India
  • search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಔಷಧ ದಾಸ್ತಾನು: ಗಂಭೀರ್ ಫೌಂಡೇಷನ್ ತಪ್ಪು ಸಾಬೀತು

|
Google Oneindia Kannada News

ನವದೆಹಲಿ, ಜೂನ್ 03: ಕೋವಿಡ್ 19 ಔಷಧ ದಾಸ್ತಾನಿಗೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ಫೌಂಡೇಷನ್ ತಪ್ಪು ಸಾಬೀತಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಈ ಬಗ್ಗೆ ಗಮನ ಹರಿಸಿದ್ದ ದೆಹಲಿ ಹೈಕೋರ್ಟ್ ದೇಶಾದ್ಯಂತ ವ್ಯಾಪಕ ಕೊರತೆ ಇರುವ ಪರಿಸ್ಥಿತಿಯಲ್ಲಿ ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ಯಥೇಚ್ಛವಾಗಿ ಈ ಔಷಧಿಗಳನ್ನು ಸಂಗ್ರಹಿಸಿದ್ದು ಹೇಗೆ..? ಇದಕ್ಕೆ ಯಾವ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ದೆಹಲಿಯ ಔಷಧ ನಿಯಂತ್ರಕರನ್ನು ಪ್ರಶ್ನಿಸಿತ್ತು.

ಗೌತಮ್‌ ಗಂಭೀರ್‌ ಔಷಧವನ್ನು ದಾಸ್ತಾನು ಮಾಡಿದ್ದು ಹೇಗೆ?: HC ಗೌತಮ್‌ ಗಂಭೀರ್‌ ಔಷಧವನ್ನು ದಾಸ್ತಾನು ಮಾಡಿದ್ದು ಹೇಗೆ?: HC

ಇದೀಗ ಇದೇ ಪ್ರಕರಣದ ವಿಚಾರಣೆಯಲ್ಲಿ ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದ್ದು, ಇದೇ ಪ್ರಕರಣದಲ್ಲಿ ಶಾಸಕ ಪ್ರವೀಣ್ ಕುಮಾರ್ ಅವರನ್ನೂ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ತಪ್ಪಿತಸ್ಥರು ಎಂದು ಹೇಳಿದೆ.

ಕೋವಿಡ್-19 ರೋಗಿಗಳ ಔಷಧಿಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿ ವಿತರಣೆ ಮಾಡಿದ್ದ ಆರೋಪದಲ್ಲಿ ಗೌತಮ್ ಗಂಭೀರ್ ಪ್ರತಿಷ್ಠಾನವು ತಪ್ಪಿತಸ್ಥರೆಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಅಂತೆಯೇ ಆರು ವಾರಗಳಲ್ಲಿ ಈ ಪ್ರಕರಣಗಳಲ್ಲಿ ಹೆಚ್ಚಿನ ಪ್ರಗತಿಯ ಕುರಿತು ಸ್ಥಿತಿ ವರದಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಔಷಧ ನಿಯಂತ್ರಕ ಪ್ರಾಧಿಕಾರವನ್ನು ಕೇಳಿದೆ ಮತ್ತು ಅಂತೆಯೇ ಜುಲೈ 29ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ಅತ್ಯಾವಶ್ಯಕ ಫ್ಯಾಬಿ ಫ್ಲೂ ಮಾತ್ರೆಗಳನ್ನು ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ಸಂಗ್ರಹಿಸಿ ವಿತರಣೆ ಮಾಡಿತ್ತು.

English summary
he Gautam Gambhir Foundation has been found guilty of unauthorisedly stocking, procuring and distributing Fabiflu medicine to COVID-19 patients, the Delhi High Court was informed by the Delhi government's drug controller on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X