ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಜನತೆ ದೂಷಿಸಬೇಡಿ, ದುಶ್ಚಟವನ್ನು ವಿರೋಧಿಸಿ: ಮೋದಿ

By Mahesh
|
Google Oneindia Kannada News

ನವದೆಹಲಿ,ಡಿ.14: ದೇಶದ ಯುವ ಜನತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ದ್ರವ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಆಕಾಶವಾಣಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಕಾಶವಾಣಿಯಲ್ಲಿ ಮೂರನೇ ಕಂತಿನ ಈ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತನ್ನು ಯುವಜನತೆಯೊಂದಿಗೆ ಮೋದಿ ಹಂಚಿಕೊಂಡರು.

ಯುವಜನತೆ ಈ ದೇಶದ ಸಂಪತ್ತು. ರಾಷ್ಟ್ರದ ಭವಿಷ್ಯ ಯುವಜನತೆಯ ಕೈಯಲ್ಲಿದೆ. ಅಂಥವರು ಸರಿಯಾದ ಮಾರ್ಗದಲ್ಲಿ ನಡೆಯಬೇಕು. ಅವರು ಹಾಗೆ ನಡೆಯುತ್ತಾರೆ ಎಂಬ ನಂಬಿಕೆಯೂ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಾದಕ ದ್ರವ್ಯ ಸೇವನೆ ಇಂದಿನ ಸಮಾಜದ ಮಾರಕ ಪಿಡುಗಾಗಿದೆ. "darkness, destruction and devastation" ಗೆ ಮಾದಕ ದ್ರವ್ಯ ಕಾರಣವಾಗಿದೆ. ಇದರಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮವನ್ನು ನಾನು ಕಂಡಿದ್ದೇನೆ.

ನನಗೆ ಯುವ ಜನತೆ ಮೇಲೆ ನಂಬಿಕೆ ಇದೆ. ನಾವು ಯುವಜನತೆಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಯುವಕರಲ್ಲಿರುವ ದುಶ್ಚಟಗಳನ್ನು ಮಾತ್ರ ನಾವು ವಿರೋಧಿಸಬೇಕಿದೆ ಎಂದು ತಮ್ಮ ಮನದಾಳದ ಮಾತನ್ನು ದೇಶದ ಯುವಜನತೆಯ ಮುಂದಿಟ್ಟಿದ್ದಾರೆ. ನಿಮ್ಮೊಂದಿಗೆ ನನ್ನ ಈ ಮಾತುಗಳನ್ನು ಹೇಳುವ ಮೂಲಕ ನನ್ನ ಮನಸ್ಸನ್ನು ಹಗುರ ಮಾಡಿಕೊಂಡಿದ್ದೇನೆ.

Drugs destroy, bring darkness: PM Modi

ಕ್ಷಣಿಕ ಸುಖಕ್ಕೆ ದೇಶ ಬಲಿ ಕೊಡಬೇಡಿ: ಮಾದಕ ದ್ರವ್ಯ ಮುಕ್ತ ಸಮಾಜವನ್ನು ಕಟ್ಟಬೇಕಾಗಿದೆ. ಅದಕ್ಕಾಗಿ ನಾವೆಲ್ಲರೂ ಒಂದಾಗಿ ಒಮ್ಮತದಿಂದ ಮುಂದೆ ಸಾಗಬೇಕಾಗಿದೆ. ಮನುಷ್ಯನಿಗೆ ಅಭ್ಯಾಸಗಳಿರುವುದು ತಪ್ಪಲ್ಲ. ಆದರೆ ಆ ಅಭ್ಯಾಸಗಳು ನಿಶೆಯಲ್ಲಿ ತೇಲಾಡಿಸಬಾರದು. ಡ್ರಗ್ಸ್ ಸೇವನೆಯಿಂದ ಕ್ಷಣಿಕ ಸುಖ ಎನಿಸಬಹುದು. ಆದರೆ ಅದು ಇಡೀ ರಾಷ್ಟ್ರದ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂದರು.

ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಇದು ಮೂರನೇ ಬಾರಿಗೆ ಆಕಾಶವಾಣಿ ಮೂಲಕ ಅವರು ಮಾಡುತ್ತಿರುವ ಭಾಷಣವಾಗಿದೆ. ನ.2ರಂದು ಪ್ರಸಾರವಾಗಿದ್ದ ಎರಡನೆ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಕೆಲ ವರು ಮಾದಕ ದ್ರವ್ಯ ಚಟದ ಕುರಿತು ಮಾತನಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. [ಮೂರನೇ ಕಂತಿನ ಭಾಷಣ ಕೇಳಲು ಇಲ್ಲಿ ಕ್ಲಿಕ್ಕಿಸಿ]

. ತದನಂತರ ಪ್ರಸ್ತುತ ವಿಷಯದ ಬಗ್ಗೆ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಹಂಚುವಂತೆ ಜನರಲ್ಲಿ ಪ್ರಧಾನಿ ಕೋರಿ ಕೊಂಡಿದ್ದರು. ''ಹಲವು ಜನರು ಕಣ್ಣು ತೆರೆಸುವಂತಹ ಹಾಗೂ ಪ್ರಯೋಜನಕಾರಿಯಾದ ತಮ್ಮ ಕಲ್ಪನೆಗಳು, ಅಭಿಪ್ರಾಯಗಳು ಹಾಗೂ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. ಜನರ ಕೊಡುಗೆಗಳಿಗಾಗಿ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವೀಟ್ ಮೂಲಕ ಮೋದಿ ತಿಳಿಸಿದ್ದರು. (ಐಎಎನ್ಎಸ್)

English summary
Prime Minister Narendra Modi on Sunday said in his monthly 'Mann Ki Baat' programme on radio(AIR) drug abuse brings "darkness, destruction and devastation" and underlined the need to fight the habit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X