• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ 148 ತಜ್ಞರು ಸಂಶೋಧನೆಗಾಗಿ ಅಮೇರಿಕಾಕ್ಕೆ ತೆರಳಲು ಸಿದ್ಧತೆ

By Nayana
|

ನವದೆಹಲಿ,ಮೇ 24: 2018-19 ನೇ ಸಾಲಿನಲ್ಲಿ ಭಾರತದಿಂದ ಅಮೆರಿಕಕ್ಕೆ ತೆರಳುತ್ತಿರುವ 98 ಫುಲ್‌ಬ್ರೈಟ್ ಫೆಲೋಶಿಪ್ ತಜ್ಞರ ಬೀಳ್ಕೊಡುಗೆ ಹಾಗೂ ಮೂರು ದಿನಗಳ ಪೂರ್ವಾಬಾವಿ ಸಭೆ ದೆಹಲಿಯ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಬುಧವಾರ ಆರಂಭಗೊಂಡಿದೆ

ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಒಂದು ವರ್ಷಗಳ ಕಾಲ ಅಮೇರಿಕಾದಲ್ಲಿ ಸೇವೆ ಸಲ್ಲಿಸಲಿರುವ ಈ ತಜ್ಞರುಗಳಿಗೆ ಪೂರ್ವಭಾವಿಯಾಗಿ ತರಬೇತಿ ನೀಡಲಾಯಿತು.

2018-19ನೇ ಸಾಲಿನಲ್ಲಿ ಒಟ್ಟು 148 ತಜ್ಞರು ಫುಲ್‌ಬ್ರೈಟ್ ಫೆಲೋಶಿಪ್‌ ಮೇಲೆ ಅಮೇರಿಕಾ ತೆರಳಲಿದ್ದು, ಆ ಪೈಕಿ ಫುಲ್‌ಬ್ರೈಟ್ ನೆಹರೂ ಫೆಲೋಶಿಪ್ ನಲ್ಲಿ 109 ಮಂದಿ ಹಾಗೂ ಫುಲ್ ಕಲಾಂ ಫೆಲೋಶಿಪ್ ನೆರವಿನ ಮೇರೆಗೆ 8 ಜನ ಅಮೇರಿಕಾದಲ್ಲಿ ಅಕಾಡೆಮಿಕ್ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಶೋಧನೆ ತರಬೇತಿ ಹಾಗೂ ಕಲಿಕೆ ಯಲ್ಲಿ ತೊಗಲಿದ್ದಾರೆ.

ಭಾರತದಲ್ಲಿನ ವಿವಿಧ ಕ್ಷೇತ್ರಗಳಲ್ಲಿನ ತಜ್ಞರನ್ನು ಸ್ವಾಗತಿಸಲು ಅಮೇರಿಕ ಉತ್ಸುಕವಾಗಿದೆ. ಈ ವರ್ಷದ ಅಕಾಡೆಮಿಕ್ ತಜ್ಞರನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎನ್ನುತ್ತಾರೆ ಯುಎಸ್‌ಐಇಎಫ್‌ ನ ಕಾರ್ಯ ನಿವಾಹಕ ನಿರ್ದೇಶಕ ಆಡಮ್ ಗ್ರಾಟ್‌ಸ್ಕೈ ತಿಳಿಸಿದ್ದಾರೆ.

ಭಾರತದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾದ ತಜ್ಞರು ಮೂರು ದಿನಗಳ ಕಾಲ ಪ್ರೊ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಮೇರಿಕಾದಲ್ಲಿ ಸೇವೆಸಲ್ಲಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಸವಾಲುಗಳು ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮ ಇದಾಗಿದೆ.

English summary
In a sign of the continued vitality of U.S. India people-to-people ties, 98 Fulbright scholars are in New Delhi for a three-day pre-departure orientation designed to introduce them to the academic, social, and cultural environment of the United States, and stimulate thought about their role as cultural ambassadors. A total of 148 Fulbright scholars from India, including 109 Fulbright-Nehru fellows and eight Fulbright-Kalam fellows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more