎಲ್ಲ ರೀತಿಯ ಆದಾಯ ತೆರಿಗೆ ಪಾವತಿಗೆ ಇ-ಫೈಲಿಂಗ್ ವ್ಯವಸ್ಥೆ ಮಾಡಿದೆ. 2017-18ನೇ ಸಾಲಿನ ಆದಾಯ ತೆರಿಗೆ ಪಾವತಿಗೆ ಇದು ಅನ್ವಯ ಆಗುತ್ತದೆ. ಹೊಸದಾದ ಆದಾಯ ತೆರಿಗೆ ಪಾವತಿ ಅರ್ಜಿ ಸಲ್ಲಿಕೆಗೆ https://incometaxindiaefiling. gov.in ತೆರಿಗೆ ಇಲಾಖೆಯ ಇ ಪೋರ್ಟಲ್ ನಲ್ಲಿ ಆನ್ ಲೈನ್ ವ್ಯವಸ್ಥೆ ಇದೆ.

ಎಲ್ಲ ರೀತಿಯ ಆದಾಯ ತೆರಿಗೆಗೆ ಇ ಫೈಲಿಂಗ್ ಅನ್ನು ಇಲಾಖೆಯ ವೆಬ್ ಸೈಟ್ ನಲ್ಲಿ ಮಾಡಬಹುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವರ್ಷ ತೆರಿಗೆ ಪಾವತಿಸಿದ ಮಾಹಿತಿಯ ಪ್ರತಿ, ಬ್ಯಾಂಕ್ ಸ್ಟೇಟ್ ಮೆಂಟ್, ಟಿಡಿಎಸ್ ಮಾಹಿತಿ, ಉಳಿತಾಯಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳು, ಫಾರ್ಮ್ -60 ಇತರ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಇ ಫೈಲಿಂಗ್ ಮಾಡಬಹುದು ಎಂದು ಅಧಿಕಾರಿ ಹೇಳಿದ್ದಾರೆ.[ಮುಂಬೈಯಲ್ಲಿ ಆದಾಯ ತೆರಿಗೆ ಅಧಿಕಾರಿ ಸಿಬಿಐ ಬಲೆಗೆ: 1.5 ಕೋಟಿ ರೂ.ವಶ]

Income Tax department activates all ITRs for e-filing

ಆಧಾರ್ ಸಂಖ್ಯೆಯ ಸಹಾಯದಿಂದ ಇ-ವೆರಿಫಿಕೇಷನ್ ಮಾಡಬಹುದು. ಐಟಿಆರ್ ನ ಪಾವತಿಯ ದಾಖಲೆಯನ್ನು ಬೆಂಗಳೂರಿನ ಸಿಪಿಸಿಗೆ ಅಂಚೆ ಮೂಲಕ ಕಳಿಸುವ ಅಗತ್ಯ ಇಲ್ಲ. ಆಧಾರ್ ಮೂಲಕ ಈವರೆಗೆ 2,59,831 ಐಟಿಆರ್ ನ ಇ ವೆರಿಫೈ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಮದುವೆ ದಿಬ್ಬಣದವರಂತೆ ಬಂದು ದಾಳಿ ನಡೆಸಿದ ಐಟಿ ಅಧಿಕಾರಿಗಳು]

2017ರ ಆರ್ಥಿಕ ಕಾಯ್ದೆ ಪ್ರಕಾರ ಆದಾಯ ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಅಷ್ಟೇ ಅಲ್ಲ, ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೂ ಜುಲೈ 1, 2017ರಿಂದ ಆಧಾರ್ ಕಡ್ಡಾಯ ಮಾಡಲಾಗಿದೆ. ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಾರ್ಚ್ 31ರಂದು ಏಳು ಐಟಿಆರ್ ಗಳನ್ನು ಪರಿಚಯಿಸಿದೆ.

ಅದರಲ್ಲಿ ಒಂದು ಪುಟದ ಸರಳ ಅರ್ಜಿ ವೇತನ ಪಡೆಯುವ ವರ್ಗಕ್ಕೆ ಹಾಗೂ ಮನೆ ಬಾಡಿಗೆ ಹಾಗೂ ಬಡ್ಡಿ ಮೂಲಕ ಐವತ್ತು ಲಕ್ಷದವರೆಗೆ ಆದಾಯ ಪಡೆಯುವವರಿಗಾಗಿ ಇದೆ. ಜುಲೈ 31ರವರೆಗೆ ಆದಾಯ ತೆರಿಗೆ ಪಾವತಿಯ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.

English summary
The Income Tax department today activated the e-filing facility for all categories of Income Tax Returns (ITRs) for the assessment year 2017-18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X