ನೋಟ್ ಆಯ್ತು ಈಗ ಚಿನ್ನ ಖರೀದಿ ಮೇಲೆ ನಿರ್ಬಂಧ!

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್, 1: ಕಪ್ಪು ಹಣ ಪತ್ತೆಗೆ ಕೇಂದ್ರ ಸರ್ಕಾರ ಮತ್ತಷ್ಟು ಬಿಗಿ ಕ್ರಮಕೈಗೊಳ್ಳಲು ಮುಂದಾಗಿದ್ದು, ನೋಟು ನಿಷೇಧದ ನಂತರ ಈಗ ಚಿನ್ನದ ಮೇಲೆ ನಿರ್ಬಂಧ ಹೇರಲು ತೀರ್ಮಾನಿಸಿದೆ.

ಮನೆಯಲ್ಲಿ ಕೆ.ಜಿಗಟ್ಟಲೆ ಚಿನ್ನ ಇಟ್ಟುಕೊಂಡಿರುವವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಚಿನ್ನ ಶೇಖರಣೆ ಬಗ್ಗೆ ಆದಾಯ ತೆರಿಗೆ ಮಸೂದೆಗೆ ತಿದ್ದುಪಡಿ ಮಾಡುವುದಾಗಿ ಗುರುವಾರ ಕೇಂದ್ರ ಹಣಕಾಸು ಇಲಾಖೆ ಪ್ರಕಟಿಸಿದೆ.

ಕಾಳಧನಿಕರು ತಮ್ಮ ಅಕ್ರಮ ಹಣವನ್ನು ಚಿನ್ನ ಖರೀದಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Government not to tax jewellery from disclosed, exempted income

ಘೋಷಿತ ಆದಾಯದಿಂದ ಖರೀದಿ ಮಾಡಿದ, ಸಕ್ರಮ ಹಣದಿಂದ ಸಂಪಾದನೆ ಮಾಡಿದ ಚಿನ್ನದ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಚಿನ್ನದ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ನಿರ್ಬಂಧಗಳು

* ವಿವಾಹಿತ ಮಹಿಳೆಯೊಬ್ಬರು ಗರಿಷ್ಠ 500 ಗ್ರಾಂ. ಚಿನ್ನ ಇಟ್ಟುಕೊಳ್ಳಲು ಅವಕಾಶ

* ಅವಿವಾಹಿತ ಮಹಿಳೆಯರು ಗರಿಷ್ಠ 250 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು

* ಪುರುಷರು ಗರಿಷ್ಠ 100 ಗ್ರಾಂ. ಚಿನ್ನ ಖರೀದಿ ಮಾಡಬಹುದು

* ವಂಶಪಾರಂಪರಿಕ ಚಿನ್ನದ ಮೇಲೆ ತೆರಿಗೆ ಇಲ್ಲ

* ಕೃಷಿ ಮೂಲದಿಂದ ಖರೀದಿ ಮಾಡಿದ ಚಿನ್ನದ ಮೇಲೆ ತೆರಿಗೆ ಇಲ್ಲ

* ಆದಾಯ ಮೀರಿ ಗಳಿಸಿದ ಚಿನ್ನದ ಮೇಲೆ ತೆರಿಗೆ ವಿಧಿಸಲು ಕೇಂದ್ರ ನಿರ್ಧರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Giving a major relief to the people after demonetisation of high value currency notes, the Ministry announced that the Gold purchased from various sources including disclosed income, income exempted from tax or reasonable household savings not to be taxed.
Please Wait while comments are loading...