'ಪ್ರೀತಿ' ಕೊಂದ ಕೊಲೆಗಾರ ತೋರಿದ್ದು ಮಾತ್ರ ಬಲು ಕ್ರೌರ್ಯ

ದೆಹಲಿ, ಡಿಸೆಂಬರ್.12: ಪ್ರಿಯಕರನ ನಂಬಿದ್ದೇ ತಪ್ಪಾಯ್ತು ನೋಡಿ. ಬದುಕಿಗೆ ಆಸರೆ ಆಗುತ್ತಾನೆ ಎಂದುಕೊಂಡವನೇ ಪ್ರೀತಿಸಿದಾಕೆಯ ಪಾಲಿಗೆ ಮೃತ್ಯುವಾಗಿದ್ದಾನೆ. ಪ್ರೇಯಸಿಯ ಜೊತೆ ಕ್ಯಾಬ್ ಚಾಲಕನ ಕಥೆ ಮುಗಿಸಿದ ಭೂಪ ಕೊನೆಗೂ ಖಾಕಿ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ದೆಹಲಿಯಲ್ಲಿ ಜಿಮ್ ಇಟ್ಟುಕೊಂಡಿದ್ದ ಹೇಮಂತ್ ಲಂಬಾ, ತಾನು ಪ್ರೀತಿಸಿದ 22 ವರ್ಷದ ಪ್ರೇಯಸಿಯ ಜೊತೆಗೆ ಕಳೆದ ಡಿಸೆಂಬರ್.07ರಂದು ಹರಿಯಾಣದ ರೇವಾರಿ ಪ್ರದೇಶಕ್ಕೆ ತೆರಳಿದ್ದನು. ಅಲ್ಲಿ ಪ್ರೇಯಸಿ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದನು. ಅಲ್ಲಿಂದ ಶುರುವಾಗಿದ್ದೇ ನೋಡಿ ಅಸಲಿ ಆಟ.

ತಾನು ಎಸಗಿದ ಕೃತ್ಯದಿಂದಲೂ ಆರೋಪಿಗೆ ಯಾವುದೇ ಪಶ್ಚಾತಾಪವಾಗಲಿಲ್ಲ. ಬದಲಿಗೆ ತಾನು ಮಾಡಿದ್ದೇ ಸರಿ ಎಂದುಕೊಂಡ ಆರೋಪಿ ಅಲ್ಲಿಂದ ಮುಂದೆ ತನ್ನದೇ ಆಟ ಶುರು ಮಾಡಿಬಿಟ್ಟನು. ಆದರೆ, ಕಾರ್ ಡೀಲರ್ ನೀಡಿದ ಒಂದೇ ಒಂದು ಸುಳಿವಿನಿಂದ ಆರೋಪಿ ಇವತ್ತು ಪೊಲೀಸರ ಅತಿಥಿಯಾಗಿದ್ದಾನೆ.

ಪ್ರೀತಿ ನಂಬಿ ಹೋಗಿದ್ದಕ್ಕೆ ಹೆಣವಾದ ಗೆಳತಿ

ಪ್ರೀತಿ ನಂಬಿ ಹೋಗಿದ್ದಕ್ಕೆ ಹೆಣವಾದ ಗೆಳತಿ

ದೆಹಲಿಯಲ್ಲಿ ಜಿಮ್ ಇಟ್ಟುಕೊಂಡಿದ್ದ ಹೇಮಂತ್ ಲಂಬಾ ಜಿಮ್ ತರಬೇತುದಾರನಾಗಿದ್ದನು. ಅಷ್ಟಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ಆಗಿದ್ದ. ದೆಹಲಿಯಲ್ಲಿ ವಾಸವಿದ್ದ ರಾಜಸ್ಥಾನ ಹನುಘರ್ ಮೂಲದ ಯುವತಿ ಹಾಗೂ ಹೇಮತ್ ನಡುವೆ ಪ್ರೇಮಾಂಕುರವಾಗಿತ್ತು. ಹರಿಯಾಣದ ರೇವಾರಿ ಪ್ರದೇಶಕ್ಕೆ ತೆರಳಿದ್ದ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಗೆಳತಿ ಮೇಲೆ ಹಲ್ಲೆ ನಡೆಸಿದ ಹೇಮಂತ್ ಆಕೆಯನ್ನು ಹತ್ಯೆಗೈದಿದ್ದಾನೆ.

