• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಜಾಣ' ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?

By ಒನ್ ಇಂಡಿಯಾ ಸಿಬ್ಬಂದಿ
|

ನವದೆಹಲಿ, ಡಿ. 12: ಬೆಂಗಳೂರಿನಿಂದ ಐಎಸ್ಐಎಸ್ ಪರ ಟ್ವಿಟ್ಟರ್ ಉಗ್ರ ಮೆಹದಿ ಮಸ್ರೂರ್ ಪರಾರಿಯಾಗಿದ್ದಾನೆ. ಪ್ರಸ್ತುತ ಈತನಿಗಾಗಿ ಹುಡುಕುತ್ತಿರುವ ಭಾರತದ ಗೂಢಚಾರ ಸಂಸ್ಥೆಗಳು ಬ್ರಿಟನ್ ಜೊತೆ ನಿರಂತರ ಸಂಪರ್ಕದಲ್ಲಿವೆ.

ಈ ಉಗ್ರನಿಗೂ ಬ್ರಿಟನ್‌ಗೂ ಎಲ್ಲಿಗೆಲ್ಲಿಯ ಸಂಬಂಧ ಎನ್ನುತ್ತೀರಾ? ನಿಮಗೆ ಗೊತ್ತೆ ಐಎಸ್ಐಎಸ್ ಬೆಂಬಲಿಗರು ಅತಿ ದೊಡ್ಡ ಸಂಖ್ಯೆಯಲ್ಲಿರುವುದು ಬ್ರಿಟನ್‌ನಲ್ಲಿಯೇ. ಆದ್ದರಿಂದಲೇ ಈ @shamiwitness ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿದ್ದ ಉಗ್ರ ಮೆಹದಿ ಇರಾಕ್ ಹಾಗೂ ಬ್ರಿಟನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. [ಬೆಂಗಳೂರಿನಿಂದ ಪರಾರಿಯಾದನೇ ಮೆಹದಿ?]

ಇಸ್ರೇಲ್‌ಗಿಂತ ಇರಾನ್ ದೊಡ್ಡ ಸವಾಲು: ಐಎಸ್ಐಎಸ್ ಸುಮಾರು 21,000 ಟ್ವಿಟ್ಟರ್ ಖಾತೆಗಳನ್ನು ನಿರ್ವಹಿಸುತ್ತಿದೆ ಎನ್ನಲಾಗಿದ್ದು, ಅವುಗಳಲ್ಲಿ ಮೆಹದಿ ಓರ್ವ ಅಷ್ಟೇ. ಆತ ಬ್ರಿಟನ್‌ ಹೋರಾಟಗಾರರೊಂದಿಗೆ ಸಂಪರ್ಕದಲ್ಲಿದ್ದ ಮತ್ತು ಅವರಿಂದ ಮಾಹಿತಿ ಪಡೆಯುತ್ತಿದ್ದ ಎಂಬುದು ಮಾತ್ರ ಇದುವರೆಗೆ ಆತನ ಕುರಿತು ತಿಳಿದ ವಿಷಯ. ಸಿರಿಯಾದಲ್ಲಿ ಐಎಸ್ಐಎಸ್ ಹೋರಾಟ ಆರಂಭಿಸಿದಾಗಲೇ ಅದರತ್ತ ಮೆಹದಿ ಆಕರ್ಷಿತನಾಗಿದ್ದ. ಅಲ್ಲದೆ, ಸುನ್ನಿಗಳಿಗೆ ಇಸ್ರೇಲ್‌ಗಿಂತ ಇರಾನ್ ಬಹುದೊಡ್ಡ ಸವಾಲಾಗಲಿದೆ ಎಂದು ವಾದಿಸುತ್ತಿದ್ದ.

ಮೆಹದಿ ಮಸ್ರೂರ್ ಬಿಸ್ವಾಸ್ ಟ್ವಿಟ್ಟರ್‌ನಲ್ಲಿ ಪ್ರಸಾರ ಮಾಡುತ್ತಿದ್ದ ಸಂದೇಶಗಳೆಲ್ಲ ಬ್ರಿಟನ್, ಇರಾಕ್ ಅಥವಾ ಸಿರಿಯಾಕ್ಕೆ ಸಂಬಂಧಿಸಿದ್ದು. ಒಂದು ವರ್ಷದಿಂದ ಆತ ಕಳುಹಿಸುತ್ತಿದ್ದ ಸಂದೇಶಗಳು ಭಾರೀ ಪ್ರಭಾವಿಯಾಗಿದ್ದವು. ಐಎಸ್ಐಎಸ್ ಸಂಘಟನೆಯು ಇರಾಕ್‌ನ ಅಲ್ ಖೈದಾ ಎಂದು ಕರೆಸಿಕೊಂಡ ದಿನದಿಂದಲೂ ಆತ ಈ ಸಂಘಟನೆ ಜೊತೆಗಿದ್ದ. ಆತ ಐಎಸ್ಐಎಸ್ ಪರ ಆಳವಾದ ವಾದ ಮಂಡಿಸುತ್ತಿದ್ದ. ಆದ್ದರಿಂದ ಮೆಹದಿ ಐಎಸ್ಐಎಸ್ ಸಂಘಟನೆಗೆ ಬಹುದೊಡ್ಡ ಆಸ್ತಿಯಾಗಿದ್ದ. [ಟ್ವಿಟ್ಟರ್ ಉಗ್ರನ ರಹಸ್ಯ ಬಯಲು]

