'ಮನ್ ಕಿ ಬಾತ್' ನಲ್ಲಿ ಮೋದಿ ಹೊಗಳಿದ ಬಾಲಕಿ ಯಾರು?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್ 27: ಪ್ರಧಾನಿ ನರೇಂದ್ರ ಮೋದಿ, ಮಾರ್ಚ್ 26, ಭಾನುವಾರದಂದು ತಮ್ಮ 30 ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪ್ರತಿಬಾರಿ ಒಂದಿಲ್ಲೊಂದು ವಿಷಯಕ್ಕಾಗಿ ಚರ್ಚೆಯಾಗುವ ಪ್ರಧಾನಿಯರ ಮನ್ ಕಿ ಬಾತ್ ಈ ಬಾರಿ ಸುದ್ದಿಯಾಗಿದ್ದು, ಒಬ್ಬ 16 ವರ್ಷದ ಬಾಲಕಿಯ ವಿಷಯವನ್ನು ಮೋದಿ ಪ್ರಸ್ತಾಪಿಸಿದ ಕಾರಣಕ್ಕಾಗಿ.

ಡೆಹ್ರಾಡೂನ್ ನ ಅಜಬ್ ಪುರ ಎಂಬ ಹಳ್ಳಿಯ ಗಾಯತ್ರಿ ಸಿಂಗ್ ಅವರಿಗೆ, ಸುತ್ತಲ ಹಲವು ಊರಿಗೆ ನೀರು ನೀಡುತ್ತಿದ್ದ ರಿಸ್ಪಾನಾ ಎಂಬ ನದಿ ಇದೀಗ ತ್ಯಾಜ್ಯ ವಿಲೇವಾರಿ ಕೇಂದ್ರದಂತಾಗಿರುವುದರ ಬಗ್ಗೆ ಬೇಸರವಿತ್ತು. ಈ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕೋಪವೂ ಇತ್ತು. ಆದರೆ ಇವಕ್ಕೆಲ್ಲ ಪರಿಹಾರವೇನು ಎಂಬುದು ಗೊತ್ತಿರಲಿಲ್ಲ.[ಉತ್ತರ ಪ್ರದೇಶ ಸಂಸದರಿಗೆ ಪಾಠ ಹೇಳಿದ ಮೋದಿ, ಶಾ]

ತಮ್ಮೂರಿನ ಸಮಸ್ಯೆಯನ್ನು ಪ್ರಧಾನಿ ಮೋದಿಯವರಿಗೆ ತಿಳಿಸಿದರೆ ಏನಾದರೂ ಪ್ರಯೋಜನವಾದೀತು ಎಂದೆನ್ನಿಸಿದರೂ ಅವರನ್ನು ಸಂಪರ್ಕಿಸುವುದು ಹೇಗೆಂಬುದು ಗೊತ್ತಿರಲಿಲ್ಲ. ಆಗ ನೆನಪಾಗಿದ್ದು ಮನ್ ಕಿ ಬಾತ್ ಕಾರ್ಯಕ್ರಮ![ಗುಜರಾತ್, ರಾಜಸ್ಥಾನದ ಎಂಪಿಗಳನ್ನು ತುರ್ತಾಗಿ ಮೋದಿ ಭೇಟಿಯಾಗಿದ್ದು ಯಾಕೆ?]

ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ತಿಳಿದಿದ್ದ ಗಾಯತ್ರಿ ತಮ್ಮೂರಿನ ದೂರದರ್ಶನ ಕಚೇರಿಗೆ ನೇರವಾಗಿ ಹೋಗಿ ತನ್ನ ಅಳಲನ್ನು ತೋಡಿಕೊಂದು, ತನ್ನ ಮನವಿಯನ್ನು ಪ್ರಧಾನಿಯವರಿಗೆ ತಿಳಿಸಬೇಕೆಂದು ಕೇಳಿಕೊಂಡಳು. ದೂರದರ್ಶನ ಅದಕ್ಕೆ ಒಪ್ಪಿಗೆ ನೀಡಿತು.[ಮೋದಿ ಆದರ್ಶಗಳಿಗೆ ಮರುಳಾಗಿ ಬಿಜೆಪಿ ಸೇರಿದೆ: ಎಸ್ಸೆಂ ಕೃಷ್ಣ]

ಆಕೆ ಮಾತನಾಡಿದ ಆಡಿಯೋ ಕ್ಲಿಪ್ ಅನ್ನು ಮೋದಿಯವರು ತಾವಷ್ಟೇ ಅಲ್ಲದೆ, ಇಡೀ ಭಾರತವೂ ಕೇಳುವಂತೆ ಮಾಡಿದರು. ಜೀವಜಲವನ್ನು ಕಸದ ತೊಟ್ಟಿಯನ್ನಾಗಿ ಮಾಡುತ್ತಿರುವ ಜನರ ಕುರಿತು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಗಾಯತ್ರಿಯವರ ಧೈರ್ಯವನ್ನು, ದೇಶದ ಬಗೆಗಿನ ಕಾಳಜಿಯನ್ನು ಮೋದಿ ಮೆಚ್ಚಿಕೊಂಡರು.[ನರೇಂದ್ರ ಮೋದಿ ಅಶ್ವಮೇಧ ಯಾಗ ವಿಫಲಗೊಳಿಸಲು ಮೆಗಾಪ್ಲಾನ್]

ನಮ್ಮ ಸ್ವಚ್ಛ ಭಾರತ ಅಭಿಯಾನಕ್ಕೆ ಗಾಯತ್ರಿ ಅವರ ಮಾತುಗಳು ಪ್ರೇರಣಾದಾಯಿಯಾಗಿವೆ. ಗಾಯತ್ರಿಯವರಂತೆಯೇ ಎಲ್ಲ ನಾಗರಿಕರಿಗೂ ತಾವು ವಾಸಿಸುವ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಕಾಳಜಿ ಮೂಡಿದ್ದೇ ಆದಲ್ಲಿ ಸ್ವಚ್ಛ ಭಾರತದ ಪರಿಕಲ್ಪನೆ ವಾಸ್ತವಕ್ಕೆ ಬರುತ್ತದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the 30th edition of 'Mann ki Baat," Prime Minister Narendra Modi quoted an appeal by a 16 year old girl Gayatri singh, from Dehradun. He was so moved by the appeal that he included the girl's audio clip in the edition of 'Mann ki Baat.'
Please Wait while comments are loading...