ರಾಜಸ್ಥಾನಕ್ಕೆ ತೆರಳಲು ಕ್ಯಾಬ್ ಚಾಲಕನ ಹಣೆಗೆ ಬಂದೂಕು

ರಾಜಸ್ಥಾನಕ್ಕೆ ತೆರಳಲು ಕ್ಯಾಬ್ ಚಾಲಕನ ಹಣೆಗೆ ಬಂದೂಕು

ನಿರ್ಜನ ಪ್ರದೇಶದಲ್ಲಿ ಗೆಳತಿಯ ಮೃತದೇಹವನ್ನು ಎಸೆದ ಆರೋಪಿ ಅಲ್ಲಿಂದ ರಾಜಸ್ಥಾನದ ಜೈಪುರ್ ತೆರಳಲು ಪ್ಲ್ಯಾನ್ ಮಾಡುತ್ತಾನೆ. ಕ್ಯಾಬ್ ಚಾಲಕನ ಹಣೆಗೆ ಗನ್ ಇಟ್ಟು ತಾನು ಹೇಳಿದಲ್ಲಿ ಟ್ರಾಪ್ ನೀಡುವಂತೆ ಬೆದರಿಕೆ ಹಾಕಿದ್ದಾನೆ. ನಂತರ ಕ್ಯಾಬ್ ಚಾಲಕನ ಮೇಲೆ ಗುಂಡು ಹಾರಿಸಿ, ಕಾರ್ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಕಾರ್ ಡೀಲರ್ ಸುಳಿವಿನಿಂದ ಸಿಕ್ಕಿಬಿದ್ದ ಆರೋಪಿ

ಕಾರ್ ಡೀಲರ್ ಸುಳಿವಿನಿಂದ ಸಿಕ್ಕಿಬಿದ್ದ ಆರೋಪಿ

ಕ್ಯಾಬ್ ಚಾಲಕನನ್ನು ಕೊಂದ ಆರೋಪಿ ಹೇಮಂತ್ ಲಂಬಾ, ತಾನು ತೆಗೆದುಕೊಂಡು ಹೋಗಿದ್ದ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದನು. ಕಾರ್ ಡೀಲರ್ ಅಲ್ಪೇಶ್ ಮೂಲಕ ಅವಸರದಲ್ಲಿ ಕಾರು ಮಾರಾಟ ಮಾಡಲು ಸ್ಕೆಚ್ ಹಾಕಿದ್ದನು. ಆರೋಪಿಯ ಆತುರದಿಂದ ಅನುಮಾನಗೊಂಡ ಡೀಲರ್, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಡೀಲರ್ ಕೊಟ್ಟ ಒಂದೇ ಒಂದು ಸುಳಿವಿನಿಂದ ಆರೋಪಿ ಹೇಮಂತ್ ಕುಮಾರ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಆರೋಪಿ ಹೇಮಂತ್ ಕೈಗೆ ಗುಜರಾತ್ ಪೊಲೀಸರ ಕೋಳ

ಆರೋಪಿ ಹೇಮಂತ್ ಕೈಗೆ ಗುಜರಾತ್ ಪೊಲೀಸರ ಕೋಳ

ಡೀಲರ್ ಅಲ್ಪೇಶ್ ನೀಡಿದ ಸುಳಿವು ಆಧರಿಸಿ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಈ ವೇಳೆ ಆರೋಪಿ ಹೇಮಂತ್ ಲಂಬಾ ಗುಜರಾತ್ ನ ವಾಲ್ಸದ್ ಎಂಬಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+