• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಹಿಂದುತ್ವ ನೀತಿ' ರಚಿತ ಚಿತ್ರಣ - ಯುಎಸ್‌ನಲ್ಲಿ ಜೈ ಶಂಕರ್‌

|

ನವದೆಹಲಿ, ಮೇ 28: ಭಾರತದಲ್ಲಿ ಹಿಂದುತ್ವ ನೀತಿಗಳಿದೆ ಎಂಬ ಟೀಕೆಗಳು ಕೇಳಿಬರುತ್ತಿರುವ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರಚಿತ ರಾಜಕೀಯ ಚಿತ್ರಣ ಮತ್ತು ದೇಶದ ನಿಜವಾದ ಆಡಳಿತ ದಾಖಲೆಯ ನಡುವೆ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವರು ಪ್ರಸ್ತುತ ಐದು ದಿನಗಳ ಯುಎಸ್ ಪ್ರವಾಸದಲ್ಲಿದ್ದಾರೆ, ಬಿಡೆನ್ ಆಡಳಿತವು ಅಧಿಕಾರ ವಹಿಸಿಕೊಂಡ ನಂತರ ಭಾರತದ ಹಿರಿಯ ಮುಖಂಡರಲ್ಲಿ ಅಮೆರಿಕಕ್ಕೆ ತೆರಳಿದ ಮೊದಲಿಗರು ಜೈಶಂಕರ್‌.

ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ಆರಂಭ: ಕೋವಿಡ್ ಲಸಿಕೆ ಬಗ್ಗೆ ಮಹತ್ವದ ಚರ್ಚೆ ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ಆರಂಭ: ಕೋವಿಡ್ ಲಸಿಕೆ ಬಗ್ಗೆ ಮಹತ್ವದ ಚರ್ಚೆ

ಈ ಐದು ದಿನಗಳ ಪ್ರವಾಸದ ಸಂದರ್ಭ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್‌ಆರ್ ಮೆಕ್‌ಮಾಸ್ಟರ್ ಆಯೋಜಿಸಿದ್ದ ಯುದ್ಧಭೂಮಿ ಸರಣಿಯ ವಾಸ್ತವಿಕ ಚರ್ಚೆಗಳಲ್ಲಿ ಭಾಗವಹಿಸಿದ ಜೈಶಂಕರ್, ಭಾರತೀಯರಾದ ನಾವು ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ವಿಶ್ವಾಸ ಹೊಂದಿದ್ದೇವೆ, ಪರ್ಯಾಯ ಆಡಳಿತಕ್ಕಾಗಿ ನಾವು ಯಾರೂ ಪ್ರಜಾಪ್ರಭುತ್ವವನ್ನು ಮಾರಾಟಕಿಡಲಾರೆವು ಎಂದಿದ್ದಾರೆ.

ಆಡಳಿತದ ದಾಖಲೆ ಮತ್ತು ರಾಜಕೀಯ ಚಿತ್ರಣಗಳ ನಡುವೆ ವ್ಯತ್ಯಾಸವಿದೆ

ಆಡಳಿತದ ದಾಖಲೆ ಮತ್ತು ರಾಜಕೀಯ ಚಿತ್ರಣಗಳ ನಡುವೆ ವ್ಯತ್ಯಾಸವಿದೆ

ಇ‌ನ್ನು ಈ ಸಂದರ್ಭದಲ್ಲೇ "ಭಾರತೀಯ ಪ್ರಜಾಪ್ರಭುತ್ವದ ಜಾತ್ಯತೀತ ಸ್ವರೂಪವನ್ನು ಹಾಳುಗೆಡವಬಲ್ಲ ಹಿಂದೂತ್ವ ನೀತಿಗಳ" ಬಗ್ಗೆ ಹಾಗೂ ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ವಿಶ್ವದಾದ್ಯಂತದ ಪ್ರಜಾಪ್ರಭುತ್ವ ರಾಷ್ಟ್ರಗಳ ಸವಾಲುಗಳು ಬಗ್ಗೆ ಮೆಕ್‌ಮಾಸ್ಟರ್ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜೈಶಂಕರ್, "ನೀವು ನಿಜವಾದ ಆಡಳಿತದ ಬಗ್ಗೆ ಮಾತನಾಡುವುದಾದರೆ, ಆಡಳಿತದ ದಾಖಲೆ ಮತ್ತು ರಾಜಕೀಯ ಚಿತ್ರಣಗಳ ನಡುವೆ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ಪರಿಸ್ಥಿತಿ ಹಿಡಿತಕ್ಕೆ ತರಲು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ಹಿಂಪಡೆಯಬೇಕು:ಜೈಶಂಕರ್ಪರಿಸ್ಥಿತಿ ಹಿಡಿತಕ್ಕೆ ತರಲು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ಹಿಂಪಡೆಯಬೇಕು:ಜೈಶಂಕರ್

 ಮತ ಬ್ಯಾಂಕ್ ರಾಜಕಾರಣ, ಧರ್ಮ ರಾಜಕಾರಣ ಬಗ್ಗೆ ಹೇಳಿದ್ದೇನು?

ಮತ ಬ್ಯಾಂಕ್ ರಾಜಕಾರಣ, ಧರ್ಮ ರಾಜಕಾರಣ ಬಗ್ಗೆ ಹೇಳಿದ್ದೇನು?

