ಸಂಸದ ಶ್ರೀರಾಮುಲು ಮನೆಯಲ್ಲಿ ಬೆಂಕಿ ಅವಘಡ, ಪ್ರಾಣಾಪಾಯದಿಂದ ಪಾರು
ನವದೆಹಲಿ, ಡಿಸೆಂಬರ್ 19: ಬಳ್ಳಾರಿ ಬಿಜೆಪಿ ಸಂಸದ ಶ್ರೀರಾಮುಲು ಅವರ ನವದೆಹಲಿ ನಿವಾಸದಲ್ಲಿ ಇಂದು ಬೆಳಗ್ಗೆ (ಮಂಗಳವಾರ) ಬೆಂಕಿ ಅವಘಢ ಸಂಭವಿಸಿದ್ದು, ಘಟನೆಯಲ್ಲಿ ರಾಮುಲು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
#Delhi: Fire broke out at the residence of BJP MP B Sriramulu on Feroz Shah Road, in the early morning hours, says "narrowly escaped"; children suffered minor injuries. Situation now under control pic.twitter.com/50snUjXndv
— ANI (@ANI) December 19, 2017
ನವದೆಹಲಿಯ ಫಿರೋಜ್ ಶಾ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಶ್ರೀರಾಮುಲು ತಂಗಿದ್ದರು. ಮಂಗಳವಾರ ನಸುಕಿನ ಜಾವ ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಬೆಂಕಿ ಅವಘಡ ಸಂಭವಿಸಿ, ಇಡೀ ಮೆನೆಯೇ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ರಾಮುಲು ಹಾಗೂ ಸಹಾಯಕರು ಕೂಡಲೇ ಮನೆಯಿಂದ ಹೊರ ಬಂದು ಅಗ್ನಿಶಾಮಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ವಿಷಯದ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದರು, ಅಷ್ಟೋತ್ತಿಗಾಗಲೇ ಮನೆಯಲ್ಲಿದ್ದ ಸೋಫಾ, ಟಿವಿ ಸೇರಿದಂತೆ ಹಲವು ಬೆಲೆಬಾಳುವ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ.












Click it and Unblock the Notifications