ಬ್ಲೂವ್ಹೇಲ್ ಗೇಮ್ ನಿಷೇಧಕ್ಕೆ ತಜ್ಞರ ಸಮಿತಿ ನೇಮಕ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಅಕ್ಟೋಬರ್ 13: ವಿವಾದಾತ್ಮಕ ಆನ್ ಲೈನ್ ಗೇಮ್ ಬ್ಲೂವ್ಹೇಲ್ ಗೇಮ್ ಲಿಖ್ ಗಳನ್ನು ಎಲ್ಲ ಜಾಲತಾಣಗಳಿಂದಲೂ ಡಿಲೀಟ್ ಮಾಡುವುದಕ್ಕಾಗಿ ಕಂಪ್ಯೂಟರ್ ಮತ್ತು ಇತರ ತಜ್ಞರ ತಂಡವೊಂದನ್ನು ಸರ್ಕಾರ ನೇಮಿಸಿದೆ.

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ಮಾರಣಾಂತಿಕ ಆನ್ ಲೈನ್ ಗೇಮ್ ಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ನೂರಾರು ಮಕ್ಕಳು ಬಲಿಯಾದ ಹಿನ್ನೆಲೆಯಲ್ಲಿ ಈ ಗೇಮ್ ನ ಲಿಂಕ್ ಗಳನ್ನು ನಾಶ ಮಾಡುವಂತೆ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ಅನ್ವಯ ಸರ್ಕಾರ ಇದೀಗ ತಜ್ಞರ ಸಮಿತಿ ರಚಿಸಿದೆ.

Expert committee set up to probe deaths due to Blue Whale challenge, an online game

ಸಮಿತಿಯು ಗೂಗಲ್, ಯಾಹೂ, ಫೇಸ್ ಬುಕ್, ವಾಟ್ಸ್ ಆಪ್, ಇನ್ ಸ್ಟಾಗ್ರಾಮ್, ಮೈಕ್ರೋಸಾಫ್ಟ್ ಗಳು ಈ ಗೇಮ್ ನ ಎಲ್ಲಾ ಲಿಂಕ್ ಗಳನ್ನೂ ಡಿಲೀಟ್ ಮಾಡಿರುವ ಕುರಿತು ಮಾಹಿತಿ ನೀಡುವಂತೆ ಕೇಳಿದೆ.

50 ಅಪಾಯಕಾರಿ ಟಾಸ್ಕ್ ಗಳನ್ನು ಒಳಗೊಂಡ ಈ ಬ್ಲೂವ್ಹೇಲ್ ಗೇಮ್ ಮಕ್ಕಳ ಮನಸ್ಸಿನಲ್ಲಿ ವಿಕೃತಿಯನ್ನು ಬಿತ್ತಿ, ಅವರು ಕೊನೆಗೆ ಆತ್ಮಹತ್ಯೆಗೆ ಬಲಿಯಾಗುವಂತೆ ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To probe case of suicides allegedly caused by the Blue Whale challenge, a committee of computer and other experts has been set up. This was informed by the government to the Delhi High Court.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