IL&FS ಮಾಜಿ ಎಂಡಿ ಮತ್ತು ಸಿಇಒ ರಮೇಶ್ ಬಾವಾ ಬಂಧನ
ಐಎಲ್ ಅಂಡ್ ಎಫ್ ಎಸ್ ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಣಾಧಿಕಾರಿ(ಸಿಇಒ) ರಮೇಶ್ ಬಾವಾ ಅವರನ್ನು ಶುಕ್ರವಾರ ರಾತ್ರಿ ದೆಹಲಿಯಲ್ಲಿ ಬಂಧಿಸಲಾಗಿದೆ.
ಅವರನ್ನು ಬಂಧಿಸದೆ ರಕ್ಷಣೆ ನೀಡುವಂತೆ ಹೂಡಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಕಾರಣ ಅವರನ್ನು SFIO (ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಶನ್ ಆಫೀಸ್) ಬಂಧಿಸಿದೆ.

ಸಾಲದ ಹೊರೆ ಹೊತ್ತಿರುವ IL&FS (ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನಶಿಯಲ್ ಸರ್ವಿಸಸ್ ) ಕಂಪನಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಅದೇ ಕಾರಣಕ್ಕೆ ರಮೇಶ್ ಅವರನ್ನೂ ಬಂಧಿಸಲಾಗಿದೆ.
ಏಪ್ರಿಲ್ 1 ರಂದು ಐಎಲ್ ಅಂಡ್ ಎಫ್ ಎಎಸ್ ನ ಪದಚ್ಯುತ ಕಾರ್ಯನಿರ್ವಾಹಕ ನಿರ್ದೇಶಕ ಹರಿಶಂಕರನ್ ಅವರನ್ನು ಗಂಭೀರ ವಂಚನೆ ಪ್ರಕರಣಗಳ ತನಿಖಾ ಕಚೇರಿಯಿಂದ ಬಂಧಿಸಲಾಗಿತ್ತು.
ಬಹುಕೋಟಿ ನಷ್ಟ ಎದುರಿಸಿದ್ದ ಐಎಲ್&ಎಫ್ಎಸ್, 90 ಸಾವಿರ ಕೋಟಿಗೂ ಹೆಚ್ಚಿನ ಸಾಲ ಹೊಂದಿದ್ದು, ಕಳೆದ ಸೆಪ್ಟೆಂಬರ್ ನಲ್ಲೇ ಸಾಲ ಮರುಪಾವತಿ ಮಾಡಬೇಕಿತ್ತು.
ಒಂದು ಕಾಲದಲ್ಲಿ ಮಾರುಕಟ್ಟೆಯ ದಿಗ್ಗಜ ಕಂಪನಿಗಳಲ್ಲೊಂದಾಗಿದ್ದ ಐಎಲ್ ಅಂಡ್ ಎಫ್ ಎಸ್, ನಂತರ ನಷ್ಟಕ್ಕೊಳಗಾಗಿ ಸಂಕಷ್ಟಕ್ಕೆ ಸಿಲುಕಿತ್ತು.












Click it and Unblock the Notifications