ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ ಬಿಜೆಪಿ- ಎಎಪಿ ರಸ್ತೆಯಲ್ಲಿ ರಂಪಾಟ

By Mahesh
|
Google Oneindia Kannada News

ನವದೆಹಲಿ, ಮಾ.6: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾಲ್ಕು ದಿನಗಳ ಗುಜರಾತ್ ಪ್ರವಾಸ ಗೊಂದಲದಿಂದ ಆರಂಭಗೊಂಡು ಗದ್ದಲ, ದೊಂಬಿ, ಜಗಳ, ಗಲಭೆಯಲ್ಲಿ ಅಂತ್ಯಕಂಡಿದೆ. ಮೋದಿ ಅವರು ಹೇಳುತ್ತಿರುವಂತೆ ಗುಜರಾತ್ ಅಭಿವೃದ್ಧಿಯಾಗಿದೆಯೇ? ಇಲ್ಲವೇ? ಎಂಬುದನ್ನು ಪರೀಕ್ಷಿಸಲು ಅರವಿಂದ್ ಪ್ರವಾಸ ಕೈಗೊಂಡಿದ್ದರು. ಆದರೆ, ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನಂತರ ಎಎಪಿ- ಬಿಜೆಪಿ ಕಾರ್ಯಕರ್ತರ ನಡುವೆ ಜಟಾಜಟಿ ನಡೆಯಿತು.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಅರವಿಂದ್ ಅವರ ಮೆರವಣಿಗೆಯನ್ನು ತಡೆದು ಪ್ರಶ್ನಿಸಲಾಯಿತು. ಕೇಜ್ರಿವಾಲ್ ಅವರು ಪ್ರಶ್ನಿಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ. ಈ ನಡುವೆ ನವದೆಹಲಿಯಲ್ಲಿ ನಡೆದ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಲು ಎರಡೂ ಪಕ್ಷಗಳು ಗುರುವಾರ ಚುನಾವಣಾ ಆಯೋಗಕ್ಕೆ ತೆರಳುವ ಸುದ್ದಿ ಬಂದಿದೆ. ಗುರುವಾರ ಕೂಡಾ ದೆಹಲಿ ಪೊಲೀಸರು 14 ಜನ ಎಎಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆ ದೆಹಲಿ ಗಲಭೆಯಿಂದ 28 ಮಂದಿ ಗಾಯಗೊಂಡಿದ್ದಾರೆ 13 ಜನ ಎಎಪಿ ಕಾರ್ಯಕರ್ತರು, 10 ಜನ ಬಿಜೆಪಿ ಬೆಂಬಲಿಗರು, 4 ಪೊಲೀಸರು ಹಾಗೂ ಒಬ್ಬ ಮಾಧ್ಯಮ ಪ್ರತಿನಿಧಿ.

ಬುಧವಾರ ಕೇಜ್ರಿವಾಲ್ ಅವರು ಗುಜರಾತಿನ ಪಟಾನ್ ಜಿಲ್ಲೆಗೆ ಆಗಮಿಸುತ್ತಿದ್ದಂತೆಯೇ ಸ್ಥಳೀಯರು ಕಪ್ಪುಬಾವುಟ ಪ್ರದರ್ಶಿಸಿದರು. ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ‌ಗೆ ಆಪ್ ಟಿಕೆಟ್ ನೀಡಿದ್ದನ್ನು ಖಂಡಿಸಿದ ಸ್ಥಳೀಯರು, ಕೇಜ್ರಿವಾಲ್ ಗುಜರಾತ್ ವಿರೋಧಿ ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು. ಗುಜರಾತ್ ಹಾಗೂ ದೆಹಲಿ ಘಟನಾವಳಿಯ ಚಿತ್ರಣ ಮುಂದಿದೆ...

ದೆಹಲಿ ಗಲಭೆಯಿಂದ ಗಾಯಗೊಂಡವರು

ದೆಹಲಿ ಗಲಭೆಯಿಂದ ಗಾಯಗೊಂಡವರು

ಒಟ್ಟಾರೆ ದೆಹಲಿ ಗಲಭೆಯಿಂದ 28 ಮಂದಿ ಗಾಯಗೊಂಡಿದ್ದಾರೆ 13 ಜನ ಎಎಪಿ ಕಾರ್ಯಕರ್ತರು, 10 ಜನ ಬಿಜೆಪಿ ಬೆಂಬಲಿಗರು, 4 ಪೊಲೀಸರು ಹಾಗೂ ಒಬ್ಬ ಮಾಧ್ಯಮ ಪ್ರತಿನಿಧಿ.

ಅರವಿಂದ್ ಕೇಜ್ರಿವಾಲ್ ಗೆ ಕಪ್ಪುಬಾವುಟ ಸ್ವಾಗತ

ಅರವಿಂದ್ ಕೇಜ್ರಿವಾಲ್ ಗೆ ಕಪ್ಪುಬಾವುಟ ಸ್ವಾಗತ

ಬುಧವಾರ ಕೇಜ್ರಿವಾಲ್ ಅವರು ಗುಜರಾತಿನ ಪಟಾನ್ ಜಿಲ್ಲೆಗೆ ಆಗಮಿಸುತ್ತಿದ್ದಂತೆಯೇ ಸ್ಥಳೀಯರು ಕಪ್ಪುಬಾವುಟ ಪ್ರದರ್ಶಿಸಿದರು. ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ‌ಗೆ ಆಪ್ ಟಿಕೆಟ್ ನೀಡಿದ್ದನ್ನು ಖಂಡಿಸಿದ ಸ್ಥಳೀಯರು, ಕೇಜ್ರಿವಾಲ್ ಗುಜರಾತ್ ವಿರೋಧಿ ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು.

ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿಕೆ

ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿಕೆ

ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಆಪ್ ಕಾರ್ಯಕರ್ತರನ್ನು 'ನಗರದ ಮಾವೋವಾದಿಗಳು' ಎಂದು ಕರೆದಿದ್ದಾರೆ.ಟ್ವಿಟ್ಟರ್ ನಲ್ಲೂ #naxalaap ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ಈ ನಡುವೆ, ದೆಹಲಿಯಲ್ಲಿ ಘರ್ಷಣೆ ಆರಂಭವಾದ ಬೆನ್ನಲ್ಲೇ ಲಖನೌ ಹಾಗೂ ಗುಜರಾತ್ ‌ನ ಹಲವು ಭಾಗಗಳಲ್ಲೂ ಆಪ್-ಬಿಜೆಪಿ ಜಟಾಪಟಿ ನಡೆದವು.

ದೆಹಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ

ದೆಹಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ

ಕೇಜ್ರಿವಾಲ್ ಜ್ರಿವಾಲ್ ಬಂಧನದ ಸುದ್ದಿ ಹರಡುತ್ತಿದ್ದಂತೆಯೇ ಸುಮಾರು 400 ಮಂದಿ ಆಪ್ ಕಾರ್ಯಕರ್ತರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯತ್ತ ತೆರಳಿ ಪ್ರತಿಭಟನೆ ಆರಂಭಿಸಿದರು. ಸ್ವಲ್ಪವೇ ಹೊತ್ತಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಬಿಜೆಪಿ ಹಾಗೂ ಆಪ್ ಕಾರ್ಯಕರ್ತರ ನಡುವೆ ಪರಸ್ಪರ ಕಲ್ಲುತೂರಾಟ ಆರಂಭವಾಯಿತು.

ಪೊಲೀಸರಿಂದ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ

ಪೊಲೀಸರಿಂದ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ

ಪೊಲೀಸರು ಲಾಠಿಚಾರ್ಜ್ ಮಾಡಿ, ಜಲಫಿರಂಗಿ ಪ್ರಯೋಗಿಸಿ ಅಲ್ಲಿದ್ದವರನ್ನು ಚದುರಿಸಿದರು. ಆಪ್ ಕಾರ್ಯಕರ್ತರು ಬಿಜೆಪಿ ಕಚೇರಿಯ ಆವರಣದ ಗೋಡೆಗಳನ್ನು ಹತ್ತಲು ಪ್ರಯತ್ನಿಸಿದರು

ಬಿಜೆಪಿ ಕಚೇರಿಯಿಂದ ಕುರ್ಚಿ ಎಸೆತ

ಬಿಜೆಪಿ ಕಚೇರಿಯಿಂದ ಕುರ್ಚಿ ಎಸೆತ

ಆಪ್ ಕಾರ್ಯಕರ್ತರು ಬಿಜೆಪಿ ಕಚೇರಿಯ ಆವರಣದ ಗೋಡೆಗಳನ್ನು ಹತ್ತಲು ಪ್ರಯತ್ನಿಸಿದ್ದೂ ಕಂಡುಬಂತು. ಇದೇ ವೇಳೆ, ಆಪ್ ನಾಯಕರು, ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ಬಿಜೆಪಿ ಕಚೇರಿಯೊಳಗಿಂದಲೇ ಅಲ್ಲಿದ್ದವರು ಕಲ್ಲುಗಳು, ಕುರ್ಚಿಗಳನ್ನು ಎಸೆಯತೊಡಗಿದರು ಎಂದು ಆರೋಪಿಸಿದ್ದಾರೆ.

ಬಿಜೆಪಿ ಸದಸ್ಯರ ಸಮರ್ಥನೆ

ಬಿಜೆಪಿ ಸದಸ್ಯರ ಸಮರ್ಥನೆ

ಬಿಜೆಪಿ ಕಚೇರಿಯಿಂದ ಕುರ್ಚಿ ಎಸೆತ : ನಾವು ನಮ್ಮ ಸ್ವರಕ್ಷಣೆಗಾಗಿ ಹಾಗೆ ಮಾಡಿದೆವು ಎಂದ ಬಿಜೆಪಿ ಸದಸ್ಯರು

ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್

ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್

ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಆಪ್ ಕಾರ್ಯಕರ್ತರನ್ನು 'ನಗರದ ಮಾವೋವಾದಿಗಳು' ಎಂದು ಕರೆದಿದ್ದಾರೆ.

ಅರವಿಂದ್ ಕೇಜ್ರಿವಾಲ್ ಗೆ ಸಿಕ್ಕ ಸ್ವಾಗತ

ಅರವಿಂದ್ ಕೇಜ್ರಿವಾಲ್ ಗೆ ಸಿಕ್ಕ ಸ್ವಾಗತ

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾಲ್ಕು ದಿನಗಳ ಗುಜರಾತ್ ಪ್ರವಾಸ ಗೊಂದಲದಿಂದ ಆರಂಭಗೊಂಡು ಗದ್ದಲ, ದೊಂಬಿ, ಜಗಳ, ಗಲಭೆಯಲ್ಲಿ ಅಂತ್ಯಕಂಡಿದೆ.

English summary
AAP supporters protest at BJP office, face stone-pelting. Both the BJP and AAP are likely to meet the Election Commission The Delhi Police on Thursday arrested 14 Aam Aadmi Party workers for the clashes that broke out on Wednesday outside the Bharatiya Janata Party headquarters in the Delhi city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X