ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿನಂತೆ ಗೊಂಬೆಗೂ ಚಿಕಿತ್ಸೆ!: ಈ ಐಡಿಯಾ ಸಕ್ಸಸ್

|
Google Oneindia Kannada News

ನವದೆಹಲಿ, ಆಗಸ್ಟ್ 31: ಪುಟಾಣಿ ಮಗುವಿನ ಎರಡೂ ಕಾಲುಗಳಿಗೆ ಸುತ್ತಿದ ಬಿಳಿ ಬ್ಯಾಂಡೇಜ್. ಆ ಕಾಲುಗಳು ಅಲುಗಾಡದಂತೆ ನೋಡಿಕೊಳ್ಳಲು ಮೇಲೆತ್ತಿ ಕಟ್ಟಿದ್ದಾರೆ. ಪಕ್ಕದಲ್ಲಿ ಆ ಮಗುವಿನಷ್ಟೇ ಮುದ್ದಾದ ಗೊಂಬೆ. ಆ ಗೊಂಬೆಯ ಕಾಲುಗಳನ್ನೂ ಹಾಗೆಯೇ ಮೇಲೆ ಕಟ್ಟಿ ಅದೇ ಹಾಸಿಗೆ ಮೇಲೆ ಮಲಗಿಸಿದ್ದಾರೆ.

ನೋಡಿದ ಕೂಡಲೆ ಗಮನ ಸೆಳೆಯುವ ಈ ಚಿತ್ರ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರಗಳು, ಅಬ್ಬಾ! ಎಷ್ಟೊಂದು ಮುದ್ದು ಎನಿಸಿದರೂ, ಆ ಮಗುವಿನ ಕಥೆ ಕೇಳಿದಾಗ ಮನಸ್ಸು ಭಾರವೆನಿಸುತ್ತದೆ.

ಅದೇ ಜಾಗ, ಅದೇ ಮೊಸಳೆ: 15 ವರ್ಷದ ಬಳಿಕ ಸ್ಟೀವ್ ಇರ್ವಿನ್ ಮಗನ ಮರುಸೃಷ್ಟಿಯ ಸಾಹಸಅದೇ ಜಾಗ, ಅದೇ ಮೊಸಳೆ: 15 ವರ್ಷದ ಬಳಿಕ ಸ್ಟೀವ್ ಇರ್ವಿನ್ ಮಗನ ಮರುಸೃಷ್ಟಿಯ ಸಾಹಸ

ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಮಗುವಿನ ಹೆಸರು ಜಿಕ್ರಾ ಮಲಿಕ್. 11 ತಿಂಗಳ ಈ ಪುಟಾಣಿ ಬಾಲೆ ಆಗಸ್ಟ್ 17ರಂದು ದೆಹಲಿ ಗೇಟ್‌ನ ತನ್ನ ಮನೆಯಲ್ಲಿ ಹಾಸಿಗೆಯಿಂದ ಕೆಳಕ್ಕುರುಳಿ ಬಿದ್ದ ಕಾರಣ ಎರಡೂ ಕಾಲುಗಳು ಮುರಿದುಹೋಗಿವೆ. ಕೂಡಲೇ ಆಸ್ಪತ್ರೆಗೆ ಆಕೆಯನ್ನು ಪೋಷಕರು ಹೊತ್ತುಕೊಂಡು ಬಂದರೂ, ಆ ಕಾಲುಗಳನ್ನು ಸೂಕ್ತ ಜಾಗದಲ್ಲಿ ಕೂರಿಸಲು ವೈದ್ಯರು ಹರಸಾಹಸ ಪಡಬೇಕಾಯಿತು.

