ಜಗಳ ಆಡುತ್ತಾರೆಂದು ಇಬ್ಬರು ಪತ್ನಿಯರನ್ನು ಕೊಂದಿದ್ದವನ ಬಂಧಿಸಿದ ಪೊಲೀಸರು

ನವದೆಹಲಿ, ಜುಲೈ 2: ಇಬ್ಬರು ಹೆಂಡತಿಯರು ಪರಸ್ಪರರು ಹಾಗೂ ತನ್ನೊಂದಿಗೆ ವಿಪರೀತ ಜಗಳ ಮಾಡುತ್ತಾರೆ ಎಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಇಬ್ಬರನ್ನೂ ಕೊಂದಿದ್ದು, ಆತನನ್ನು ಪೊಲೀಸರು ಬಂಧಿಸಿರುವುದಾಗಿ ಮಂಗಳವಾರ ತಿಳಿಸಿದ್ದಾರೆ. ಜಮ್ಷೆಡ್ ಆಲಂ ಆರೋಪಿ. ಜೂನ್ ಇಪ್ಪತ್ತೇಳನೇ ತಾರೀಕು ದಕ್ಷಿಣ ದೆಹಲಿಯಲ್ಲಿ ಇಸ್ಮತ್ ಪರ್ವೀನ್ ಹಾಗೂ ಝಬ್ನಾರನ್ನು ಕೊಲೆ ಮಾಡಿದ ಆರೋಪದಲ್ಲಿ ಅವನನ್ನು ವಶಕ್ಕೆ ಪಡೆಯಲಾಗಿದೆ.

ಜೋಡಿ ಕೊಲೆ ಮಾಡಿದ ನಂತರ ಆಲಂ ಬಿಹಾರದಲ್ಲಿರುವ ತನ್ನ ಹುಟ್ಟೂರಿಗೆ ಓಡಿ ಹೋಗಿದ್ದ. ಅಲ್ಲಿಗೆ ಪೊಲೀಸರು ಹುಡುಕಿಕೊಂಡು ಹೋದರೆ, ಅಷ್ಟರಲ್ಲಿ ದೆಹಲಿಗೆ ವಾಪಸಾಗಿದ್ದ. ತನ್ನ ಸ್ನೇಹಿತನನ್ನು ಭೇಟಿ ಆಗುವ ಸಲುವಾಗಿ ಬಾರ ಹಿಂದೂ ರಾವ್ ಪ್ರದೇಶದಲ್ಲಿ ತೆರಳುವಾಗ ಬಂಧಿಸಲಾಗಿತ್ತು.

Frustrated husband murdered his two wives in New Delhi, arrested by police

ನನ್ನ ಇಬ್ಬರು ಹೆಂಡತಿಯರು ಪರಸ್ಪರ ವಿಪರೀತ ಜಗಳ ಆಡುತ್ತಿದ್ದರು. ಜತೆಗೆ ನನ್ನ ಜತೆಗೂ ಜಗಳ ತೆಗೆಯುತ್ತಿದ್ದರು. ಇದರಿಂದ ಬೇಸತ್ತಿದ್ದೆ. ಆದ್ದರಿಂದ ಮೊದಲಿಗೆ ಇಸ್ಮತ್ ಪರ್ವೀನ್ ಳನ್ನು ಕೊಂದೆ. ಆ ನಂತರ ಝಬ್ನಾಳನ್ನು ಕೊಲೆ ಮಾಡಿ, ಬಿಹಾರಕ್ಕೆ ಓಡಿ ಹೋದೆ ಎಂದು ಆಲಂ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+