ಸತತ 2ನೇ ದಿನವೂ ಜಿಎಸ್‌ಟಿ, ಹಣದುಬ್ಬರ ಪ್ರತಿಭಟನೆ: ಅಧಿವೇಶನ ಬುಧವಾರಕ್ಕೆ ಮುಂದೂಡಿಕೆ
ಹೊಸದಿಲ್ಲಿ ಜುಲೈ 19: ಮುಂಗಾರು ಅಧಿವೇಶನದ ಎರಡನೇ ದಿನವೂ ಅಸ್ತವ್ಯಸ್ತಗೊಂಡಿದೆ. ಹಣದುಬ್ಬರ ಮತ್ತು ಬೆಲೆ ಏರಿಕೆ ಕುರಿತು ವಿರೋಧ ಪಕ್ಷದ ಸಂಸದರ ನಿರಂತರ ಘೋಷಣೆಗಳ ನಡುವೆ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮುಂದೂಡಲಾಗಿದೆ. ಎಲ್‌ಪಿಜಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮುಖಂಡರು ಅಧಿವೇಶನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಹಾಲು ಮತ್ತು ಮೊಸರು ಮುಂತಾದ ಪ್ಯಾಕೇಜ್ಡ್ ಆಹಾರ ಪದಾರ್ಥಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದಕ್ಕೆ ಕಾಂಗ್ರೆಸ್ ವಿರೋಧಿಸಿ ಪ್ರತಿಭಟನೆ ನಡೆಸಿತು.
ಸಂಸತ್ತಿನ ಸಂಕೀರ್ಣದ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಲ್ಲದೆ, ಎನ್‌ಸಿಪಿಯ ಸುಪ್ರಿಯಾ ಸುಳೆ, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಮತ್ತು ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಕೆಲವು ವಿರೋಧ ಪಕ್ಷದ ಸಂಸದರು ಉಪಸ್ಥಿತರಿದ್ದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಸದಸ್ಯರು ಎಲ್‌ಪಿಜಿ ಬೆಲೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ವಿವಿಧ ಇಲಾಖೆಗಳು ಸೂಚಿಸಿದ 32 ಮಸೂದೆಗಳು, 14 ಸಿದ್ಧ: ಸರ್ಕಾರ
32 ವಿಧೇಯಕಗಳನ್ನು ವಿವಿಧ ಇಲಾಖೆಗಳು ಎರಡು ಸದನಗಳಲ್ಲಿ ಮಂಡಿಸಲು ಸೂಚಿಸಿದ್ದು, ಅವುಗಳಲ್ಲಿ 14 ಸಿದ್ಧವಾಗಿವೆ ಎಂದು ಸರ್ಕಾರ ಹೇಳಿದ್ದು, ಇವೆಲ್ಲವುಗಳ ಬಗ್ಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚರ್ಚೆಗಳು ನಡೆಯಬೇಕೆಂದು ಅದು ಪ್ರತಿಪಾದಿಸಿದೆ. ಈ 32 ಮಸೂದೆಗಳಲ್ಲಿ ಕೆಲವನ್ನು ಈಗಾಗಲೇ ಸಂಸತ್ತಿನ ಸ್ಥಾಯಿ ಸಮಿತಿಗಳು ಚರ್ಚಿಸಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಂಸತ್ತಿನ ಈ ಅಧಿವೇಶನದಲ್ಲಿ ಮೂವತ್ತೆರಡು ಮಸೂದೆಗಳನ್ನು ಮಂಡಿಸಲು ವಿವಿಧ ಇಲಾಖೆಗಳು ಸೂಚಿಸಿದ್ದು, ಅದರಲ್ಲಿ 14 ಮಸೂದೆಗಳು ಸಿದ್ಧವಾಗಿವೆ, ಆದರೆ ನಾವು ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸುವುದಿಲ್ಲ ಎಂದು ಅವರು ಹೇಳಿದರು.

