ಕುಡಿತದ ಹುಚ್ಚು ಗಂಡನನ್ನೇ ಕೊಲ್ಲುವಂತೆ ಮಾಡುತ್ತಾ?

ನವದೆಹಲಿ, ಅಕ್ಟೋಬರ್, 24: ಸಾರಾಯಿ ಕೊಂಡುಕೊಳ್ಳಲು ಹಣ ನೀಡದ ಹೆಂಡತಿಯರನ್ನು, ತಾಯಿಯನ್ನು ಕೊಂದ ಪುರುಷರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ವಿಚಾರದಲ್ಲಿ ಈ ಪ್ರಕರಣ ಸಂಪೂರ್ಣ ಉಲ್ಟಾ ಆಗಿದ್ದು, ಗಂಡನನ್ನು ಕೊಂದ ಆರೋಪ ಎದುರಿಸುತ್ತಿದ್ದಾಳೆ.

ಹೌದು ಹೈದರಾಬಾದ್ ಮೂಲದ ರಾಮುಲಮ್ಮ ಎಂಬ ಮಹಿಳೆ, ತನ್ನ ಗಂಡ ಚಂದ್ರಯ್ಯ(53) ಸಾರಾಯಿ ಕೊಂಡುಕೊಳ್ಳಲು ಹಣ ಕೊಡುತ್ತಿಲ್ಲ ಎಂದು ಆರೋಪಿಸಿ ಗಂಡನನ್ನೇ ಹಿಂಸೆ ಮಾಡಿ ಕೊಂದು ಹಾಕಿದ ಘಟನೆ ಅಕ್ಟೋಬರ್ 23ರ ಶುಕ್ರವಾರ ನವದೆಹಲಿಯಲ್ಲಿ ನಡೆದಿದೆ. ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.[ಆಯುಧ ಪೂಜೆಯಂದು ಹೆಂಡಕ್ಕಾಗಿ ತಾಯಿಯನ್ನು ಬಲಿ ಪಡೆದ ಮಗ]

Hyderabad women murders her husband for not providing money for alcohal

ನಾಡಿನಾದ್ಯಂತ ದಸರಾ ಸಂಭ್ರಮ ಜೋರಾಗಿಯೇ ಇದ್ದು, ರಾಮುಲಮ್ಮ ತನ್ನ ಗಂಡನಿಗೆ ದುಶೆಹರಾ (ದಸರಾ) ಆಚರಣೆ ಮಾಡಲು ಸಾರಾಯಿ ತರಬೇಕು. ಹಣ ಕೊಡಿ ಎಂದು ಕೇಳಿದ್ದಾಳೆ. ಆದರೆ ಆಕೆಯ ಗಂಡ ಹಣ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಸಿಟಿಗೆದ್ದ ರಾಮುಲ್ಲಮ್ಮ ಗಂಡನನ್ನು ಹಿಂಸಿಸಿದ್ದಾಳೆ.[ಕರ್ನಾಟಕದಲ್ಲೇ ಹೆಚ್ಚು ಕುಡುಕ 'ಮಕ್ಕಳು' ಇರೋದು]

ರಾಮುಲಮ್ಮ ನೀಡಿದ ಹಿಂಸೆಯಿಂದ ಚಂದ್ರಯ್ಯ ಮನೆಯ ಅಂಗಳದಲ್ಲಿ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಆಗ ಆತನಿಗೆ ತಕ್ಷಣವೇ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಒಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್ ಇನ್ಸ್ ಪೆಕ್ಟರ್ ವಿ ಅಶೋಕ್ ರೆಡ್ಡಿ ಸ್ಪಷ್ಟನೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+