'ಸ್ಟಡಿ ಪುಲ್ಲಿಂಗ್' ಪದ್ಧತಿ

'ಸ್ಟಡಿ ಪುಲ್ಲಿಂಗ್' ಪದ್ಧತಿ

ಮಗುವಿಗೆ ತೀವ್ರ ನೋವಾಗುತ್ತಿದ್ದರಿಂದ ಚಿಕಿತ್ಸೆ ಕೊಡುವುದು ಸುಲಭವಾಗಿರಲಿಲ್ಲ. ವೈದ್ಯರು ಪ್ರಯತ್ನ ಮುಂದುವರಿಸಿದ್ದಷ್ಟೇ ಆಕೆಯ ಹಠ, ಅಳು ಕೂಡ ಜೋರಾಗುತ್ತಿತ್ತು. ಕೊನೆಗೆ ಅವರು ಎರಡು ವರ್ಷದೊಳಗಿನ ಮಕ್ಕಳ ಚಿಕಿತ್ಸೆಗೆ ಬಳಸುವ 'ಸ್ಟಡಿ ಪುಲ್ಲಿಂಗ್' ಪದ್ಧತಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರು. 15 ಕೆಜಿಗಿಂತ ಕಡಿಮೆ ತೂಕದ ಮಕ್ಕಳಿಗೆ ತೊಡೆ ಮೂಳೆಯ ಮುರಿತಕ್ಕೆ ನೀಡುವ ಚಿಕಿತ್ಸೆಯ ಪದ್ಧತಿ ಇದು. ಸೊಂಟದ ಭಾಗ ಜಾರಿದ್ದರೆ ಸರ್ಜರಿ ಮಾಡುವುದಕ್ಕೂ ಮುನ್ನ ಸ್ನಾಯು ಮತ್ತು ಮಾಂಸಖಂಡಗಳನ್ನು ಸ್ಥಿರಗೊಳಿಸಲು ನಡೆಸುವ ತಂತ್ರವಿದು.

ಅಮ್ಮನ ಐಡಿಯಾ ಸೂಪರ್

ಅಮ್ಮನ ಐಡಿಯಾ ಸೂಪರ್

''ಮನೆಯಲ್ಲಿದ್ದಾಗಲೂ ಆಕೆ ಒಂದು ಜಾಗದಲ್ಲಿ ಕೂರುತ್ತಿರಲಿಲ್ಲ. ಸದಾ ಚಲಿಸುತ್ತಲೇ ಇರುತ್ತಿದ್ದಳು. ಐದು ನಿಮಿಷ ಒಂದೇ ಕಡೆ ಕೂರಿಸುವುದು ಸಾಧ್ಯವೇ ಇರಲಿಲ್ಲ. ಆಸ್ಪತ್ರೆಯಲ್ಲಿ ಮೊದಲ ದಿನ ಹಾಸಿಗೆ ಮೇಲೆ ಮಲಗಲೂ ಸಿದ್ಧಳಿರಲಿಲ್ಲ. ಅಲ್ಲಿಯೂ ಚಲಿಸುತ್ತಿದ್ದಳು. ಬೇಗ ಚೇತರಿಕೆಯಾಗಬೇಕೆಂದರೆ ಆಕೆಯ ಕಾಲುಗಳನ್ನು ನೇರವಾಗಿ ಹಿಡಿದಿರಿಸಬೇಕು ಎಂದು ವೈದ್ಯರು ಹೇಳಿದ್ದರು. ಕೊನೆಗೆ ಉಪಾಯ ಮಾಡಿ ಆಕೆಯ ಮೆಚ್ಚಿನ ಗೊಂಬೆಯನ್ನು ಆಸ್ಪತ್ರೆಗೆ ತರುವಂತೆ ಪತಿಗೆ ಹೇಳಿದೆ. ಜಿಕ್ರಾ ಮಲಗಿದಂತೆಯೇ ಆಕೆಯ ಗೊಂಬೆ 'ಪರಿ'ಯನ್ನೂ ಇರಿಸುವ ಆಲೋಚನೆ ಮಾಡಿದೆವು. ಅದು ಯಶಸ್ವಿಯೂ ಆಯ್ತು'' ಎಂದು ಜಿಕ್ರಾಳ ತಾಯಿ ಫರೀನ್ ಹೇಳಿದ್ದಾರೆ.