ವಿದೇಶಾಂಗ ಸಚಿವಾಲಯ ನೀಡಿರುವ ವಿವರ
ಕಳೆದ ಮೂರು ವರ್ಷಗಳಲ್ಲಿ 3.92 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಮತ್ತು ಅವರಲ್ಲಿ 1.70 ಲಕ್ಷ ಜನರು ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ ಎಂದು ಲೋಕಸಭೆಗೆ ಮಂಗಳವಾರ ತಿಳಿಸಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ವಿದೇಶಾಂಗ ಸಚಿವಾಲಯ ನೀಡಿರುವ ವಿವರಗಳ ಪ್ರಕಾರ, ವ್ಯಕ್ತಿಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಮತ್ತು 120 ಕ್ಕೂ ಹೆಚ್ಚು ದೇಶಗಳಲ್ಲಿ ಪೌರತ್ವವನ್ನು ಪಡೆದಿದ್ದಾರೆ. 2019, 2020 ಮತ್ತು 2021 ರಲ್ಲಿ ಒಟ್ಟು 3,92,643 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇವರಲ್ಲಿ 1,70,795 ಜನರು ಅಮೆರಿಕದ ಪೌರತ್ವವನ್ನು ತೆಗೆದುಕೊಂಡಿದ್ದಾರೆ, ಕೆನಡಾದಲ್ಲಿ 64,071, ಆಸ್ಟ್ರೇಲಿಯಾದಲ್ಲಿ 58,391, ಯುನೈಟೆಡ್ ಕಿಂಗ್‌ಡಮ್‌ನಲ್ಲಿ 35,435, ಇಟಲಿಯಲ್ಲಿ 12,131, ನ್ಯೂಜಿಲೆಂಡ್‌ನಲ್ಲಿ 8,882, ಸಿಂಗಾಪುರದಲ್ಲಿ 7,046, ಜರ್ಮನಿಯಲ್ಲಿ 6,690, S54,690 ಪಾಕಿಸ್ತಾನದಲ್ಲಿ 48 ಇತರವುಗಳಲ್ಲಿ ಪೌರತ್ವ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಸೈಬರ್ ಭದ್ರತಾ ಘಟನೆಗಳ ಮಾಹಿತಿ
ಭಾರತ 2019ರಿಂದ ಈ ವರ್ಷದ ಜೂನ್ ವರೆಗೆ 36.29 ಲಕ್ಷ ಸೈಬರ್ ಭದ್ರತಾ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. 2019 ರಿಂದ ಕಳೆದ ತಿಂಗಳವರೆಗೆ ದೇಶದಲ್ಲಿ 36.29 ಲಕ್ಷ ಸೈಬರ್ ಭದ್ರತಾ ಘಟನೆಗಳನ್ನು ಗಮನಿಸಲಾಗಿದೆ ಮತ್ತು ಅಂತಹುಗಳನ್ನು ಪರಿಶೀಲಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಮಂಗಳವಾರ ಹೇಳಿದ್ದಾರೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೆ ವರದಿ ಮಾಡಿದ ಮತ್ತು ಟ್ರ್ಯಾಕ್ ಮಾಡಿದ ಮಾಹಿತಿಯ ಪ್ರಕಾರ, ''2019, 2020 ಮತ್ತು 2021, 2022 (ಜೂನ್ ವರೆಗೆ) ರಲ್ಲಿ ಒಟ್ಟು ಕ್ರಮವಾಗಿ 3,94,499, 11,58,208, 14,02,809 ಮತ್ತು 67,4021 ಸೈಬರ್ ಭದ್ರತಾ ಘಟನೆಗಳನ್ನು ಗಮನಿಸಲಾಗಿದೆ. "ಎಂದು ಅವರು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು.

2019 ರಿಂದ ದೇಶದಲ್ಲಿ ಬಂಧಿಸಲಾದ ಒಟ್ಟು ಪತ್ರಕರ್ತರ ವರದಿ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪತ್ರಕರ್ತರ ಬಂಧನಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಡೇಟಾವನ್ನು ನಿರ್ವಹಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದೆ ಮಾಲಾ ರಾಯ್ ಅವರು ಈ ಪತ್ರಕರ್ತರ ವಿರುದ್ಧದ ಎಲ್ಲಾ ವೈಯಕ್ತಿಕ ಆರೋಪಗಳ ವಿವರಗಳೊಂದಿಗೆ 2019 ರಿಂದ ದೇಶದಲ್ಲಿ ಬಂಧಿಸಲಾದ ಒಟ್ಟು ಪತ್ರಕರ್ತರ ಬಗ್ಗೆ ಕೇಳಿದ ನಂತರ ಅವರ ಹೇಳಿಕೆ ನೀಡಿದ್ದಾರೆ.












Click it and Unblock the Notifications