ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿ.ಪ್ರದೇಶ ವಿಧಾನಸಭೆ ಚುನಾವಣೆ ಭೀತಿ: ಸತ್ಯೇಂದ್ರ ಜೈನ್ ವಿರುದ್ಧ ಪ್ರಕರಣ- ಆಪ್ ಆರೋಪ

|
Google Oneindia Kannada News

ನವದೆಹಲಿ ಮೇ 31: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಭೀತಿಯಿಂದ ಬಿಜೆಪಿ ಸತ್ಯೇಂದ್ರ ಜೈನ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದೆ ಎಂದು ಎಎಪಿ ಆರೋಪ ಮಾಡಿದೆ.

ಸತ್ಯೇಂದ್ರ ಜೈನ್ ಬಂಧನ: ಬಿಜೆಪಿ ವ್ಯಂಗ್ಯ, ರಾಜಕೀಯ ಪ್ರೇರಿತ ಎಂದ ಆಪ್ಸತ್ಯೇಂದ್ರ ಜೈನ್ ಬಂಧನ: ಬಿಜೆಪಿ ವ್ಯಂಗ್ಯ, ರಾಜಕೀಯ ಪ್ರೇರಿತ ಎಂದ ಆಪ್

ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಂಪುಟ ಸಚಿವ ಸತ್ಯೇಂದ್ರ ಜೈನ್ ಅವರ ಬಂಧನ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಮುಂಬರುವ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಿಂದ ಬಿಜೆಪಿಗೆ ಭಯವಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಎಎಪಿ ಸರಕಾರದ ಕ್ಯಾಬಿನೆಟ್ ಸಚಿವರನ್ನು ತಪ್ಪಾಗಿ ಸಿಲುಕಿಸಲಾಗುತ್ತಿದೆ. ಸತ್ಯಂತ್ ಜೈನ್ ವಿರುದ್ಧ ನಕಲಿ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ. ಜೊತೆಗೆ ಸುಳ್ಳು ಆರೋಪಗಳನ್ನು ಹೋರಿಸುವ ಮೂಲಕ ಬಿಜೆಪಿ ಹಿಮಾಚಲ ಚುನಾವಣಾ ತಯಾರಿಯಲ್ಲಿ ನಿರತವಾಗಿದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಕೂಡ ದೂರಿದ್ದಾರೆ.

Fear of Himachal Pradesh assembly polls: Case against Satyendra Jain- AAP Accused

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್ ಜೈನ್ ವಿರುದ್ಧ ಇಡಿ ಮನಿ ಲಾಂಡರಿಂಗ್ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಕೋಲ್ಕತ್ತಾ ಮೂಲದ ಕಂಪನಿಯನ್ನು ಒಳಗೊಂಡ ಹವಾಲಾ ವಹಿವಾಟಿನ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 2017ರಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಸತ್ಯೇಂದ್ರ ಜೈನ್ ವಿರುದ್ಧ ಇಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಸತ್ಯೇಂದ್ರ ಜೈನ್ ಬಂಧನದ ನಂತರ ಕಪಿಲ್ ಮಿಶ್ರಾ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದು ಆಗ್ರಹಿಸಿದರು. ಇದಕ್ಕೂ ಮುನ್ನ ಇಡಿ ಜೈನ್ ಅವರ ಕುಟುಂಬ ಮತ್ತು ಕಂಪನಿಗಳ 4.81 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು.

Fear of Himachal Pradesh assembly polls: Case against Satyendra Jain- AAP Accused

Recommended Video

K S Eshwarappa ನವರು ರಾಷ್ಟ್ರ ಧ್ವಜದ ಬಗ್ಗೆ ಹೀಗೆ ಹೇಳಿದ್ದೇಕೆ | OneIndia Kannada

ನೀವು ಸತ್ಯೇಂದ್ರ ಜೈನ್ ಅವರಿಗೆ ಕ್ಲೀನ್ ಚಿಟ್ ನೀಡುತ್ತೀರಿ. ಸತ್ಯೇಂದ್ರ ಜೈನ್ ಪ್ರಾಮಾಣಿಕ ನಾಯಕ ಎಂದು ಆಮ್ ಆದ್ಮಿ ಪಕ್ಷ ಹೇಳಿಕೊಳ್ಳುತ್ತಿದೆ. ಹಿಮಾಚಲ ಪ್ರದೇಶ ಚುನಾವಣಾ ತಯಾರಿಯಲ್ಲಿ ಬಿಜೆಪಿ ನಿರತವಾಗಿದೆ ಎಂದು ಆಪ್ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ. ಇದರ ಅಡಿಯಲ್ಲಿ ಇದೆಲ್ಲವೂ ನಡೆಯುತ್ತಿದೆ. ಅದೇ ಸಮಯದಲ್ಲಿ, ಮುಂಬರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಿಂದ ಬಿಜೆಪಿಗೆ ಭಯವಿದೆ ಎಂದು ಆಪ್ ಹೇಳಿದೆ. ಎಎಪಿ ಸರ್ಕಾರದ ಕ್ಯಾಬಿನೆಟ್ ಸಚಿವರನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಿದೆ ಎಂದು ದೂರಿದೆ.

(ಒನ್ಇಂಡಿಯಾ ಸುದ್ದಿ)

English summary
AAP alleges BJP has caught Satyendra Jain in a fake case for fear of Himachal Pradesh assembly polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X