Get Updates
Get notified of breaking news, exclusive insights, and must-see stories!

1,469 ರೂ.ಗೆ 'ಗೋ ಏರ್' ಟಿಕೆಟ್, ಗೋ ಗೆಟ್ ಇಟ್

ನವದೆಹಲಿ, ಡಿ. 22: ಸ್ಪೈಸ್ ಜೆಟ್ ನಂತರ ದೇಶದ ಮತ್ತೊಂದು ವಿಮಾನಯಾನ ಸಂಸ್ಥೆ 'ಗೋ-ಏರ್' ಟಿಕೆಟ್ ದರ ಇಳಿಸಲು ಮುಂದಾಗಿದೆ. 17 ಲಕ್ಷ ಟಿಕೆಟ್‌ಗಳನ್ನು ತಲಾ ಕೇವಲ 1,469 ರೂ.ಗಳಿಗೆ ಮಾರಾಟಕ್ಕಿಟ್ಟಿದೆ.

ಆದರೆ, ಈ ವಿನಾಯಿತಿ ಮಾರಾಟ ಕೇವಲ 5 ದಿನಗಳಿಗೆ ಸೀಮಿತ. ಡಿ. 21ರಂದೇ ಆರಂಭವಾಗಿರುವ ಈ ಟಿಕೆಟ್ ಮಾರಾಟ ಡಿ. 25ಕ್ಕೆ ಅಂತ್ಯವಾಗಲಿದೆ. ಈ ಸಮಯದಲ್ಲಿ ಖರೀದಿಸಿದ ಟಿಕೆಟ್‌ನಲ್ಲಿ 2015ರ ಜನವರಿ 1ರಿಂದ ಮಾರ್ಚ್ 31ರ ವರೆಗೆ ಗೋ-ಏರ್ ವಿಮಾನದಲ್ಲಿ ಪ್ರಯಾಣಿಸಬಹುದು.

goair

ಈ ಕುರಿತು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಯೋರ್ಜಿಯೋ ಡೇ ರೋನಿ ಪ್ರತಿಕ್ರಿಯೆ ನೀಡಿದ್ದು, "ಜನವರಿಯಿಂದ ಮಾರ್ಚ್ ತಿಂಗಳವರೆಗೆ ಟಿಕೆಟ್‌ಗೆ ಅತಿ ಹೆಚ್ಚು ಬೇಡಿಕೆ ಇರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಟಿಕೆಟ್ ಲಭ್ಯವಾಗುವಂತೆ ಮಾಡುವುದು ಸಂಸ್ಥೆಯ ಉದ್ದೇಶ" ಎಂದು ತಿಳಿಸಿದ್ದಾರೆ.

ಮುಂಬಯಿ ಮೂಲದ ಗೋ-ಏರ್ ವಿಮಾನಯಾನ ಸಂಸ್ಥೆಯು ದೇಶದೊಳಗೆ ಸುಮಾರು 22 ನಗರಗಳಿಗೆ ಹಾರಾಟ ನಡೆಸುತ್ತದೆ. ಸಂಸ್ಥೆಯು 19 ಏರ್‌ಬಸ್‌ಗಳನ್ನು ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+