ಟೋಲ್ ಶುಲ್ಕ ವಿನಾಯಿತಿ ಡಿಸೆಂಬರ್ 1ರ ವರೆಗೆ ವಿಸ್ತರಣೆ

Posted By:
Subscribe to Oneindia Kannada

ನವದೆಹಲಿ, ನವೆಂಬರ್, 24: ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿಸೆಂಬರ್ 1ರ ಮಧ್ಯರಾತ್ರಿವರೆಗೆ ಟೋಲ್ ಶುಲ್ಕಕ್ಕೆ ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.

ಗುರವಾರ(ನ.24) ಮಧ್ಯರಾತ್ರಿವರೆಗೆ ಟೋಲ್ ಶುಲ್ಕಕ್ಕೆ ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಸ್ತುತ ಡಿಸೆಂಬರ್ 1 ರವರೆಗೆ ವಿಸ್ತರಿಸಿದೆ.

Govt extends toll exemption on National Highways till Dec 01

ರೂ.500 ಹಾಗು 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮ ದೇಶದಾದ್ಯಂತ ತಿವ್ರ ನಗದು ಸಮಸ್ಯೆ ಕಾಡುತ್ತಿರುವುದರಿಂದ ಸರ್ಕಾರ ತನ್ನ ನಿರ್ಧಾರವನ್ನು ಡಿಸೆಂಬರ್ 1ರ ವರೆಗೆ ವಿಸ್ತರಿಸಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಬಾರದೆಂಬ ಉದ್ದೇಶದಿಂದ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದ್ದು ಮತ್ತೆ 8 ದಿನ ಟೋಲ್ ಶುಲ್ಕ ಪಾವತಿಗೆ ವಿನಾಯಿತಿ ದೊರೆತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The government on Thursday extended the date for toll fee exemption on National Highways till the mid-night of December 01 to ensure smooth flow of traffic.
Please Wait while comments are loading...