ದೆಹಲಿಯಲ್ಲಿ ಬೆಂಕಿ ಅವಘಡ: ಮೂವರು ಸಾವು

Posted By: Ananthanag
Subscribe to Oneindia Kannada

ನವದೆಹಲಿ, ನವೆಂಬರ್ 2: ಸುಮಾರು ದಿನಗಳಿಂದ ದೆಹಲಿಯಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಇಂದು(ನ.2) ಬೆಳಗ್ಗೆ ದೆಹಲಿಯ ಮೋಹನ್ ಪಾರ್ಕ್ ಬಳಿಯಿರುವ ಶಾದರ ಏರಿಯಾದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಅವಘಡದಿಂದಾಗಿ ಮೂರು ಜನರ ಸಾವಿಗೀಡಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ.
ಬೆಂಕಿ ಕಾಣಿಸಿಕೊಳ್ಳುತ್ತಲೇ ಅಲ್ಲಿನ ನಾಗರಿಕರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ 7-8 ಜನರನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರನ್ನು ಒಂದರ ನಂತರ ಮತ್ತೊಬ್ಬರಂತೆ ಆಸ್ಪತ್ರೆಗೆ ಸೇರಿಸಲಾಗಿದೆ.

Fire breaks out in Mohan Park area of Delhi

ಬೆಂಕಿಗೆ ಮುಖ್ಯಕಾರಣ ಪಟಾಕಿ ಹಚ್ಚಿರುವುದು ಎಂದು ಹೇಳಲಾಗುತ್ತಿದ್ದು, ತೀವ್ರಗಾಯಕ್ಕೊಳಗಾದ ಮೂವರು ಅಸುನೀಗಿದ್ದಾರೆ ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

ಅಲ್ಲದೆ ಅವಘಡ ಸಂಭವಿಸಿದ ಕಟ್ಟಡದಲ್ಲಿ ಮೂರಕ್ಕೂ ಹೆಚ್ಚು ಮಂದಿ ಬೆಂಕಿ ಮತ್ತು ಹೊಗೆಯಿಂದ ಜ್ಞಾನ ತಪ್ಪಿದಂತಾಗಿದ್ದರು. ಮತ್ತೆ ಕೆಲವರು ಬೆಂಕಿಯಿಂದ ಗಾಯಕ್ಕೊಳಗಾಗಿದ್ದರು ಎನ್ನಲಾಗಿದೆ.

ಅ.30 ರಂದು ಠಾಣೆಗೆ 133 ಬೆಂಕಿಗೆ ಸಂಬಂಧಿಸಿದಂತೆ ಕರೆಗಳು ಬಂದಿದ್ದವು ಅವುಗಳಲ್ಲಿ ಎಲ್ಲವೂ ದೀಪಾವಳಿ ಪಟಾಕಿಗೆ ಸೇರಿದವಾಗಿದ್ದವು ಎಂದಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ಬೆಂಕಿ ಅವಘಡಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಅಗ್ನಿಶಾಮಕ ಸೇವಾ ಸಿಬ್ಬಂದಿ ಯಾರು ಸಹ ರಜೆಯನ್ನು ಪಡೆಯುತ್ತಿಲ್ಲ, ಜತೆಗೆ 1500 ಸಿಬ್ಬಂದಿ ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತದೆ.

ಕೆರಗಳನ್ನು ಆಲಿಸಲು, ಮುಂಚಿತವಾಗಿಯೇ ಸಂಭವಿಸಹುದಾದ ಎಲ್ಲ ಗಂಡಾಂತರಗಳಿಗೆ ನಾವು ಜಾಗೃತರಾಗಿರಬೇಕಾಗುತ್ತದೆ ಎಂದು ಚೀಫ್ ಫೈರ್ ಆಫೀಸರ್ ಜಿಸಿ ಮೆಹ್ತಾ ಹೇಳುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
fire broke out in a building in Mohan Park area of Shahdara on wednesday morning. As per the official,3 people dead, 7-8 people have sustained burn injuries.
Please Wait while comments are loading...