ಹಸಿದವರಿಗೆ ಆಹಾರ ಕೊಡಲು ಕೆಲಸವನ್ನೇ ಬಿಟ್ಟ, ವಿಶ್ವದಾಖಲೆ ಬರೆದ: ಮಾನವೀಯ ವರದಿಹಸಿದವರಿಗೆ ಆಹಾರ ಕೊಡಲು ಕೆಲಸವನ್ನೇ ಬಿಟ್ಟ, ವಿಶ್ವದಾಖಲೆ ಬರೆದ: ಮಾನವೀಯ ವರದಿ

'ಗೊಂಬೆಯೊಂದಿಗಿರುವ ಬಾಲೆ'

'ಗೊಂಬೆಯೊಂದಿಗಿರುವ ಬಾಲೆ'

ಜಿಕ್ರಾ ಮಲಗಿರುವ ವಾರ್ಡ್‌ಅನ್ನು ಈಗ 'ಗೊಂಬೆಯೊಂದಿಗಿರುವ ಬಾಲೆ' ಎಂದು ಕರೆಯಲಾಗುತ್ತಿದೆ. ಎರಡು ವಾರದಿಂದ ಆಕೆ ಈ ವಾರ್ಡ್‌ನಲ್ಲಿಯೇ ಇದ್ದಾಳೆ. ಆಕೆ ಚೇತರಿಸಿಕೊಳ್ಳಲು ಇನ್ನೂ ಒಂದು ವಾರ ಬೇಕು.

''ಆಕೆಗೆ ತನ್ನ ಪಕ್ಕದಲ್ಲಿಯೇ ತನ್ನಂತೆ ಯಾರ ಮಲಗಿದ್ದಾರೆ ಎಂದೆನಿಸುತ್ತಿದೆ. ಗೊಂಬೆಯನ್ನು ತನ್ನ ಆಪ್ತ ಸ್ನೇಹಿತೆಯೆಂದು ಆಕೆ ಭಾವಿಸಿದ್ದರಿಂದ ಮನೆಯಲ್ಲಿಯೂ ಆ ಗೊಂಬೆಯನ್ನು ಹಾಗೆಯೇ ಇರಿಸುತ್ತಿದ್ದೆವು'' ಎಂದು ಓಖ್ಲಾ ಮಂಡಿ ಪ್ರದೇಶದಲ್ಲಿ ತರಕಾರಿ ಅಂಗಡಿ ನಡೆಸುತ್ತಿರುವ ಆಕೆಯ ತಂದೆ ಮೊಹಮದ್ ಶೆಹಜಾದ್ ಹೇಳುತ್ತಾರೆ.

ವೈದ್ಯರಿಗೂ ಅಚ್ಚರಿ ಮೂಡಿಸಿದ ಮಗು

ವೈದ್ಯರಿಗೂ ಅಚ್ಚರಿ ಮೂಡಿಸಿದ ಮಗು

ತನ್ನ ಪಕ್ಕದಲ್ಲಿ ಗೊಂಬೆಯನ್ನು ಮಲಗಿಸಿದ ಬಳಿಕ ಮಗು ಕಿಂಚಿತ್ತೂ ಹಠ ಮಾಡದೆ ಮಲಗಿರುವುದು ವೈದ್ಯರಿಗೂ ಅಚ್ಚರಿ ಮೂಡಿಸಿದೆ. ''ಆಸ್ಪತ್ರೆಗೆ ದಾಖಲಿಸಿದ ದಿನದಿಂದಲೂ ಆ ಮಗು ಸತತವಾಗಿ ಅಳುತ್ತಿತ್ತು. ನಾವು ನೋವು ನಿವಾರಕಗಳನ್ನು ಪ್ರಯತ್ನಿಸಿದೆವು, ಚಾಕೊಲೇಟ್‌ಗಳನ್ನು ತಿನ್ನಿಸಿದೆವು, ಆದರೆ ಯಾವುದೂ ಕೆಲಸ ಮಾಡಲಿಲ್ಲ. ಒಂದು ಗಂಟೆ ಕೂಡ ಆಕೆ ಹಾಗೆ ಮಲಗುತ್ತಿರಲಿಲ್ಲ. ಈ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಹಲವು ದಿನಗಳವರೆಗೂ ಆಕೆಯನ್ನು ಅದೇ ಸ್ಥಿತಿಯಲ್ಲಿ ಇರಿಸಬೇಕಿತ್ತು'' ಆಸ್ಪತ್ರೆಯ ಮೂಳೆ ವಿಭಾಗದ ತಜ್ಞ ಡಾ. ಅಜಯ್ ಗುಪ್ತಾ ಹೇಳಿದ್ದಾರೆ.

English summary
Doctors in Delhi Lok Nayak hospital plastered and hanged a dolls leg in a rope to treat 11 month old baby to treat like the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X