ಇನ್ಮುಂದೆ ಭಾರತೀಯ ವಾಯುಸೇನೆಯಲ್ಲಿ 'ನಾರಿ ಶಕ್ತಿ'
ನವದೆಹಲಿ, ಅಕ್ಟೋಬರ್, 08 : ಪ್ರತಿಯೊಂದು ಕ್ಷೇತ್ರದಲ್ಲಿ ಜಗಮೆಚ್ಚುವ ಸಾಧನೆ ಮಾಡುತ್ತಿರುವ ಮಹಿಳೆಯರು, ಭಾರತೀಯ ವಾಯುಸೇನೆ (ಐಎಎಫ್)ಯಲ್ಲಿ ಅಷ್ಟಾಗಿ ಕಾಣುತ್ತಿಲ್ಲ ಎಂಬ ಕೊರಗು ಇತ್ತು. ಆದರೆ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 'ನಾರಿ ಶಕ್ತಿ ಮಿಷನ್ ಯೋಜನೆ'ಯಿಂದ ಈ ಬೇಸರ ನೀಗುತ್ತಿದೆ.
ಭಾರತೀಯ ವಾಯುಸೇನಾ ಮುಖ್ಯ ಏರ್ ಚೀಫ್ ಮಾರ್ಷಲ್ ಅರುಪ್ ರಾಹ ಅವರು ಪ್ರಧಾನಿ ಮೋದಿ ಅವರ 'ನಾರಿ ಮಿಷನ್ ಯೋಜನೆ' ಅಡಿಯಲ್ಲಿ ಯುದ್ಧ ವಿಮಾನ ಹಾರಾಟ ನಡೆಸಲು ಮಹಿಳೆಯರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಹಿಂಡನ್ ಎಎಫ್ ಸ್ಟೇಷನ್ ನಲ್ಲಿ ನಡೆದ ಐಎಎಫ್ ನ 83ನೇ ವಾರ್ಷಿಕ ಪೆರೇಡ್ ಸಮಾರಂಭದಲ್ಲಿ ಈ ಮಹತ್ವದ ನಿರ್ಣಯ ಘೋಷಿಸಿದ್ದಾರೆ.[ಸಂತ್ರಸ್ತರ ರಕ್ಷಣೆ ನಿರತ ಪೈಲಟ್ ದಂಪತಿಗೆ ಜೈ]

ವಿಮಾನ ಹಾಗೂ ಹೆಲಿಕಾಫ್ಟರ್ ಚಾಲನೆಯಲ್ಲಿ ಸಾಕಷ್ಟು ಮಹಿಳೆಯರಿದ್ದಾರೆ. ಆದರೆ ಯುದ್ಧ ವಿಮಾನ ಚಾಲನೆಯಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆ ಇದೆ. ಹಾಗಾಗಿ ಭಾರತೀಯ ವಾಯು ಸೇನೆಯಲ್ಲಿ ಮಹಿಳೆಯರನ್ನು ಸೇರ್ಪಡೆ ಮಾಡಿಕೊಳ್ಳಲು ಇಚ್ಛಿಸಿದ್ದೇನೆ ಎಂದು ರಾಹಾ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಯುದ್ಧ ವಿಮಾನದಲ್ಲಿ ಮಹಿಳೆಯರ ಪಾಲು ಎಷ್ಟಿದೆ ಎಂದು ಪರಿಶೀಲನೆ ನಡೆಸಿದಾಗ, ಬೇರೆ ರಾಷ್ಟ್ರಗಳ ವಾಯುಸೇನೆಯಲ್ಲಿ ಅಫ್ಘಾನಿಸ್ತಾನದ ಮಹಿಳೆಯರಿರುವುದು ಮಾತ್ರ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಯುದ್ಧ ವಿಮಾನ ಕಾರ್ಯಾಚರಣೆಯಲ್ಲಿ ಮಹಿಳೆಯರಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.












Click it and Unblock the Notifications