ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಇನ್ನಿಲ್ಲ
ನವದೆಹಲಿ, ಅಕ್ಟೋಬರ್ 28: ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಬ್ರೈನ್ ಸ್ಟ್ರೋಕ್ ಆಗಿ ಕಳೆದ ಕೆಲವು ವರ್ಷಗಳಿಂದ ಕೋಮಾಕ್ಕೆ ಜಾರಿದ್ದ ಮದನ್ ಲಾಲ್ ಅವರು ಶನಿವಾರ(ಅಕ್ಟೋಬರ್ 27) ತಡರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಮದನ್ ಲಾಲ್ ಖುರಾನಾ ಅವರ ಹಿರಿಯ ಪುತ್ರ ವಿಮಲ್ ಖುರಾನಾ ಅವರು ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು.

1993-1996ರವರೆಗೆ ದೆಹಲಿಯ ಮುಖ್ಯಮಂತ್ರಿಯಾಗಿದ್ದರು. 2004ರಲ್ಲಿ ರಾಜಸ್ಥಾನ ರಾಜ್ಯಪಾಲರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು.
ಅಕ್ಟೋಬರ್ 15, 1936ರಂದು ಬ್ರಿಟಿಷ್ ಆಡಳಿತದ ಭಾರತದ ಪ್ರಂಜಾಬ್ ಪ್ರಾಂತ್ಯದ ಲೈಲ್ ಪುರ(ಈಗಿನ ಫೈಸಲಾಬಾದ್)ದಲ್ಲಿ ಜನಿಸಿದ್ದರು.ದೇಶ ವಿಭಜನೆ ನಂತರ ಖುರಾನಾ ಕುಟುಂಬದವರು ದೆಹಲಿಗೆ ವಲಸೆ ಬಂದಿತ್ತು.ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಿಂದ ಪದವಿ ಪಡೆದಿದ್ದರು.












Click it and Unblock the Notifications