ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ರಾಷ್ಟ್ರಪತಿ ಚುನಾವಣೆ: ಕುಲಗೆಟ್ಟ ಮತದಾನ ತಡೆಯಲು ಬಿಜೆಪಿ ತರಬೇತಿ!

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕುಲಗೆಟ್ಟ ಮತದಾನ ತಡೆಯಲು ಬಿಜೆಪಿ ಕ್ರಮ. ಶನಿವಾರ (ಆಗಸ್ಟ್ 5) ನಡೆಯಲಿರುವ ಭಾರತದ ಉಪರಾಷ್ಟ್ರಪತಿ ಚುನಾವಣೆ. ಕಳೆದ ರಾಷ್ಟ್ರಪತಿ ಚುನಾವಣೆಯಲ್ಲಿ ಕುಲಗೆಟ್ಟ ಮತ ಚಲಾಯಿಸಿದ್ದ ಎನ್ ಡಿಎಯ 16 ಸಂಸದರಿಗೆ ವಿಶೇಷ ತರಬೇ

|
Google Oneindia Kannada News

ನವದೆಹಲಿ, ಆಗಸ್ಟ್ 4: ಶನಿವಾರ (ಆಗಸ್ಟ್ 5) ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕುಲಗೆಟ್ಟ ಮತದಾನ ತಪ್ಪಿಸಲು ಬಿಜೆಪಿ, ತನ್ನ ಹಾಗೂ ಎನ್ ಡಿಎ ಅಂಗಪಕ್ಷಗಳ ಸಂಸದರಿಗೆ ವಿಶೇಷ ತರಗತಿ ಆಯೋಜಿಸಿದೆ.

ಕಳೆದ ತಿಂಗಳು ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ದೇಶದಾದ್ಯಂತ ಚಲಾವಣೆಗೊಂಡಿದ್ದ ಸಂಸದರ ಮತಗಳಲ್ಲಿ ಒಟ್ಟು 21 ಮತಗಳು ಕುಲಗೆಟ್ಟ ಮತಗಳೆನಿಸಿದ್ದವು. ಇವುಗಳಲ್ಲಿ 16 ಮತಗಳು ಎನ್ ಡಿಎ ಸಂಸದರದ್ದೇ ಆಗಿತ್ತು. ಹಾಗಾಗಿ, ಈ ಮತ ಚಲಾಯಿಸಿದ ಎನ್ ಡಿಎ ಸಂಸದರಿಗೆ ಮಾತ್ರ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದೆ.

ಉಪರಾಷ್ಟ್ರಪತಿ ಚುನಾವಣೆ, ಆಗಸ್ಟ್ 5 ಸಂಜೆ ಫಲಿತಾಂಶಉಪರಾಷ್ಟ್ರಪತಿ ಚುನಾವಣೆ, ಆಗಸ್ಟ್ 5 ಸಂಜೆ ಫಲಿತಾಂಶ

Hours Before Vice President Election, 16 NDA Lawmakers Get 'Dummy Vote' Wrong

ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆಯಲಿರುವ ಸಂಸತ್ತಿನ ಗ್ರಂಥಾಲಯದಲ್ಲಿ ಆಗಸ್ಟ್ 5ರ ಬೆಳಗ್ಗೆ ಸೇರುವಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. ಅಲ್ಲಿ, ಮತದಾನ ಕುರಿತಂತೆ ವಿಶೇಷ ತರಬೇತಿ ನೀಡಲಾಗುತ್ತದೆ. ಆನಂತರ, 10 ಗಂಟೆಗೆ ಆರಂಭವಾಗುವ ಮತದಾನದಲ್ಲಿ ಅವರು ಭಾಗಿಯಾಗಬಹುದೆಂದು ತನ್ನ ಸೂಚನೆಯಲ್ಲಿ ಅದು ತಿಳಿಸಿದೆ.

488 ಸಂಸದರ ಮತಗಳೊಂದಿಗೆ ನಾಯ್ಡು ಮುಂದಿನ ಉಪರಾಷ್ಟ್ರಪತಿ488 ಸಂಸದರ ಮತಗಳೊಂದಿಗೆ ನಾಯ್ಡು ಮುಂದಿನ ಉಪರಾಷ್ಟ್ರಪತಿ

ರಾಷ್ಟ್ರಪತಿ ಚುನಾವಣೆಗೂ ಮುನ್ನವೇ ಇಂಥದ್ದೊಂದು ತರಬೇತಿ ನಡೆಸಲಾಗಿತ್ತಾದರೂ, ತನ್ನ ಸಂಸದರು ಇಂಥ ಅವಗಢ ಮಾಡಿದ್ದರಿಂದಾಗಿ ಬಿಜೆಪಿ ಮುಜುಗರಕ್ಕೀಡಾಗಿದ್ದು, ಮತ್ತೊಮ್ಮೆ ಅಂಥ ಮುಜುಗರ ತಪ್ಪಿಸಲು ಈ ಕ್ರಮ ಕೈಗೊಂಡಿದೆ.

English summary
A day before elections for Vice President, lawmakers from the ruling BJP and its allies attended a workshop on how to vote, following it up with a "dummy vote" to ensure minimum invalid votes tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X