• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರಿ ನೌಕರರ ವೇತನದ ಹಣ PM ಪರಿಹಾರ ನಿಧಿಗಾಗಿ ಕಡಿತಗೊಳ್ಳುವುದಿಲ್ಲ

|

ನವದೆಹಲಿ, ಏಪ್ರಿಲ್ 06: ಆರೋಗ್ಯ ಸಚಿವಾಲಯದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ವೇತನದ ಹಣ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕಡಿತಗೊಳ್ಳಲಾಗುವುದು ಎನ್ನುವ ಸುದ್ದಿ ಇತ್ತು. ಆದರೆ, ಇದರ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ದೇಶ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಇದಕ್ಕೆ ಸಹಾಯ ಆಗುವಂತೆ ಈಗಾಗಲೇ ಸಾಕಷ್ಟು ಮಂದಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅದೇ ರೀತಿ ಆರೋಗ್ಯ ಸಚಿವಾಲಯದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ 5 ದಿನದ ವೇತನ ಕೂಡ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕಡಿತಗೊಳ್ಳುತ್ತದೆ ಎನ್ನುವ ಸುದ್ದಿ ಇದಾಗಿತ್ತು.

Fact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿ

ಈ ಬಗ್ಗೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು 'ಒನ್ ಇಂಡಿಯಾ'ಗೆ ಸ್ಪಷ್ಟನೆ ನೀಡಿದ್ದಾರೆ. ಆ ರೀತಿ ಅನುಮತಿ ಇಲ್ಲದೆ, ಆರೋಗ್ಯ ಸಚಿವಾಲಯದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ವೇತನ ಕಡಿತ ಆಗುವುದಿಲ್ಲ. ಈ ರೀತಿ ಸುದ್ದಿಗಳನ್ನು ನಂಬಬೇಡಿ ಎಂದಿದ್ದಾರೆ.

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದು ವೈಯಕ್ತಿಕವಾಗಿದ್ದು, ಯಾರಿಗೂ ಕಡ್ಡಾಯ ಇಲ್ಲ. ಪ್ರಧಾನ ಮಂತ್ರಿ ಮೋದಿ ಇಚ್ಛೆ ಇದ್ದವರು ಮಾತ್ರ ಹಣ ನೀಡುವಂತೆ ತಿಳಿಸಿದ್ದಾರೆ.

English summary
Health Ministry govt employees salaries not being remitted into PM Cares Fund automatically.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X