• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾಗೆ 'ಕ್ಲೀನ್ ಚಿಟ್' ನೀಡಿದ್ರಾ ಮೋದಿ? ಪಿ ಚಿದಂಬರಂ ಸರಣಿ ಪ್ರಶ್ನೆಗಳು

|

ದೆಹಲಿ, ಜೂನ್ 20: ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಮತ್ತು ಭಾರತ ಘರ್ಷಣೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಖಂಡಿಸಿರುವ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ''ಚೀನಾಗೆ ಪ್ರಧಾನಿ ಮೋದಿ ಕ್ಲೀನ್ ಚಿಟ್ ನೀಡಿದ್ದಾರೆಯೇ''? ಎಂದು ಪ್ರಶ್ನಿಸಿದ್ದಾರೆ.

   ಕೊರೊನ ಸೋಂಕಿತ MLA ಹೊರಗೆ ಬಂದು ಮತ ಚಲಾಯಿಸಿದ ವಿಚಿತ್ರ ಘಟನೆ | Oneindia Kannada

   ಚೀನಾ ಮತ್ತು ಭಾರತದ ಘರ್ಷಣೆ ಹಿನ್ನೆಲೆ ಸರ್ವಪಕ್ಷ ಸಭೆ ಕರೆದಿದ್ದ ಮೋದಿ ''ಭಾರತದ ಗಡಿಯೊಳಗೆ ಯಾರೂ ಪ್ರವೇಶ ಮಾಡಿಲ್ಲ'' ಎಂದು ಹೇಳಿದ್ದರು. ಈ ಹೇಳಿಕೆ ಖಂಡಿಸಿರುವ ಪಿ ಚಿದಂಬರಂ ''ಹಾಗಾದ್ರೆ, ಭಾರತದ ಸೈನಿಕರನ್ನು ಕೊಂದಿದ್ದು ಯಾರು"? ಎಂದು ಕೇಳಿದ್ದಾರೆ.

   'ಚೀನಾ ಆಕ್ರಮಣಕ್ಕೆ ಲಡಾಖ್ ಬಿಟ್ಟುಕೊಟ್ರಾ ಮೋದಿ?' ರಾಹುಲ್ ಗಾಂಧಿ ಪ್ರಶ್ನೆ

   ಶನಿವಾರ ಸರಣಿ ಟ್ವೀಟ್ ಮಾಡಿರುವ ಚಿದಂಬರಂ ಭಾರತ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. 'ದೇಶದ ರಕ್ಷಣೆ ವಿಷಯವನ್ನು ಚರ್ಚಿಸಬೇಕಾದ ಸಮಯದಲ್ಲಿ ಚೀನಾ ವಸ್ತು ನಿಷೇಧದ ಕೂಗು ಬೇಕಾಗಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಓದಿ.....

   ಚೀನಾ 'ಕ್ಲೀನ್ ಚಿಟ್' ನೀಡಿದಂತೆ?

   ಗಡಿಯೊಳಗೆ ಯಾರೂ ಪ್ರವೇಶ ಮಾಡಿಲ್ಲ ಎಂದು ಮೋದಿ ಹೇಳುವ ಮೂಲಕ ಪ್ರಧಾನಿ ಮೋದಿ ಚೀನಾಗೆ ಕ್ಲೀನ್ ಚಿಟ್ ನೀಡಿದ್ದಾರಯೇ? ಎಂದು ಪಿ ಚಿದಂಬರಂ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ. ''ಹಾಗಾದ್ರೆ ಚೀನಾದೊಂದಿಗೆ ಮಾತುಕತೆ ನಡೆಸಲು ಏನು ಇದೆ? ಮೇಜರ್ ಜನರಲ್‌ಗಳು ಏಕೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಯಾವುದರ ಬಗ್ಗೆ ಚರ್ಚೆಯಾಗ್ತಿದೆ?'' ಎಂದು ಕೇಳಿದ್ದಾರೆ.

   ಸೇನೆ ನಿಷ್ಕ್ರಿಯಗೊಳಿಸುವ ಚರ್ಚೆ ಏಕೆ?

   ಸೇನೆ ನಿಷ್ಕ್ರಿಯಗೊಳಿಸುವ ಚರ್ಚೆ ಏಕೆ?

