ಸಂಸ್ಥೆಯಿಂದಲ್ಲದೆ, ವೈಯಕ್ತಿಕವಾಗಿಯೂ ಭಾರತಕ್ಕೆ ದೇಣಿಗೆ ನೀಡಿದ ಗೂಗಲ್ ಸಿಇಒ

ನವ ದೆಹಲಿ, ಏಪ್ರಿಲ್ 13: ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಭಾರತಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ಸಹಾಯ ಹಸ್ತ ಚಾಚಿದ್ದಾರೆ. 5 ಕೋಟಿ ಹಣ ನೆರವು ನೀಡಿದ್ದಾರೆ.

ಈ ಹಿಂದೆಯೇ ಗೂಗಲ್ ಸಂಸ್ಥೆ ಕೊರೊನಾ ನಿಯಂತ್ರಣಕ್ಕೆ 800 ಮಿಲಿಯನ್ ಹಣ ನೀಡುವುದಾಗಿ ತಿಳಿಸಿತ್ತು. ಅದರೊಂದಿಗೆ ಗೂಗಲ್ ಸಿಇಒ ಈಗ ಪ್ರತ್ಯೇಕವಾಗಿ ಹಣ ನೀಡಿದ್ದಾರೆ. ಈ ಹಣವನ್ನು ಅವರು ಗೀವ್ ಇಂಡಿಯಾ ಸಂಸ್ಥೆಗೆ ತಲುಪಿಸಿದ್ದಾರೆ.

ಈ ವಿಷಯವನ್ನು ಟ್ವಿಟ್ಟರ್ ಖಾತೆಯ ಮೂಲಕ ಗೀವ್ ಇಂಡಿಯಾ ಸಂಸ್ಥೆ ತಿಳಿಸಿದೆ. ಗೀವ್ ಇಂಡಿಯಾ ಒಂದು ಆನ್ ಲೈನ್ ಸಂಸ್ಥೆಯಾಗಿದ್ದು, ಇದು ದೇಣಿಗೆಯನ್ನು ಸಂಗ್ರಹಿಸುತ್ತದೆ. ತಮ್ಮ ದೇಣಿಗೆ ಹಣವನ್ನು ಗೀವ್ ಇಂಡಿಯಾಗೆ ಸುಂದರ್ ಪಿಚೈ ನೀಡಿದ್ದು, ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.

Google CEO Sundar Pichai Donated 5 Crore For Giveindia Covid 19 Relief Fund

ನೆರವು ನೀಡಿದ್ದಕ್ಕೆ ಗೀವ್ ಇಂಡಿಯಾ ಸಂಸ್ಥೆ ಧನ್ಯವಾದ ತಿಳಿಸಿದ್ದು, ಕೂಲಿ ಕಾರ್ಮಿಕರ ಕುಟುಂಬಕ್ಕೆ ಈ ಹಣವನ್ನು ಬಳಕೆ ಮಾಡಲಾಗುವುದು ಎಂದಿದೆ. ಭಾರತದವರೇ ಆದ ಸುಂದರ್ ಪಿಚೈ ಕಷ್ಟದ ಸಮಯದಲ್ಲಿ ನೆರವಿಗೆ ಬಂದಿದ್ದಾರೆ.

ಟಾಟಾ, ರಿಲೆಯೆನ್ಸ್, ಫೇಸ್ ಬುಕ್, ಟ್ವಿಟ್ಟರ್, ಮೈಕ್ರೋಸಾಫ್ಟ್, ಅಮೆಜಾನ್ ಸೇರಿದಂತೆ ಅನೇಕ ಕಂಪನಿಗಳು ಕೊರೊನಾ ಹೋರಾಟಕ್ಕೆ ಕೈ ಜೋಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+