ವಿದೇಶೀಯರೊಂದಿಗೆ ಮಾತ್ರ ಸಂಪರ್ಕ: ಮೆಹದಿ ಮಸ್ರೂರ್ ಬೆಂಗಳೂರಿನಲ್ಲಿದ್ದರೂ ಇಲ್ಲಿನವರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ತನ್ನ ಗುರುತು ಬಯಲಾಗಬಹುದು ಎಂಬ ಭಯವೇ ಇದಕ್ಕೆ ಕಾರಣವಿರಬಹುದು. ಆತನೊಂದಿಗೆ ಸಂವಹನ ನಡೆಸುತ್ತಿದ್ದವರಲ್ಲಿ ಹೆಚ್ಚಿನವರು ಬ್ರಿಟನ್ನರು. ಅಲ್ಲಿಯ ಆಕ್ಸ್‌ಫರ್ಡ್ ವಿದ್ಯಾರ್ಥಿ ಅಯ್ಮನ್ ಅಲ್ ತಮಿಮಿ ಎಂಬಾತ ತನ್ನ ಬ್ಲಾಗ್‌ನಲ್ಲಿ ಮೆಹದಿಯ ಟ್ವಿಟ್ಟರ್ ಖಾತೆಯ ಕುರಿತು ಪ್ರಸ್ತಾಪಿಸಿದ್ದಾನೆ.

2011ರ ನವೆಂಬರ್ ತಿಂಗಳಿನಲ್ಲಿಯೇ ಟ್ವಿಟ್ಟರ್ ಖಾತೆ ಆರಂಭಿಸಿದ್ದ ಮೆಹದಿ ಸಿರಿಯಾ ಕುರಿತು ಮಾತನಾಡುತ್ತಿದ್ದ. ದೀರ್ಘ ಕಾಲದಿಂದ ಆತ ಸಿಕ್ಕಿಬಿದ್ದಿರಲಿಲ್ಲ. ಆತ ಇರಾಕ್ ದೇಶದವನು ಎಂಬ ಅನುಮಾನ ವ್ಯಕ್ತವಾಗಿತ್ತು. ಆತ ಎಂದಿಗೂ ಭಾರತದ ಕುರಿತು ಮಾತನಾಡಿರಲಿಲ್ಲ. ಆದ್ದರಿಂದ ಭಾರತೀಯ ಏಜೆನ್ಸಿಗಳು ಆತನ ಕುರಿತು ಲಕ್ಷ್ಯಕೊಟ್ಟಿರಲಿಲ್ಲ. [ಉಗ್ರ ಬಾಯಿ ಬಿಟ್ಟ ಸ್ಫೋಟಕ ಮಾಹಿತಿ]

ಒಂದು ವೇಳೆ ಆತ ಭಾರತದಲ್ಲಿ ಸಿಕ್ಕಿಬಿದ್ದರೆ ಆತನ ವಿರುದ್ಧ ಯಾವ ತನಿಖೆ ಕೈಗೊಳ್ಳಲಾಗುತ್ತಿತ್ತು. ಭಾರತದಲ್ಲಿ ಇನ್ನೂ ಐಎಸ್ಐಎಸ್ ನಿಷೇಧಿಸಲಾಗಿಲ್ಲ. ಹೆಸರು ಹೇಳಲಿಚ್ಛಿಸದ ಓರ್ವ ಅಧಿಕಾರಿ ಪ್ರಕರಣ ಕುರಿತು ಈಗಲೇ ಏನೂ ಹೇಳುವುದು ಸಾಧ್ಯವಿಲ್ಲ ಎಂದಿದ್ದಾರೆ. ಈತನಿಗಾಗಿ ಹುಡುಕುತ್ತಿರುವ ಭಾರತೀಯ ಏಜೆನ್ಸಿಗಳಿಗೆ ಇದುವರೆಗೆ ಆತನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಖಾತೆಗಳನ್ನು ಅಳಿಸಿ ಹಾಕಿದ: ವಿಷಯ ಹೊರಬರುತ್ತಿದ್ದಂತೆ ಎಚ್ಚೆತ್ತಿರುವ ಮೆಹದಿ ತಾನು ನಿರ್ವಹಿಸುತ್ತಿದ್ದ ಎಲ್ಲ ಟ್ವಿಟ್ಟರ್ ಖಾತೆಗಳನ್ನು ಹಾಗೂ ವಿವರಗಳನ್ನು ಅಳಿಸಿಹಾಕಿದ್ದಾನೆ. ಆತ ಪಶ್ಚಿಮ ಬಂಗಾಳದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದ. ಎರಡು ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕೆಲಸ ಸಿಕ್ಕ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದ. [ಒಂದು ಕೈಯಲ್ಲಿ ಎಕೆ 47, ಇನ್ನೊಂದು ಕೈಯಲ್ಲಿ ಮಗು]

ಆತ ಟ್ವಿಟ್ಟರ್ ಖಾತೆಯನ್ನು 2011ರಲ್ಲಿ ಆರಂಭಿಸಿದಾಗ ಕೇವಲ 1,200 ಫಾಲೋವರ್‌ಗಳು ಇದ್ದರು. ಆದರೆ, ಈಗ ಖಾತೆ ಅಳಿಸಿಹಾಕುವ ಸಂದರ್ಭದಲ್ಲಿ ಆತ 17,700 ಜನ ಫಾಲೋವರ್‌ಗಳನ್ನು ಹೊಂದಿದ್ದ. ಇದು ಆತನ ಬರವಣಿಗೆ ಎಷ್ಟು ಪ್ರಭಾವಿಯಾಗಿತ್ತು ಎಂಬುದನ್ನು ತೋರಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mehdi Masroor Biswas had stayed away from India for the fear of his cover being blown and he was enjoying all the adulation that he was getting from foreign fighters. Most of his interactions were from Britain. His tweets were in depth according to his accomplices who felt that he understood the subject very well. He wrote and shared a lot of his views with his online friends and most of the discussions pertained to the ISIS who he very often termed as Syrian revolutionaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more