ಜುಲೈ 6ರೊಳಗೆ ದೆಹಲಿಯ ಪ್ರತಿ ಮನೆಗಳಲ್ಲೂ ಕೊವಿಡ್ ಸ್ಕ್ರೀನಿಂಗ್
ನವದೆಹಲಿ, ಜೂನ್ 24: ಕೊವಿಡ್ ರೆಸ್ಪಾನ್ಸ್ ಯೋಜನೆಯಡಿ ಜುಲೈ 6ರೊಳಗೆ ಪ್ರತಿ ಮನೆಯಲ್ಲೂ ಕೊವಿಡ್ 19 ಸ್ಕ್ರೀನಿಂಗ್ ಮುಗಿಸಬೇಕು ಎಂದು ದೆಹಲಿ ಸರ್ಕಾರ ಸೂಚನೆ ನೀಡಿದೆ.
ದೆಹಲಿಯಲ್ಲಿ ಕೊರೊನಾವೈರಸ್ ಅಟ್ಟಹಾಸ ತಾರಕಕ್ಕೇರಿದ್ದು ಜುಲೈ 6 ರೊಳಗೆ ಎಲ್ಲಾ ಮನೆಯಲ್ಲೂ ಸ್ಕ್ರೀನಿಂಗ್ ಮಾಡುವುದು ಕಡ್ಡಾಯವಾಗಿದೆ.
ಇಡೀ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಜೂನ್ 23 ರಂದು ಒಂದೇ ದಿನ 3,947 ಪ್ರಕರಣಗಳು ಬೆಳಕಿಗೆ ಬಂದಿವೆ.ಜೂನ್ 30ರೊಳಗೆ ಕಂಟೈನ್ಮೆಂಟ್ ಜೋನ್‌ನಲ್ಲಿರುವ ಎಲ್ಲಾ ಮನೆಗಳಲ್ಲೂ ತಪಾಸಣೆ ಮಾಡಿ ಮುಗಿಸಬೇಕು ಎಂದು ಸರ್ಕಾರ ಹೇಳಿದೆ.
ಕೊವಿಡ್ 19: ಗೃಹಬಂಧನದಲ್ಲಿರುವವರಿಗೆ ಪಲ್ಸ್ ಆಕ್ಸಿಮೀಟರ್ ವ್ಯವಸ್ಥೆ
ಕೊವಿಡ್ ರೆಸ್ಪಾನ್ಸ್ ಯೋಜನೆಯ ಕುರಿತು ಸಾಕಷ್ಟು ಬಾರಿ ಅಮಿತ್ ಶಾ ಜೊತೆ ಅರವಿಂದ್ ಕೇಜ್ರಿವಾಲ್ ಚರ್ಚೆ ನಡೆಸಿದ್ದಾರೆ.
{photo-feature}