ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಮತ್ತು ಉತ್ತರ ಭಾರತದ ಹಲವೆಡೆ ಭೂಕಂಪ

|
Google Oneindia Kannada News

ನವದೆಹಲಿ, ಏ. 25 : ಭೂಕಂಪದಿಂದಾಗಿ ನೇಪಾಳದಲ್ಲಿ 600 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಸಮಯ 4.30 : ನೇಪಾಳದಲ್ಲಿನ ರಕ್ಷಣಾ ಕಾರ್ಯಾಚರಣೆಗಾಗಿ ಭಾರತದಿಂದ 2 ವಿಶೇಷ ವಿಮಾನಗಳನ್ನು ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಶನಿವಾರ ಮಧ್ಯಾಹ್ನ ಔಷಧಿ ಸಾಮಾಗ್ರಗಳನ್ನು ಹೊತ್ತ ಎರಡು ವಿಮಾನಗಳು ನೇಪಾಳಕ್ಕೆ ತೆರಳಿವೆ ಒಟ್ಟು 4 ಟನ್ ಔಷಧಗಳನ್ನು ಕಳುಹಿಸಲಾಗಿದೆ. [ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]

historic Dharahara tower

ಸಮಯ 3.45 : ನೇಪಾಳದಲ್ಲಿ ತೆರೆದಿರುವ ಸಮಾಯವಾಣಿ ಸಂಖ್ಯೆಗಳು 0977-9851135141,0977-9851107021

ಸಮಯ 3.30 : ನೇಪಾಳದಲ್ಲಿನ ಪ್ರಬಲ ಭೂಕಂಪಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ನೇಪಾಳದಲ್ಲಿ ಇದುವರೆಗೂ 17 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ.

ಸಮಯ 3 ಗಂಟೆ : ನೇಪಾಳದಲ್ಲಿ ಮೈಸೂರಿನ 30 ಮತ್ತು ಬೆಳಗಾವಿಯ 35 ಜನರು ಸಿಲಕಿಕೊಂಡಿದ್ದಾರೆ. ಪೋಖರಾದಲ್ಲಿದ್ದೇವೆ ಎಂದು ಸೂರ್ಯಕಾಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Kathmandu

ಸಮಯ 2.30 : ನೇಪಾಳ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಭೂಕಂಪದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ 85 ಜನರು ಖಾಸಗಿ ಟ್ರಾವೆಲ್ಸ್ ಮೂಲಕ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ದಾವಣೆಗೆರೆಯ 7 ಜನರು ತೆರಳಿದ್ದರು ಆದರೆ, ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸಮಯ 1.30 : ಭೂಕಂಪದಿಂದಾಗಿ ಕಠ್ಮಂಡುವಿನ ಭೀಮ್‌ಸೇನ್‌ ಟವರ್ ಕುಸಿದು ಬಿದ್ದಿದೆ. ಈ ಕಟ್ಟಡದ ಅವಶೇಷಗಳ ಅಡಿ ಸುಮಾರು 400 ಜನರು ಸಿಲುಕುಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕಠ್ಮಂಡುವಿನಲ್ಲಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

powerful earthquake

ಸಮಯ 1 ಗಂಟೆ : ದೆಹಲಿಯಲ್ಲಿ ಶನಿವಾರ ಬೆಳಗ್ಗೆ 11.40ರ ಸುಮಾರಿನಲ್ಲಿ ಮೊದಲು ಭೂಮಿ ಕಂಪಿಸಿದ ಅನುಭವವಾಗಿದೆ. ಮಧ್ಯಾಹ್ನ 12.18ರ ಸಮಯದಲ್ಲಿ 5ಸೆಕೆಂಡ್‌ಗಳ ಕಾಲ ಭೂಮಿ ಮತ್ತೊಮ್ಮೆ ಕಂಪಿಸಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ.

Kolkata2

ಸಮಯ 12.45 : ನೇಪಾಳದ ಪೊಖರಾದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು ಕಠ್ಮಂಡುವಿನಲ್ಲಿ 7.9 ತೀವ್ರತೆಯ ಕಂಪನ ದಾಖಲಾಗಿದೆ. 35 ನಿಮಿಷದ ಅವಧಿಯಲ್ಲಿ 2 ಬಾರಿ ಪ್ರಬಲ ಭೂಕಂಪವಾಗಿದೆ ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಎಲ್‌.ಎಸ್.ರಾಥೋಡ್ ನವದೆಹಲಿಯಲ್ಲಿ ಹೇಳಿದ್ದಾರೆ.

ಸಮಯ 12.30 : ಭೂಕಂಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದು ಭಾರತ ಮತ್ತು ನೇಪಾಳದಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಮಯ 12 ಗಂಟೆ : ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಶನಿವಾರ ಬೆಳಗ್ಗೆ ಭೂ ಕಂಪನದ ಅನುಭವವಾಗಿದೆ. ಸುಮಾರು 20 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಮನೆ ಮತ್ತು ಕಚೇರಿಯಿಂದ ಹೊರಗೆ ಬಂದಿದ್ದಾರೆ.

earthquake

ದೆಹಲಿ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಶನಿವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ಕೇಂದ್ರ ಬಿಂದು ನೇಪಾಳದಲ್ಲಿ ಪತ್ತೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನೇಪಾಳದಲ್ಲಿ ಭೂ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು ರಿಕ್ಟರ್ ಮಾಪಕದಲ್ಲಿ ಸುಮಾರು 7.9 ತೀವ್ರತೆಯ ಕಂಪನ ದಾಖಲಾಗಿದೆ. ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಠ್ಮಂಡುವಿನಲ್ಲಿ ಭೂಕಂಪದಿಂದಾಗಿ ಹಲವು ಕಟ್ಟಡಗಳು ಕುಸಿದು ಬಿದ್ದಿದೆ. ಆದರೆ, ಸಾವು-ನೋವಿನ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ. ಕಟ್ಟಡಗಳು ನೆಲಕ್ಕೆ ಉರುಳಿರುವುದರಿಂದ ಧೂಳು ತುಂಬಿಕೊಂಡಿದೆ.

ಭೂಕಂಪನದ ಹಿನ್ನಲೆಯಲ್ಲಿ ದೆಹಲಿ ಮತ್ತು ಕೊಲ್ಕತ್ತಾದಲ್ಲಿ ನಗರದಲ್ಲಿ ಮೆಟ್ರೋ ರೈಲಿನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ವಿಡಿಯೋ ನೋಡಿ

English summary
A powerful earthquake has rocked central Nepal, causing extensive damage to buildings, eyewitnesses say. The quake measured 7.9 northwest of the capital Kathmandu. Tremors were felt as far away as the Indian capital Delhi and other north Indian states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X