ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲು ಗಣಿಗಾರಿಕೆಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿದ ಕೇಂದ್ರ

By Manjunatha
|
Google Oneindia Kannada News

ನವದೆಹಲಿ, ಫೆಬ್ರವರಿ 20: ದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮಾಡಲು ಖಾಸಗಿ ಗಣಿಗಾರಿಕಾ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಹೊಸ ನಿಯಮಕ್ಕೆ ಕೇಂದ್ರ ಅಸ್ತು ಎಂದಿದೆ.

ಇಷ್ಟು ವರ್ಷ ಸರ್ಕಾರಿ ಸಂಸ್ಥೆಗಳು ಮಾತ್ರವೇ ಮಾಡುತ್ತಿದ್ದ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗಿ ಮತ್ತು ವಿಶೇಷವಾಗಿ ವಿದೇಶಿ ಸಂಸ್ಥೆಗಳು ದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮಾಡಲಿವೆ.

ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ಸಂಪುಟ ಸಭೆ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು, ಕಲ್ಲಿದ್ದಲು ಗಣಿಗಾರಿಕೆಯ ಖಾಸಗೀಕರಣ ನಿರ್ಣಯ ಐತಿಹಾಸಿಕ ಎಂದರು.

Government opens up Commercial Coal Mining for Private Sector

ಎಲ್ಲಾ ರೈಲ್ವೆ ಹಳಿಗಳನ್ನು ವಿದ್ಯುದೀಕರಣ ಮಾಡುವ ನಿರ್ಣಯವನ್ನೂ ಸಂಪುಟಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂಬ ಬಗ್ಗೆಯೂ ಆವರು ಹೇಳಿದರು.

ಕಲ್ಲಿದ್ದಲು ಗಣಿಗಾರಿಕೆಗೆ ಖಾಸಗಿ ಸಂಸ್ಥೆಗಳು ಪಾಲ್ಗೊಳ್ಳುವ ಬಗ್ಗೆ ಪಿಯೂಷ್ ಗೋಯಲ್ ಮಾತುಗಳ ಮುಖ್ಯಾಂಶ ಇಲ್ಲಿದೆ...

* ಕಲ್ಲಿದಲು ಗಣಿಗಾರಿಕೆಯಲ್ಲಿ ಇನ್ನು ಮುಂದೆ ಯಾವುದೇ ಖಾಸಗಿ ಸಂಸ್ಥೆ ಮಾಡಬಹುದು, ಹರಾಜು ಪ್ರಕ್ರಿಯೆಯಲ್ಲಿಯೂ ಭಾಗವಹಿಸಬಹುದು.
* ಸರ್ಕಾರದ ಸಂಸ್ಥೆಗಳ ಹೊರತಾಗಿ ಖಾಸಗಿ ಕಂಪೆನಿಗಳೂ ಇನ್ನು ಮುಂದೆ ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮಾಡಬಹುದಾಗಿದೆ.
* ಖಾಸಗೀಕರಣದಿಂದ ಸುರಕ್ಷಿತ, ಆಧುನಿಕ, ಕಡಿಮೆ ವೆಚ್ಚದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಆಗಲಿದೆ, ಹಾಗೂ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇಲ್ಲದಾಗುತ್ತದೆ.

Government opens up Commercial Coal Mining for Private Sector

* ಹರಾಜು ಪ್ರಕ್ರಿಯೆ ಮೂಲಕ ಗಣಿಗಾರಿಕೆ ಸಂಸ್ಥೆಗಳ ಆಯ್ಕೆ ಮತ್ತು ಗಣಿಗಾರಿಕೆಗೆ ಅವಕಾಶ
* ಹರಾಜು ಸಂಪೂರ್ಣ ಪಾರದರ್ಶಕವಾಗಿರುತ್ತದೆ, ಹರಾಜಿನಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳು ಇ-ಅರ್ಜಿ ಹಾಕುತ್ತವೆ. ಹರಾಜು ಪ್ರಕ್ರಿಯೆಯೂ ಇ-ಬಿಡ್ಡಿಂಗ್ ಮೂಲಕವೇ ನಡೆಯುತ್ತದೆ.
* ಹರಾಜು ಪ್ರಕ್ರಿಯೆಯಿಂದ ಬರುವ ಹಣ ಹಾಗೂ ರಾಯಧನ ಸಂಪೂರ್ಣವಾಗಿ ರಾಜ್ಯಗಳಿಗೆ ಹೋಗುತ್ತದೆ, ಕೇಂದ್ರ ಸರ್ಕಾರ ಒಂದು ಪೈಸೆಯನ್ನೂ ಬಳಸುವುದಿಲ್ಲ.
* ವಿದೇಶಿ ಸಂಸ್ಥೆಗಳನ್ನು ಗಣಿಗಾರಿಕೆ ಆಹ್ವಾನಿಸುವುದರಿಂದ ಆಧುನಿಕ ತಂತ್ರಜ್ಞಾನದ ಬಳಕೆ ಆಗುತ್ತದೆ, ಇದು ಸ್ಥಳೀಯ ಸಂಸ್ಥೆಗಳಿಗೆ ಉಪಾಯಕಾರಿ
* ಕಲ್ಲಿದ್ದಲು ಗಣಿಗಾರಿಕೆಯಿಂದ ಒರಿಸ್ಸಾ, ತೆಲಂಗಾಣ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಭಾರಿ ಅನುಕೂಲ ಆಗುತ್ತದೆ. ಲಕ್ಷಾಂತರ ಮಂದಿಗೆ ಉದ್ಯೋಗ ದೊರಕುತ್ತದೆ.
* ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದು ಇದರಿಂದ ಸಮಾಪ್ತಿಯಾಗಿ, ಭಾರತವು ಕಲ್ಲಿದ್ದಲು ಕ್ಷೇತ್ರದಲ್ಲಿ ಸ್ವಾವಲಂಭಿ ಆಗಲಿದೆ.
* ಮೊದಲಿಗೆ ವಿರೋಧ ಪಡಿಸಿದ್ದ ಸ್ಥಳೀಯ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಣಿಗಾರಿಕೆ ಖಾಸಗೀಕರಣ ಮಾಡಲಾಗಿದೆ.
* ಭಾರತದಲ್ಲಿ 300 ಬಿಲಿಯನ್ ಟನ್‌ ಕಲ್ಲಿದ್ದಲು ನಿಕ್ಷೇಪ ಇದೆ, ಅದರ ಸಂಪೂರ್ಣ ಲಾಭವನ್ನು ಭಾರತೀಯರು ಅನುಭವಿಸಬೇಕು.
* ಹರಾಜು ಪ್ರಕ್ರಿಯೆಯಿಂದ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿರ್ನಾಮ ಆಗಲಿದೆ.
* ಹಿಂದಿನ ಸರ್ಕಾರ ತಮ್ಮದೇ ಶಾಸಕರಿಗೆ, ಸಂಸದರಿಗೆ ಕಲ್ಲಿದ್ದಲು ಗಣಿಗಾರಿಕೆ ಮಾಡಲು ಲೈಸೆನ್ಸ್ ನೀಡಿತ್ತು ಆದರೆ ಹೊಸ ನಿಯಮದಿಂದ ಅದಕ್ಕೆಲ್ಲಾ ತಡೆ ಬಿದ್ದಿದೆ.

English summary
Central government opens up commercial coal mining for private sectors. Railway minister Piyush Goyal shares its details with media people and said its historical decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X