• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಫ್ ಬೇಜೋಸ್‌ರನ್ನ ಹಿಂದಿಕ್ಕಿದ ಎಲೋನ್ ಮಸ್ಕ್‌: ವಿಶ್ವದ ನಂಬರ್ 1 ಶ್ರೀಮಂತ

|

ವಾಷಿಂಗ್ಟನ್‌, ಜನವರಿ 07: ಟೆಸ್ಲಾ ಇಂಕ್ ಮತ್ತು ಸ್ಪೇಸ್‌ ಎಕ್ಸ್‌ನ ಸಿಇಒ ಎಲೋನ್ ಮಸ್ಕ್‌ ಈಗ ವಿಶ್ವದ ಅಗ್ರಮಾನ್ಯ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ಹಲವು ತಿಂಗಳಿನಿಂದ ಅಗ್ರಮಾನ್ಯ ಸ್ಥಾನದಲ್ಲಿದ್ದ ಅಮೆಜಾನ್ ಸಂಸ್ಥಾಪಕ ಜೆಫ್‌ ಬೇಜೋಸ್‌ರನ್ನು ಹಿಂದಿಕ್ಕುವ ಮೂಲಕ ಅಗ್ರ ಪಟ್ಟಕ್ಕೇರಿದ್ದಾರೆ.

ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಕಂಪನಿಯ ಷೇರು ಬೆಲೆಯಲ್ಲಿ ಗುರುವಾರ ಶೇಕಡಾ 4.8ರಷ್ಟು ಏರಿಕೆಗೊಂಡು, ಎಲೋನ್ ಮಸ್ಕ್‌ರವರು ಕಂಪನಿಯ ಮೌಲ್ಯ ಅಮೆಜಾನ್.ಕಾಮ್ ಇಂಕ್ ಅನ್ನು ಹಿಂದಿಕ್ಕಿದೆ.

ದಕ್ಷಿಣ ಆಫ್ರಿಕಾ ಮೂಲದ ಎಲೋನ್ ಮಸ್ಕ್‌ರ ನಿವ್ವಳ ಮೌಲ್ಯವು ನ್ಯೂಯಾರ್ಕ್‌ನಲ್ಲಿ ಬೆಳಿಗ್ಗೆ 10:15 ಕ್ಕೆ 188.5 ಬಿಲಿಯನ್ ಡಾಲರ್ ಆಗಿತ್ತು. ಇದು ಜೆಫ್ ಬೆಜೋಸ್‌ಗಿಂತ 1.5 ಬಿಲಿಯನ್ ಡಾಲರ್ ಹೆಚ್ಚಾಗಿದೆ.

ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಅವರು ಅಕ್ಟೋಬರ್ 2017 ರಿಂದ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಖಾಸಗಿ ಬಾಹ್ಯಾಕಾಶ ಓಟದಲ್ಲಿ ಬ್ಲೂ ಒರಿಜಿನ್ ಎಲ್ಎಲ್ ಸಿ ಮಾಲೀಕ ಬೆಜೋಸ್‌ಗೆ, ಎಲೋನ್ ಮಸ್ಕ್ ಪ್ರತಿಸ್ಪರ್ಧಿ ಆಗಿದ್ದಾರೆ. ಮಸ್ಕ್‌ರ ಸ್ಪೇಸ್ ಎಕ್ಸ್‌ ಬಾಹ್ಯಾಕಾಶ ನೌಕೆಗಳ ಉಡಾವಣಾ ಸಾಮರ್ಥ್ಯವನ್ನು ಹೊಂದಿದೆ.

English summary
Elon Musk, the outspoken entrepreneur behind Tesla Inc. and SpaceX, is now the richest person on the planet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X