   ''ಚೀನಾ ಸೇನೆಯೂ ಭಾರತದ ಗಡಿಯೊಳಗೆ ಪ್ರವೇಶ ಮಾಡಿಲ್ಲ ಅಥವಾ ಗಡಿ ಉಲ್ಲಂಘನೆಯಾಗಿಲ್ಲ ಎನ್ನುವುದಾರೇ ಉಭಯ ರಾಷ್ಟ್ರಗಳ ಮಧ್ಯೆ ಗಡಿಯಿಂದ ಸೇನೆ ನಿಷ್ಕ್ರಿಯಗೊಳಿಸುವ ಕುರಿತು ಚರ್ಚೆ ಏಕೆ ಮಾಡಲಾಗಿದೆ'' ಎಂದು ಮಾಜಿ ಹಣಕಾಸು ಸಚಿವ ಟ್ವೀಟ್ ಮಾಡಿದ್ದಾರೆ.

   ರಾಹುಲ್ ಗಾಂಧಿಗೆ ಕಿವಿ ಮಾತು ಹೇಳಿದ ಸೈನಿಕನ ತಂದೆ, ಅಮಿತ್ ಶಾ ವಾಗ್ದಾಳಿ

   20 ಸೈನಿಕರು ಮೃತಪಟ್ಟಿದ್ದು ಹೇಗೆ?

   20 ಸೈನಿಕರು ಮೃತಪಟ್ಟಿದ್ದು ಹೇಗೆ?

   ''ಭಾರತ ಗಡಿ ಪ್ರದೇಶಕ್ಕೆ ವಿದೇಶಿ ಸೇನೆ ಪ್ರವೇಶವಾಗಿಲ್ಲ ಎನ್ನುವುದಾರೇ, ಮೇ 5 ಮತ್ತು ಮೇ 6 ರಂದು ಭಾರತ-ಚೀನಾ ಗಡಿಯಲ್ಲಿ ಏನಾಯಿತು? ಮೇ 16-17 ರಂದು ಲಡಾಖ್ ಗಡಿಯಲ್ಲಿ ಏನಾಯಿತು? 20 ಭಾರತೀಯ ಯೋಧರು ಹೇಗೆ ಮೃತಪಟ್ಟರು? ಎಂದು ಸ್ಪಷ್ಟ ಮಾಹಿತಿ ನೀಡಿ ಕಾಂಗ್ರೆಸ್ ಹಿರಿಯ ನಾಯಕ ಪ್ರಧಾನಿ ಅವರನ್ನು ಆಗ್ರಹಿಸಿದ್ದಾರೆ.

   ಹವಾಮಾನದ ಕುರಿತು ಚರ್ಚೆ ಮಾಡಿದ್ರಾ?

   ಹವಾಮಾನದ ಕುರಿತು ಚರ್ಚೆ ಮಾಡಿದ್ರಾ?

   ಭಾರತ ಮತ್ತು ಚೀನಾ ಸೈನಿಕರ ನಡುವೆ ಏನು ಆಗಿಲ್ಲ ಅಥವಾ ನಮ್ಮ ಗಡಿ ಪ್ರದೇಶಕ್ಕೆ ಚೀನಾ ಬಂದಿಲ್ಲ ಎನ್ನುವುದಾರೇ ಜೂನ್ 6 ರಂದು ಎರಡು ರಾಷ್ಟ್ರಗಳ ಕಾರ್ಪ್ಸ್ ಕಮಾಂಡರ್‌ಗಳು ಹವಾಮಾನದ ಬಗ್ಗೆ ಚರ್ಚೆ ಮಾಡಿದ್ರಾ? ಎಂದು ಪಿ ಚಿದಂಬರಂ ಟೀಕಿಸಿದ್ದಾರೆ.

   ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಆಗಿದ್ದೇನು?

   ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಆಗಿದ್ದೇನು?

   ಜೂನ್ 14ರ ರಾತ್ರಿ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಭಾರತ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೆ ಉಭಯ ರಾಷ್ಟ್ರಗಳ ನಡುವೆ ಮೇಜರ್ ಜನರಲ್ ಮಟ್ಟದ ಚರ್ಚೆ ಆಗಿದೆ. ಭಾರತ ಗಡಿ ಉಲ್ಲಂಘನೆ ಮಾಡಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಚೀನಾ ಉತ್ತರ ನೀಡಿತ್ತು.

   English summary
   'Has PM given a clean chit to China?, Congress senior leader and former finance minister P Chidambaram questioned to govt of india.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X