ಮತ ಬ್ಯಾಂಕ್ ರಾಜಕಾರಣ ಹಾಗೂ ಮತದಾರರನ್ನು ನಂಬಿಕೆಗಳ ಆಧಾರದ ಮೇಲೆ ವಿಭಾಗ ಮಾಡುವ ಬಗ್ಗೆ ಮಾತನಾಡಿದ ಅವರು, ನಾವು ಮತ ಬ್ಯಾಂಕ್ ರಾಜಕಾರಣದಿಂದ ಹೊರಬಂದಿದ್ದೇವೆ. ಭಾರತವು ಅನೇಕ ನಂಬಿಕೆಗಳ ದೇಶವಾಗಿದ್ದು, ಪ್ರಪಂಚದ ಎಲ್ಲೆಡೆ ಸಂಸ್ಕೃತಿಯನ್ನು ಪಸರಿಸಿದೆ. ನಮ್ಮ ಸಮಾಜದಲ್ಲಿ, ನಾವು ಜಾತ್ಯತೀತತೆ ಮಹತ್ವ ನೀಡುತ್ತೇವೆ. ಎಲ್ಲಾ ನಂಬಿಕೆಗಳಿಗೆ ಸಮಾನ ಗೌರವ ನೀಡುತ್ತೇವೆ. ಜಾತ್ಯತೀತತೆ ಎಂದರೆ ನಮ್ಮ ಸ್ವಂತ ನಂಬಿಕೆ ಅಥವಾ ಬೇರೆಯವರ ನಂಬಿಕೆಯನ್ನು ತಿರಸ್ಕರಿಸುತ್ತದೆ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ಸಂದರ್ಭ ರೇಷನ್‌

ಕೋವಿಡ್‌ ಸಾಂಕ್ರಾಮಿಕ ಸಂದರ್ಭ ರೇಷನ್‌

ಸಾಂಕ್ರಾಮಿಕ ರೋಗದಿಂದಾಗಿ ನಾವು ಇದೀಗ ಬಹಳ ಒತ್ತಡದ ಸಮಯವನ್ನು ಎದುರಿಸುತ್ತಿದ್ದೇವೆ. ನಾವು ಕಳೆದ ವರ್ಷ ಅನೇಕ ತಿಂಗಳುಗಳ ಕಾಲ ಉಚಿತ ರೇಷನ್‌ ನೀಡಿದ್ದೆವು. ಈಗ ಎರಡನೇ ಅಲೆಯ ಸಂದರ್ಭವೂ 800 ದಶಲಕ್ಷ ಜನರಿಗೆ ಉಚಿತ ರೇಷನ್‌ ನೀಡುತ್ತಿದ್ದೇವೆ. ನಾವು 400 ಮಿಲಿಯನ್ ಜನರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದೇವೆ ಎಂದು ಜೈ ಶಂಕರ್‌ ತಿಳಿಸಿದ್ದಾರೆ.

ರಷ್ಯಾ ವಿದೇಶಾಂಗ ಸಚಿವರ ಎರಡು ದಿನಗಳ ಭಾರತ ಭೇಟಿರಷ್ಯಾ ವಿದೇಶಾಂಗ ಸಚಿವರ ಎರಡು ದಿನಗಳ ಭಾರತ ಭೇಟಿ

ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ವಿಶ್ವಾಸ ಹೊಂದಿರುವವರು ನಾವು

ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ವಿಶ್ವಾಸ ಹೊಂದಿರುವವರು ನಾವು

ನಾವು ಭಾರತೀಯರು ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ವಿಶ್ವಾಸ ಹೊಂದಿದ್ದೇವೆ. ಅದು ನಿಜವಾಗಿಯೂ ರಾಜಕೀಯ ವ್ಯವಸ್ಥೆ ಮತ್ತು ನಮಗೆ ಸೂಕ್ತವಾದ ಮೌಲ್ಯ ವ್ಯವಸ್ಥೆ ಎಂದು ನಾವು ನಂಬುತ್ತೇವೆ. ಏಕೆಂದರೆ ನಮ್ಮ ವೈವಿಧ್ಯತೆ ಮತ್ತು ವಿವಿಧ ನಂಬಿಕೆ, ಸಂಸ್ಕೃತಿಗೆ ಪ್ರಜಾಪ್ರಭುತ್ವ ರಕ್ಷಣೆ ಎಂದಿದ್ದಾರೆ ಜೈ ಶಂಕರ್‌.

ಭಾರತದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರ

ಭಾರತದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರ

ಭಾರತದಲ್ಲಿ ಹಲವಾರು ವರ್ಷಗಳಿಂದ ಚುನಾವಣಾ ವ್ಯವಸ್ಥೆಯಿದೆ. ಚುನಾವಣೆಯಲ್ಲಿ ಸೋತ ಆಡಳಿತರೂಢ ಪಕ್ಷವು ಶಾಂತಿಯುತವಾಗಿ ಅಧಿಕಾರವನ್ನು ಹಸ್ತಾಂತರ ಮಾಡುತ್ತಿದೆ. ಚುನಾವಣೆಗಳು ವಿವಿಧ ಹಂತಗಳಲ್ಲಿ ನಡೆಯುತ್ತದೆ. ಸರ್ಕಾರ ಬದಲಾಗುತ್ತಲೇ ಇದೆ. ಇದು "ಪ್ರಜಾಪ್ರಭುತ್ವವು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಪುರಾವೆಯಾಗಿದೆ" ಎಂದು ತಿಳಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Hindutva policies concocted imagery says Jaishankar in US while answering to the questions asked by former US national security adviser HR McMaster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X