ಸುಶಿಕ್ಷಿತ ಪ್ರಧಾನಿಯನ್ನು ಆರಿಸಿ: ಮೋದಿ ವಿರುದ್ಧ ಕೇಜ್ರಿ'ವಾರ್'
ನವದೆಹಲಿ, ಫೆಬ್ರವರಿ 14: 'ಈ ಬಾರಿಯಾದರೂ ಸುಶಿಕ್ಷಿತ ಪ್ರಧಾನಿಯನ್ನು ಆರಿಸಿ. ಕೇವಲ 12ನೇ ತರಗತಿ ಓದಿದವರನ್ನು ಪ್ರಧಾನಿಯನ್ನಾಗಿ ಮಾಡಬೇಡಿ' ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಮೂಲಕ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ದೆಹಲಿಯಲ್ಲಿ ಭೇಟಿಯಾದ ವಿಪಕ್ಷಗಳ ನಾಯಕರು ಎನ್ ಡಿ ಎ ಸರ್ಕಾರದ ಮೇಲೆ ಹರಿಹಾಯ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್ ಸಿಪಿಯ ಶರದ್ ಪವಾರ್, ಎಲ್ ಜೆಡಿಯ ಶರದ್ ಯಾದವ್ ಸೇರಿದಂತೆ ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ಸುಶಿಕ್ಷಿತ ಪ್ರಧಾನಿಯನ್ನು ಆರಿಸಿ, ದೇಶವನ್ನು ಉಳಿಸಿ ಎಂದರು. ಅವರಿಗೆ ಜೊತೆಯಾದ ಮಮತಾ ಬ್ಯಾನರ್ಜಿ, "ದೇಶದಲ್ಲಿ ತುರ್ತು ಪರಿಸ್ಥಿತಿಗಿಂತಲೂ ಕರಾಳ ಸ್ಥಿತಿ ಉದ್ಭವಿಸಿದೆ. ರಾಷ್ಟ್ರ ಮಟ್ಟದಲ್ಲಿ ನಾವು ಕಾಂಗ್ರೆಸ್ ಜೊತೆಗೇ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ. ಅದನ್ನು ನಾನು ಹ್ಋದಯದಿಂದ ಹೇಳುತ್ತಿದ್ದೇನೆ. ಈ ದೇಶಕ್ಕಾಗಿ ನಾನು ನನ್ನ ಪ್ರಾಣ ತ್ಯಾಗ ಮಾಡಲು ಸಿದ್ಧನಿದ್ದೇನೆ" ಎಂದು ದೀದಿ ಭಾವುಕರಾಗಿ ಹೇಳಿದರು.












Click it and Unblock the Notifications