ಜಿಎಸ್ ಟಿ ದರ ಮತ್ತಷ್ಟು ತಗ್ಗಿಸುವ ಸುಳಿವು ನೀಡಿದ ಜೇಟ್ಲಿ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 14: ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಮತ್ತಷ್ಟು ತಗ್ಗುವ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ. ಅದೇ ವೇಳೆ ಇದರ ಲಾಭವನ್ನು ಗ್ರಾಹಕರಿಗೆ ತಲುಪಿಸುವಂತೆ ವರ್ತಕರಲ್ಲಿ ಮನವಿ ಮಾಡಿದ್ದಾರೆ.

ಜಿಎಸ್ ಟಿ ಕಡಿಮೆಯಾದರೂ ಹೋಟೆಲ್ ತಿಂಡಿ-ಊಟ ದುಬಾರಿ, 10 ಅಂಶ

"ತೆರಿಗೆ ದರಗಳ ಬದಲಾವಣೆ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ. ನಾವಿಂದು ಎಂಥ ಸನ್ನಿವೇಶದಲ್ಲಿ ಇದ್ದೇವೆ ಅಂದರೆ, ದೊಡ್ಡದಾದ ಮಾರುಕಟ್ಟೆ ಹಾಗೂ ಹೊರೆಯಲ್ಲದ ತೆರಿಗೆ ದರ ಇದೆ ಎಂದು ತೆರಿಗೆ ಪಾವತಿಸುವವರೇ ಹೇಳುವ ಪರಿಸ್ಥಿತಿ ಇದೆ" ಎಂದು ಜೇಟ್ಲಿ ಹೇಳಿದ್ದಾರೆ.

FM Arun Jaitley signals further GST rate cuts

ಜಿಎಸ್ ಟಿ ದರ ತಗ್ಗಿಸುವುದರಿಂದ ಆದಾಯ ಸಂಗ್ರಹದಲ್ಲಿ ಇಳಿಕೆಯಾಗುತ್ತದೆ ಮತ್ತು ಈ ಹಿಂದಿನ ತೆರಿಗೆ ದರಗಳಿಗೆ ಹೋಲಿಸಿದರೆ ಈಗ ಇರುವುದು ಅಂಥ ಹೊರೆಯಲ್ಲ ಎಂದು ಕೂಡ ಹೇಳಿದ್ದಾರೆ.

ಜಿಎಸ್ ಟಿ ದರ ಇಳಿಕೆ; ಇದು ಯಾರ ವಿಜಯ?

ಜಿಎಸ್ ಟಿ ದರ ಇಳಿಕೆ ಮಾಡಿರುವುದು ಕೂಡ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇನಲ್ಲ ಎಂದ ಅವರು, ಭಾರತದಂಥ ದೇಶದಲ್ಲಿ ನಾಲ್ಕು ಸ್ಲ್ಯಾಬ್ ಇರುವುದು ಅಗತ್ಯ. ಏಕೆಂದರೆ ಜೀವನಾವಶ್ಯಕ ವಸ್ತುಗಳಿಗೂ ಹಾಗೂ ಐಷಾರಾಮ, ಸಿಗರೇಟ್- ಮದ್ಯಪಾನದಂಥದ್ದಕ್ಕೂ ಒಂದೇ ಥರದ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದರು.

ಒಮ್ಮೆ ಎಲ್ಲವೂ ಸರಿಯಾಯಿತು ಅಂದ ಮೇಲೆ ಮೂಲದಲ್ಲಿ ಜಿಎಸ್ ಟಿ ಬಗ್ಗೆ ಯಾವ ಆಲೋಚನೆ ಇತ್ತೋ ಅದನ್ನು ಜಾರಿಗೆ ತರಲು ಯತ್ನಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finance minister Arun Jaitley signalled more GST rate cuts and appealed to businesses to pass on the benefit of the recent reductions to consumers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